ದಾವಣಗೆರೆ:ದಾವಣಗೆರೆ ಮಹಾ ನಗರಪಾಲಿಕೆ ವ್ಯಾಪ್ತಿಯ 33(ಮೂವತ್ಮೂರ)ನೇ ವಾರ್ಡಿನಲ್ಲಿ ಸಾರ್ವಜನಿಕರ ವಿಶ್ರಾಂತಿಗಾಗಿ ಒಂದು ಪಾರ್ಕ್ ಇದೆ.ಈ ಪಾರ್ಕಿಗೆ ಬಂದುಹೋಗುವವರಿಗಾಗಿ ಪಾರ್ಕಿಗೆ ಹತ್ತಿಕೊಂಡಂತೆ ಅಂದಾಜು 20*80ಅಡಿಗಳಷ್ಟು ಜಾಗವನ್ನು ವಾಹನ ನಿಲ್ದಾಣಕ್ಕಾಗಿ ಬಿಟ್ಟಿದ್ದಾರೆ.ಈ ಭಾಗದ ಸಾರ್ವಜನಿಕರು ವೃದ್ಧರು,ಮಕ್ಕಳು,ಮಹಿಳೆಯರು ಪಾರ್ಕಿಗೆ ಬಂದು ಹೋಗುತ್ತಾರೆ.ಸಾರ್ವಜನಿಕರು ಪಾರ್ಕ ಒಳಗೆ ಹೋಗುವಾಗ ತಮ್ಮ ವಾಹನಗಳನ್ನು ಪಾರ್ಕಗೇಟ್ ಹತ್ತಿರ ನಿಲ್ಲಿಸಿ ಹೋಗುತ್ತಾರೆ.ಇದು ಇಂದು ನಿನ್ನೆಯವಿಷಯವಲ್ಲಾ.ಮೊದಲಿನಿಂದಲೂ ಹೀಗೇ ಚಾಲ್ತಿಯಲ್ಲಿದೆ.
ಇದೇ ಪಾರ್ಕ್ ಹತ್ತಿರ ಪ್ರಭಾವಿಯೊಬ್ಬರ ಖಾಸಗಿ ವಿದ್ಯಾಸಂಸ್ಥೆ ಇರುತ್ತದೆ.ಈ ಪ್ರಭಾವಿ ವಿದ್ಯಾಸಂಸ್ಥೆಯ ವರು ಇದ್ದಕ್ಕಿದ್ದಂತೆ ಪಾರ್ಕಿಗೆ ಬಂದುಹೋಗುವ ಸಾರ್ವಜನಿಕರ ವಾಹನ ನಿಲ್ದಾಣವನ್ನು ಅತೀಕ್ರಮಣ ಮಾಡಿಕೊಂಡು ಗೇಟ್ ಅಳವಡಿಸಿಕೊಂಡು ಪಾರ್ಕಿಗೆ ಬರುವ ಸಾರ್ವಜನಿಕರ ವಾಹನ ನಿಲ್ದಾನ ಅಕ್ರಮಿಸಿಕೊಂಡಿದ್ದಾರೆಂದು ಆಪಾದಿಸಿದ್ದಾರೆ. ಈ ಭಾಗದ ಜನರು ತೊಂದರೆ ಅನುಭವಿಸುವಂತಾಗಿದೆ.ಈತ ಪ್ರಭಾವಿಯಾಗಿದ್ದು ಈತನ ಎದುರು ಧ್ವನಿ ಎತ್ತಲು ಜನರು ಹೆದರುವುದರಿಂದ ಈಗಾಗಲೇ ಪಾಲಿಕೆ ಆಯುಕ್ತರಾದ ರೇಣುಕಮ್ಮ ನವರಿಗೆ ಮತ್ತು ಎ.ಆರ್.ಓ.ಸುನಿಲ್ ರವರಿಗೆ ಮತ್ತು ಸ್ಥಳಿಯ ಪಾಲಿಕೆ ಸದಸ್ಯರಾದ ಶ್ರೀ ಬಿಎಸ್.ವಿರೇಶ್ ರವರ ಗಮನಕ್ಕೂ ತರಲಾಗಿದೆ.ಆದರೂ ಸಹ ಆತ ಪ್ರಭಾವಿ ಇರುವುದರಿಂದ ಈ ಅಧಿಕಾರಿವರ್ಗ ಆ ಕಬಳಿಕೆ ಜಾಗವನ್ನು ತೆರುವು ಗೊಳಿಸಲು ಹಿಂಜರಿಯುತಿದ್ದಾರೆ.
ಕೂಡಲೇ ಮೇಲಾಧಿಕಾರಿಗಳು ಇತ್ತ ಗಮನಹರಿಸಿ ಈ ಸಾರ್ವಜನಿಕ ಸ್ಥಳವನ್ನು ಪಾರ್ಕಿಗೆ ಬರುವ ಸಾರ್ವಜನಿಕರ ವಾಹನ ನಿಲ್ಣಾಣಕ್ಕೆ ಮೀಸಲಿಡಬೇಕು.ಇಲ್ಲವೆ ಈ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಅಭಾವ ಇದ್ದು ಈ ಜಾಗದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು.ಸಾರ್ವಜನಿಕರ ಸ್ವತ್ತು ಪ್ರಭಾವಿಗಳ ಅಕ್ರಮಣದಿಂದ ತೆರವುಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಬಳಕೆಮಾಡಬೇಕು.
ಅಧಿಕಾರಿಗಳು ಕೂಡಲೇ ತೆರವುಗೊಳಿಸಬೇಕು.ತಡವಾದರೆ ಅದರಲ್ಲಿ ಭ್ರಷ್ಟ ಅಧಿಕಾರಿ ಮತ್ತು ಜನಪ್ರತಿನಿಧಿಗಳ ಪಾಲು ಇದೆ ಎಂದು ಯಾವುದೇ ಅನುಮಾನ ಪಡಬೇಕಾಗಿಲ್ಲವೆಂದು ಸಾರ್ವಜನಿಕರು ಎದ್ದು ಅಧಿಕಾರಿಗಳ ಬಳಿ ಬಾಗಿಲಿಗೆ ಬರುವ ಮೊದಲು ಸರಿಮಾಡಬೇಕೆಂದು ಈ ಭಾಗದ ಸಾರ್ವಜನಿಕರ ಒತ್ತಾಯವಾಗಿದೆ ಎಂದು ನಿವೃತ್ತ ಜೀವವೀಮಾನಿಗಮದ ಶ್ರೀ ರುದ್ರೇಶ್ ರವರು ಈ ಮೂಲಕ ಒತ್ತಾಯ ಪಡಿಸಿದ್ದಾರೆ.