ಗ್ರಾಮೀಣ ಪ್ರದೇಶದಲ್ಲಿನ ಬಡವರನ್ನು ಕೃಷಿ ಕೂಲಿಕಾರರ ಸಂಘದ ಜೊತೆ ಸೇರುವುದರಿಂದಲೇ ಕಾರ್ಪೊರೇಟ್- ಕೋಮುವಾದಿ ಮೈತ್ರಿಯನ್ನು ಎದುರಿಸಲು ಸಾಧ್ಯವೆಂದು ಸಿಪಿಐಎಂ ಪಕ್ಷದ ಪೊಲಿಟ್ ಬ್ಯೂರೋ ಸದಸ್ಯ ಹಾಗು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಎ ವಿಜಯ ರಾಘವನ್ ಕರೆ ನೀಡಿದರು.
ತಮಿಳುನಾಡು ರಾಜ್ಯದ ತಿರಚಿರಾಪಳ್ಳಿ ಯಲ್ಲಿ ಅಖಿಲ ಭಾರತ ಜನರಲ್ ಕೌನ್ಸಿಲ್ ಸಭೆ ಜುಲೈ 14, 15 – 2024 ರಂದು ಜರುಗುತ್ತಿದೆ. ಈ ಸಭೆಯ ಧ್ವಜಾರೋಹಣವನ್ನು ಈ ವಿಜಯ ರಾಘವನ್ ನೆರವೇರಿಸಿದರು ನಂತರ ನಡೆದ ಉದ್ಘಾಟನಾ ಭಾಷಣದಲ್ಲಿ ಕಾರ್ಪೊರೇಟ್ ಶಕ್ತಿಗಳ ಪ್ರಭಾವದಿಂದ ಕೃಷಿ ರಂಗದಲ್ಲಿ ಬರುತ್ತಿರುವ ಬದಲಾವಣೆಗಳು ಗ್ರಾಮೀಣ ಬಡವರ ಜೀವನಗಳನ್ನು ಬರ್ಬರಗೊಳಿಸುತ್ತಿದೆ ಎಂದರು. ಕೃಷಿ ಕೆಲಸಗಳ ಸಂದರ್ಭದಲ್ಲಿ ಕೃಷಿ ಕೂಲಿಕಾರರಾಗಿ ಕೃಷಿ ಇಲ್ಲದ ಸಂದರ್ಭದಲ್ಲಿ ಕೃಷಿಯೇತರ ಕೆಲಸಗಳು ಮಾಡುತ್ತಿರುವ ಗ್ರಾಮೀಣ ಬಡವರು ತಮ್ಮ ಜೀವನದ ಅವಶ್ಯಕತೆಗಳು ಪೂರೈಸಲು ಸಾಧ್ಯವಾಗದೆ ಸಂಕಷ್ಟಕರ ಜೀವನಗಳನ್ನು ನಡೆಸುತ್ತಿದ್ದಾರೆ. ಆಳುವ ವರ್ಗಗಳು ಸಾಮಾನ್ಯರನ್ನು ಲೂಟಿ ಹೊಡೆದು ಶ್ರೀಮಂತರಿಗೆ ನೀಡುವ ವಿಧಾನಗಳನ್ನು ಅನುಸರಿಸುತ್ತಿದ್ದಾರೆ ಎಂದರು. ಇದರಿಂದಾಗಿ ಭಾರತ ಹಸಿವಿನ ಸೂಚ್ಯಂಕದಲ್ಲಿ 116ನೇ ಸ್ಥಾನಕ್ಕೆ ತಲುಪಿದೆ 74% ಜನರಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ ಪೋಷಕಾಂಶಗಳು ಸಿಗದೇ ಮಹಿಳೆಯರು, ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ನಿರಂತರ ಬೆಲೆ ಏರಿಕೆ ಆಗುತ್ತಿದೆ ಆದರೆ ಕನಿಷ್ಠ ವೇತನಗಳು ಏರಿಕೆಯಾಗುತ್ತಿಲ್ಲ ಏರುತ್ತಿರುವ ಜೀವನ ಖರ್ಚುಗಳು ಕುಟುಂಬ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದ ಸ್ಥಿತಿಯಲ್ಲಿ ಗ್ರಾಮೀಣ ಬಡವರು ಜೀವನವು ಧಾರಣವಾಗಿ ಬದಲಾಗುತ್ತಿದೆ ಎಂದರು.
ಹಲವಾರು ಹೋರಾಟಗಳ ಪರಿಣಾಮವಾಗಿ ಸಾಧಿಸಿಕೊಂಡ ಉದ್ಯೋಗ ಖಾತ್ರಿ ಕಾಯ್ದೆಯನ್ನು ಕೇಂದ್ರದ ಮೋದಿ ಸರ್ಕಾರ ಅನುದಾನ ಕಡತಗೊಳಿಸಿದೆ ಆ ಮೂಲಕ ಕಾಯ್ದೆಯನ್ನು ಬಲಹೀನಗೊಳಿಸಲು ಹೊರಟಿದೆ. ಉದ್ಯೋಗ ಖಾತ್ರಿ ಕಾಯ್ದೆಯಡಿ ವರ್ಷಕ್ಕೆ 100 ದಿನಗಳ ಕೆಲಸ ಕಲ್ಪಿಸುವ ಬದಲು ಕೇವಲ 46 ದಿನಗಳು ಕಲ್ಪಿಸಲು ಕಷ್ಟಕರವಾಗಿದೆ ಇದು ಬಡವರಿಗೆ ತೀವ್ರ ಸಮಸ್ಯೆಯಾಗಿದೆ.
ಆಳುವ ವರ್ಗದ ಕಾರ್ಪೊರೇಟ್ ಪರ ವಿಧಾನಗಳಿಂದಾಗಿ ಕೃಷಿರಂಗ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ಬಡ ರೈತರು, ಕೃಷಿ ಕೂಲಿಕಾರರು, ಗ್ರಾಮೀಣ ಬಡವರು ಎಲ್ಲರೂ ಸೇರಿ ಐಕ್ಯ ಹೋರಾಟವನ್ನು ನಡೆಸಬೇಕು ಎಂದರು.
ಕೃಷಿ ರಂಗದಲ್ಲಿ ಬಂಡವಾಳ ಶಾಹಿ ವಿಧಾನಗಳು ನಿರಂತರವಾಗಿ ಗಟ್ಟಿಯಾಗುತ್ತಿವೆ. ಮೂರು ದಶಕಗಳ ಹಿಂದೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಹೊಸ ಆರ್ಥಿಕ ವಿಧಾನಗಳನ್ನು ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಅತ್ಯಂತ ವೇಗವಾಗಿ ಜಾರಿಗೊಳಿಸುತ್ತಿದೆ ಕೃಷಿ ರಂಗಕ್ಕೆ ಸಂಬಂಧಿಸಿದಂತೆ ಜಾರಿಗೆ ತಂದ ಮೂರು ಕಪ್ಪು ಕೃಷಿ ಕಾಯ್ದೆಗಳನ್ನು ಜನ ಚಳುವಳಿಯಿಂದಾಗಿ ತಾತ್ಕಾಲಿಕವಾಗಿ ಹಿಂದೆ ತಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಹೇಳಿದರು. ಬಿಜೆಪಿ ಅನುಸರಿಸುತ್ತಿರುವ ಕಾರ್ಪೊರೇಟ್- ಕೋಮುವಾದಿ ಮೈತ್ರಿ ವಿಧಾನಗಳಿಗೆ ವಿರುದ್ಧ ಜನತೆ ಪ್ರತಿಭಟನೆಗಳಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಈ ವಿಧಾನಗಳನ್ನು ಜಾರಿಗೆ ತರುತ್ತಿರುವ ಬಿಜೆಪಿಗೆ ಮತದಾರ ಬುದ್ಧಿ ಕಲಿಸಿದ್ದಾರೆ ಎಂದರು.
ಬಿಜೆಪಿ ತನ್ನ ಹಿಂದುತ್ವ ಅಜೆಂಡಾದೊಂದಿಗೆ ಉತ್ತರ ಭಾರತದ ರಾಜ್ಯಗಳಲ್ಲಿ ಸೃಷ್ಟಿಸುತ್ತಿದ್ದ ಅರಾಜಕತೆಯನ್ನು ಸಹಿಸುವುದಿಲ್ಲ ಎಂದು ಆಯಾ ರಾಜ್ಯಗಳ ಜನತೆ ನಿರೂಪಿಸಿದ್ದಾರೆ ಬಿಜೆಪಿಗೆ ವಿರುದ್ಧ ಅನೇಕ ರಾಜ್ಯಗಳಲ್ಲಿ ಮತ ನೀಡಿದ್ದಾರೆ ಎಂದು ಹೇಳಿದರು.
ಕೃಷಿ ಕೂಲಿಕಾರರ ಸಂಘ ಇದುವರೆಗೂ ಪ್ರಧಾನವಾಗಿ ಕೃಷಿ ಕೂಲಿಕಾರರನ್ನು ಸಂಘಟಿಸುತ್ತಿತ್ತು ಆದರೆ ಮುಂಬರುವ ದಿನಗಳಲ್ಲಿ ಇವರೊಂದಿಗೆ ಗ್ರಾಮೀಣ ಬಡವರನ್ನು ಆಯ್ಕೆಗೊಳಿಸುವ ಹೋರಾಟಗಳನ್ನು ನಡೆಸಬೇಕು ಎಂದು ಕರೆ ನೀಡಿದರು.
ಈ ಅಖಿಲ ಭಾರತ ಜನರಲ್ ಕೌನ್ಸಿಲ್ ಸಭೆಯಲ್ಲಿ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಬಿ ವೆಂಕಟ್ ಕಾರ್ಯಕ್ರಮಗಳ ವರದಿ ಹಾಗೂ ಮುಂದಿನ ಕರ್ತವ್ಯಗಳನ್ನು ಮಂಡಿಸಿದರು ಇದರ ಮೇಲೆ ವಿವಿಧ ರಾಜ್ಯಗಳಿಂದ ಹಾಜರಾದ ಸಂಗಾತಿಗಳು ಚರ್ಚಿಸಿದರು ಈ ಸಭೆಯಲ್ಲಿ ರಾಜ್ಯ ಅಧ್ಯಕ್ಷ ಪುಟ್ಟ ಮಾಧು, ಪ್ರಧಾನ ಕಾರ್ಯದರ್ಶಿ, ಚಂದ್ರಪ್ಪ ಹೊಸಕೆರೆ,ಮುನಿವೆಂಟಪ್ಪ ಎಂಪಿ, ಮಲ್ಲಮ್ಮ ಕೋಡ್ಲಿ,ದಾವುಲ್ ಸಾಬ್ ನಡಾಫ್, ಬಸವರಾಜು, ವೆಂಕಟೇಶ್ ಕೋಣೆ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here