ವಿಜಯಪುರ: ಮಕ್ಕಳಿಂದ ಮಾದರಿ ಮತದಾನ ತಿಳುವಳಿಕೆ ಚಟುವಟಿಕೆಯನ್ನು ವಿಜಯಪುರ ನಗರದ ಜಲ ನಗರದಲ್ಲಿರುವ ಶ್ರೀ ಬಿಎಮ್ ಪಾಟೀಲ್ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿ ರಚಿಸುವುದರ ಉದ್ದೇಶದಿಂದ ವಿದ್ಯಾರ್ಥಿಗಳಲ್ಲಿ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಒಳ್ಳೆಯ ನಾಯಕರನ್ನು ಆಯ್ಕೆ ಮಾಡಲು ಮತದಾನವನ್ನು ಏರ್ಪಡಿಸಲಾಗಿತ್ತು. ‘ಮತದಾನವು ಜನತೆಯು ಯಾವುದಾದರೂ ವಿಷಯ ಅಥವಾ ಅಭ್ಯರ್ಥಿಗಳ ಬಗ್ಗೆ ತಮ್ಮ ನಿರ್ಣಯವನ್ನು ಸೂಚಿಸಲು ಅನುವು ಮಾಡಿಕೊಡುವ ಒಂದು ಪ್ರಕ್ರಿಯೆ ಜನತಂತ್ರಗಳವ್ಯವಸ್ತೆಯು ಚುನಾವಣೆಗಳಲ್ಲಿ ಮತದಾನ ಪ್ರಮುಖ ಅಂಗ ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಕರ್ತವ್ಯ’.ಆದ್ದರಿಂದ ಇಂದಿನ ಪ್ರಜೆಗಳೇ ನಾಳಿನ ನಾಗರಿಕರು, ಹಾಗೂ ನಾಯಕರೂ ಕೂಡ. ಆದ್ದರಿಂದ ಅವರಿಗೆ ತರಗತಿಯ ಪಾಠಗಳ ಜೊತೆಗೆ ಇಂತಹ ಚಟುವಟಿಕೆಗಳನ್ನು ಕಲಿಸುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ.
ಮತದಾನ ಎನ್ನುವುದು ನಮ್ಮ ಹಕ್ಕು ಎಂಬ ಜಾಗೃತಿಯನ್ನು ಮಕ್ಕಳಲ್ಲಿ ಮೂಡಿಸಲು ಇಲ್ಲಿನ ಶಿಕ್ಷಕರು ಪ್ರಯತ್ನಿಸಿದ್ದಾರೆ ಪ್ರಾಚಾರ್ಯರಾದ ಶ್ರೀಯುತ. ದರ್ಶನ್ ಹುನಗುಂದ ಅವರ ಅನುಮತಿಯೊಂದಿಗೆ ಅತ್ಯಂತ ಕ್ರಿಯಾಶೀಲರಾದ, ಶ್ರೀಯುತ. ಲುಕ್ಮಾನ್ ಮನಿಯಾರ್ ದೈಹಿಕ ಶಿಕ್ಷಕರು ಇವರ ಮಾರ್ಗದರ್ಶನದಲ್ಲಿ ಹಾಗೂ ಎಲ್ಲ ಶಿಕ್ಷಕ ವರ್ಗದವರ ಸಲಹೆಯಂತೆ ಮಕ್ಕಳು ಚುನಾವಣೆಗೆ ಪೂರ್ವ ತಯಾರಿ ಮಾಡಿಕೊಂಡಿದ್ದರು ಎರಡು ದಿನ ಮುಂಚಿತವಾಗಿ ಶಾಲೆಯ ಮುಖ್ಯಸ್ಥರಿಗೆ ನಾಮಿನೇಷನ್ ಸಲ್ಲಿಸಿ ಸರಳ ರೀತಿಯಲ್ಲಿ ಶಾಲೆಯ ಎಲ್ಲ ವರ್ಗಗಳಿಗೆ ತೆರಳಿ ಚುನಾವಣೆಗೆ ನಿಂತಿರುವ ವಿದ್ಯಾರ್ಥಿ ಅಭ್ಯರ್ಥಿಗಳು ಪ್ರಚಾರ ಮಾಡಿದರು.
ನಂತರ ಮತದಾನದ ದಿನ 6 ರಿಂದ 10ನೇವರ್ಗದ ಎಲ್ಲ ಮಕ್ಕಳು ಅತ್ಯಂತ ಹುರುಪಿನಿಂದ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಇಲ್ಲಿ ಚುನಾವಣಾ ಸಮಿತಿಯಿಂದ ಪೋಲಿಂಗ್ ಭೂತಗಳನ್ನುರಚಿಸಿ ಸಾರ್ವಜನಿಕ ಮತದಾನ ಮಾಡುವಂತೆ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಅತ್ಯಂತ ಶಾಂತ ರೀತಿಯಲ್ಲಿ ಗೌಪ್ಯ ಮತ ಚಲಾಯಿಸುವದರ ಜೊತೆಗೆ ವಿದ್ಯಾರ್ಥಿಗಳು ಮತದಾನದ ಮಹತ್ವ ತಿಳಿದುಕೊಂಡರು. “ಜೀವ ಉಳಿಸಿಕೊಳ್ಳಲು ರಕ್ತದಾನ ಎಷ್ಟು ಮುಖ್ಯವೋ, ಅಷ್ಟೇ ದೇಶದ ಉಜ್ವಲ ಭವಿಷ್ಯಕ್ಕಾಗಿ ಮತದಾನವು ಮುಖ್ಯವಾದದ್ದು” ಎಂಬುದನ್ನು ಮಕ್ಕಳು ತಿಳಿಯುವ ರೀತಿಯಲ್ಲಿ ಆಯೋಜಿಸ ಎಂಬುದನ್ನು ಮಕ್ಕಳು ತಿಳಿಯುವ ರೀತಿಯಲ್ಲಿ ಆಯೋಜಿಸಲಾಗಿತ್ತು. ಎಲ್ಲ ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳು ಆಗಾಗ ನಡೆಯುತ್ತಿದ್ದರೆ ಅಕ್ಷರದ ಜೊತೆಗೆ ದೇಶಾಭಿಮಾನವೂ ಬೆಳೆಯುತ್ತದೆ. ಹಾಗೂ ತಮ್ಮ ಹಕ್ಕು ಕರ್ತವ್ಯಗಳ ಬಗ್ಗೆಯೂ ಅರಿವು ಮೂಡುತ್ತದೆ ಎಂಬುದಕ್ಕೆ ಈ ಶಾಲಾ ಆವರಣದ ಮತದಾನವು ಮಾದರಿಯಾಗಿತ್ತು.
ಈ ಕಾರ್ಯಕ್ರಮ ಎಲ್ಲ ಶಿಕ್ಷಕರ ಸಹಕಾರದಿಂದ ಆಯೋಜನೆ ಮಾಡಲಾಗಿದ್ದು ಈ ಮಾದರಿ ಮತದಾನದಲ್ಲಿ ನೂರಕ್ಕೆ ನೂರರಷ್ಟು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಭಾಗವಹಿಸಿ ಮತದಾನವನ್ನು ಯಶಸ್ವಿಗೊಳಿಸಿದರು ಎಂದು ಶ್ರೀ ಮತಿ ಇಂದಿರಾ ಬಿದರಿಯವರು ವರದಿ ಮಾಡಿದ್ದಾರೆ.