ರಾಯಚೂರ:ಮುದಗಲ್ ಪಟ್ಟಣದ ಹಿರಿಯ ಪತ್ರಕರ್ತರಾದ ಡಾ.ಶರಣಯ್ಯ ಬಿ.ಒಡೆಯರ್ ಹಾಗೂ ಸ್ಥಳಿಯ ಹಳೆಪೇಟೆಯ ಶಿಲ್ಪಕಲಾವಿದ ನೂರ ಮಹ್ಮದ ಸಂತ್ರಾಜ್ ರವರು ‘ಹೆಣ್ಣು ಜಗದ ಕಣ್ಣು’ ಸಾಹಿತ್ಯ
ವೇದಿಕೆ ಪ್ರತಿವರ್ಷ ನೀಡುವ ‘ಬಸವ ಭೂಷಣ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪತ್ರಿಕೋಧ್ಯಮ, ಮಾನವಿಯ ಮೌಲ್ಯ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಡಾ.ಶರಣಯ್ಯ ಬಿ. ಒಡೆಯರ್ ಮತ್ತು ಶಿಲ್ಪಕಲೆಯ ಮೂಲಕ ಅಂತರಾಜ್ಯದಲ್ಲಿ ಗುರುತಿಸಿಕೊಡಿರುವ ನೂರ ಮಹ್ಮದ ಸಂತ್ರಾಜ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕೊಪ್ಪಳದಲ್ಲಿ ಜು. 30ರಂದು ಜರುಗುವ 3ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀಗವಿಸಿದ್ದೇಶ್ವರ ಮಠದ ಶ್ರೀಗಳ ಸಾನಿದ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೇದಿಕೆ ಸಂಸ್ಥಾಪಕ ರಮೇಶ ನಾಯಕ ತಿಳಿಸಿದ್ದಾರೆ.