ಬೆಂಗಳೂರು:ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವಸಂಪುಟ ಸಭೆಯನ್ನು ನಡೆಸಿ ಹಲವು ವಿಷಯಗಳನ್ನು ಚರ್ಚಿಸಿ ನಿರ್ಣಯಗಳನ್ನು ತಗೆದುಕೊಳ್ಳಲಾಗಿದೆ.
೧. (ಎ) ಮೆ|| ಭಾರತ್ ಚಿನ್ನದ ಗಣಿ ಸಂಸ್ಥೆಯ, ಕೆಜಿಎಫ್ ಕೋಲಾರ ಜಿಲ್ಲೆಯಲ್ಲಿ ನಿಷ್ಕಿçಯಗೊಂಡಿರುವ ಗಣಿಗುತ್ತಿಗೆ ಪ್ರದೇಶದಲ್ಲಿನ ೧೩ Tailing Dumps ಗಳ ೧೦೦೩.೪ ಎಕರೆ ಪ್ರದೇಶದಲ್ಲಿ (ಅನುಬಂಧ-೧) MMDR ಕಾಯ್ದೆಯ ಕಲಂ ೧೭ರಲಿ ಪ್ರದತ್ತವಾಗಿರುವ ವಿಶೇಷ ಅಧಿಕಾರವನ್ನು ಚಲಾಯಿಸಿ ಗಣಿಗುತ್ತಿಗೆ ಚಟುವಟಿಕೆಗಳನ್ನು ಮುಂದುವರೆಸಲು ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗೆ ಸಹಮತಿ ನೀಡಲು,
(b). ೨೦೨೨-೨೩ನೇ ಸಾಲಿನ ವರೆಗೆ ರೂ.೭೫,೨೪,೮೮,೦೨೫/ಗಳ ಹೊಣೆಗಾರಿಕೆ ಬಾಕಿ ಮೊತ್ತವನ್ನು ಹಾಗೂ ೨೦೨೩೨೪ನೇ ಸಾಲಿನ ಮೊತ್ತವನ್ನೂ ಸಹ ರಾಜ್ಯ ಸರ್ಕಾರಕ್ಕೆ ಪಾವತಿಸುವಂತೆ ಕೋಲಾರ ಜಿಲ್ಲೆಯ ಕೆಜಿಎಫ್ ನಲ್ಲಿರುವ ಮೆ|| ಭಾರತ್ ಚಿನ್ನದ ಗಣಿ ಸಂಸ್ಥೆಯವರಿಗೆ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಲು; ಅಥವಾ
೨. ಸಚಿವ ಸಂಪುಟ ತೆಗೆದುಕೊಳ್ಳುವ ಇತರೆ ಯಾವುದೇ ತೀರ್ಮಾನ:-
ಜನವರಿ-೨೬ರ ಗಣರಾಜ್ಯೋತ್ಸವ ದಿನದೊಂದಿಗೆ ಆಗಸ್ಟ್-೧೫ರ ಸ್ವಾತಂತ್ರ್ಯ ದಿನಾಚರಣೆಯಂದು ಕೂಡ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಶಾಲಾ ಕಾಲೇಜು ಸೇರಿದಂತೆ ಸಕಾರದ ವತಿಯಿಂದ ನಡೆಯುವ ಎಲ್ಲಾ ಸಮಾರಂಭಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರದೊಂದಿಗೆ ಸಂವಿಧಾನದ ಪಿತಾಮಹ ಭಾರತ ರತ್ನ ಡಾ|| ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಸಹ ಕಡ್ಡಾಯವಾಗಿ ಇಡುವಂತೆ ಸೂಚಿಸಲು ಹಾಗೂ ನವೆಂಬರ್-೨೬ರ ಸಂವಿಧಾನದ ದಿನಾಚರಣೆ ಸಂದರ್ಭದಲ್ಲಿ ಮೇಲ್ಕಂಡ ಎಲ್ಲಾ ಸಂಸ್ಥೆಗಳು, ಶಾಲಾ ಕಾಲೇಜು ಹಾಗೂ ಸರ್ಕಾರಿ ಕಛೇರಿಗಳಲ್ಲಿ ಭಾರತ ರತ್ನ ಡಾ|| ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಇರಿಸಲು ಸಚಿವ ಸಂಪುಟ ನಿರ್ಧರಿಸಿದೆ.

“ಮಾನ್ಯ ಉಪ ಲೋಕಾಯುಕ್ತ ರವರು ಕರ್ನಾಟಕ ಲೋಕಾಯುಕ್ತ ಕಾಯ್ದೆ, ೧೯೮೪ರ ಕಲಂ ೧೨(೩) ರಡಿ ನೀಡಿರುವ ವರದಿಯಲ್ಲಿ ಶ್ರೀಮತಿ ಗೀತಾ ಕೌಲಗಿ, ಕೆ.ಎ.ಎಸ್ (ಆಯ್ಕೆ ಶ್ರೇಣಿ) ಅಧಿಕಾರಿ, ಹಿಂದಿನ ತಹಶೀಲ್ದಾರ್, ರಾಮದುರ್ಗ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, ೧೯೫೭ರ ನಿಯಮ ೧೪-ಎ ರಡಿ ಇಲಾಖಾ ವಿಚಾರಣೆಯನ್ನು ಮಾನ್ಯ ಉಪ ಲೋಕಾಯುಕ್ತ ಇವರಿಗೆ ವಹಿಸುವಂತೆ ಮಾಡಿರುವ ಶಿಫಾರಸ್ಸನ್ನು ತಿರಸ್ಕರಿಸುವ ಬಗ್ಗೆ ಸಚಿವ ಸಂಪುಟ ಒಪ್ಪಿದೆ.
“ಮಾನ್ಯ ಉಪ ಲೋಕಾಯುಕ್ತ ಕರ್ನಾಟಕ ಲೋಕಾಯುಕ್ತ ಇವರು ಕರ್ನಾಟಕ ಲೋಕಾಯುಕ್ತ ಕಾಯ್ದೆ, ೧೯೮೪ರ ಕಲಂ ೧೨(೩)ರಡಿ ನೀಡಿರುವ ವರದಿಯಲ್ಲಿ ಶ್ರೀ ಸಿ.ಎಲ್. ಆನಂದ ಕೆ.ಎ.ಎಸ್ (ಹಿರಿಯ ಶ್ರೇಣಿ) ಅಧಿಕಾರಿ ಹಿಂದಿನ ಉಪ ವಿಭಾಗಾಧಿಕಾರಿ, ತುಮಕೂರು ಉಪವಿಭಾಗ, ತುಮಕೂರು ಜಿಲ್ಲೆ ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, ೧೯೫೭ರ ನಿಯಮ ೧೪-ಎ ರಡಿ ಇಲಾಖಾ ವಿಚಾರಣೆಯನ್ನು ಮಾನ್ಯ ಉಪ ಲೋಕಾಯುಕ್ತ ಇವರಿಗೆ ವಹಿಸುವಂತೆ ಮಾಡಿರುವ ಶಿಫಾರಸ್ಸನ್ನು ತಿರಸ್ಕರಿಸಲು ಸಚಿವ ಸಂಪುಟ ನಿರ್ಣಯಿಸಿದೆ. ಉನ್ನತ ಶಿಕ್ಷಣ ಇಲಾಖೆಯ ವಿಶ್ವವಿದ್ಯಾಲಯಗಳಲ್ಲಿ ರಾಜ್ಯದಲ್ಲಿ ಪಧಾನ ಮಂತಿ ಉಚ್ಛತರ್ ಶಿಕ್ಷಾ ಅಭಿಯಾನ (PM-USHA) ಯೋಜನೆಯನ್ನು ಆಯಾಯ ವಿಶ್ವವಿದ್ಯಾಲಯಗಳ ವಿಸ್ತೃತ ಯೋಜನಾ ವರದಿಯಲ್ಲಿ ಸೂಚಿಸಿರುವಂತೆ ಬೆಂಗಳೂರು ವಿಶ್ವವಿದ್ಯಾಲಯ (ಬೆಂಗಳೂರು), ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ (ಬೆಳಗಾವಿ), ಕರ್ನಾಟಕ ವಿಶ್ವವಿದ್ಯಾಲಯ (ಧಾರವಾಡ), ಮಂಗಳೂರು ವಿಶ್ವವಿದ್ಯಾಲಯ (ಮಂಗಳೂರು), ಕಲಬುರಗಿ ವಿಶ್ವವಿದ್ಯಾಲಯ (ಕಲಬುರಗಿ) ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ (ಬೆಂಗಳೂರು) ಗಳಲ್ಲಿ ಕೇಂದ್ರದ ವಂತಿಕೆ ರೂ.೧೬೭.೮೬ ಮತ್ತು ರಾಜ್ಯದ ವಂತಿಕೆ ರೂ. ೧೧೧.೯೧ ಕೋಟಿ ಒಟ್ಟು ರೂ.೨೭೯.೭೭ ಕೋಟಿಗಳ ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿದೆ. “ಶ್ರೀಮತಿ. ಎಂ. ಸಾವಿತ್ರಿ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು (ನಿವೃತ್ತ) ಚಿಕ್ಕಮಗಳೂರು ಇವರಿಗೆ ಮಾನ್ಯ ಉಪ ಲೋಕಾಯುಕ್ತರು ವಿಧಿಸಿರುವ ದಂಡನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಉಪಸಮಿತಿಯ ನಿರ್ಣಯದಂತೆ ದೋಷಮುಕ್ತೊಳಿಸಲು” ಸಚಿವ ಸಂಪುಟ ನಿರ್ಣಯಿಸಿದೆ. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಶತಮಾನೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ೨೦೨೪-೨೫ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಸಂಸ್ಥೆಯಡಿ ಬರುವ ಕೆ.ಆರ್.ಆಸ್ಪತ್ರೆಯ ಆವರಣದಲ್ಲಿ ನೂತನ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ರೂ.೭೫.೦೦ ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ. ರಾಜ್ಯದ ೪೬,೮೨೯ ಸರ್ಕಾರಿ ಶಾಲೆಗಳು ಮತ್ತು ೧೨೩೪ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಮತ್ತು ನೀರಿನ ಸೌಲಭ್ಯ ಯೋಜನೆಯನ್ನು ರೂ.೨೯.೧೯ ಕೋಟಿ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು (ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರೂ.೨೫.೮೫ ಕೋಟಿ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರೂ.೩.೩೪ ಕೋಟಿ) ಸಚಿವ ಸಂಪುಟ ನಿರ್ಧರಿಸಿದೆ. ರಾಜ್ಯದ ೮ ಜಿಲ್ಲೆಗಳಲ್ಲಿನ ೨೦೧ ಏಖಇIS ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೋಟರಿ ಇಂಟರ್‌ನ್ಯಾಷನಲ್ ಬೆಂಗಳೂರು ಇವರ ಸಹಭಾಗಿತ್ವದೊಂದಿಗೆ ಒಟ್ಟು ವೆಚ್ಚ ರೂ.೨.೩೭ ಕೋಟಿಗಳಲ್ಲಿ ರೋಟರಿ ಇಂಟರ್‌ನ್ಯಾಷನಲ್ ಸಂಸ್ಥೆ ವತಿಯಿಂದ ರೂ.೧.೮೭ ಕೋಟಿಗಳನ್ನು ಮತ್ತು ಏಖಇIS ಸಂಸ್ಥೆ ವತಿಯಿಂದ ರೂ.೪೯.೮೯ ಲಕ್ಷಗಳನ್ನು ಭರಿಸುವ ಷರತ್ತಿಗೊಳಪಟ್ಟು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿದೆ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕುಸನೂರ ವಸತಿ ಯೋಜನೆಯಲ್ಲಿ ಕುಸನೂರ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ವಸತಿ ಅಭಿವೃದ್ಧಿ ಯೋಜನೆಗೆ ೨೦೧೬-೧೭ ನೇ ಸಾಲಿನ ದರಪಟ್ಟಿಯಂತೆ ಅನುಮೋದನೆಯಾಗಿರುವ ರೂ.೯೪.೮೦ ಕೋಟಿಗಳ ಅಂದಾಜು ಮೊತ್ತವನ್ನು ಪ್ರಾಧಿಕಾರವು ೨೦೨೧೨೨ನೇ ಸಾಲಿನ ಏಕರೂಪ ದರಪಟ್ಟಿ ಮತ್ತು ಶೇ.೧೮% ರಷ್ಟು ಜಿಎಸ್‌ಟಿ ತೆರಿಗೆಯನ್ನು ಅಳವಡಿಸಿಕೊಂಡು ಸಲ್ಲಿಸಿರುವ ಪರಿಷ್ಕೃತ ಮೊತ್ತ ರೂ.೧೨೨.೪೦ ಕೋಟಿಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಕಣಬರ್ಗಿಯಲ್ಲಿ ಯೋಜನೆ ಸಂಖ್ಯೆ: ೬೧ ರಲ್ಲಿ ಒಟ್ಟು ೧೫೭ ಎಕರೆ ೧ ಗುಂಟೆ ೮ ಆಣೆ ಒಟ್ಟಾರೆ ಜಮೀನಿನಲ್ಲಿ ವಸತಿ ಬಡಾವಣೆಯನ್ನು ಅಭಿವೃದ್ಧಿ ಸಲುವಾಗಿ ಅನುಮೋದನೆಯಾದ ಒಟ್ಟು ೧೨೭.೭೧ ಕೋಟಿಗಳ ಮೊತ್ತದ ಅಂದಾಜು ಪತ್ರಿಕೆಯನ್ನು ೨೦೨೩-೨೪ ನೇ ಸಾಲಿನ ಚಾಲ್ತಿಯಲ್ಲಿರುವ ಪ್ರಕಟಿತ ಏಕರೂಪ ಅನುಸೂಚಿ ದರಗಳ ಅನ್ವಯ ಅಂದಾಜು ಪತ್ರಿಕೆಗಳನ್ನು ಪರಿಷ್ಕರಿಸಿರುವುದರಿಂದ ಪರಿಷ್ಕೃತ ಮೊತ್ತ ರೂ.೧೩೭.೭೦ ಕೋಟಿಗಳ ಅಂದಾಜು ಪತ್ರಿಕೆಗೆ ಷರತ್ತಿಗೊಳಪಟ್ಟು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿದೆ. ಕರ್ನಾಟಕ ರಾಜ್ಯ ಸ್ಥಳೀಯ ಸಂಸ್ಥೆಗಳಲ್ಲಿನ ನೀರಿನ ಬಳಕೆ ಶುಲ್ಕದ ಹಿಂದಿನ ಬಾಕಿ ಮೊತ್ತ ಬಡ್ಡಿ ಸಹಿತವಾಗಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಪ ್ರಸ್ತುತ ವಾರ್ಷಿಕ ಬೇಡಿಕೆ ಸಹಿತ ವಸೂಲಿ ಮಾಡುವುದು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಹುದಿನಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ಮತ್ತು ವಾರ್ಷಿಕ ಬೇಡಿಕೆಗಳಿಗನುಗುಣವಾಗಿ ಆಸ್ತಿಗಳಿಂದ ವಸೂಲಿ ಮಾಡಬೇಕಾದ ಆಸ್ತಿ ತೆರಿಗೆಯನ್ನು ಸಮರ್ಪಕ ವಸೂಲಿಗೆ ಸ್ಥಳೀಯ ಮಹಿಳಾ ಸ್ವಸಹಾಯ ಗುಂಪುಗಳ ಸೇವೆಯನ್ನು ಪಡೆಯುವುದು, ಸದರಿ ಸ್ವ-ಸಹಾಯ ಗುಂಪುಗಳಿಗೆ ವಸೂಲಾದ ಮೊತ್ತದಲ್ಲಿನ ಶೇ.೫ ರಷ್ಟನ್ನು ಪ್ರೊತ್ಸಾಹ ಧನ ರೂಪದಲ್ಲಿ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ. ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನವನ್ನು ಸಮಾವೇಶಗೊಳಿಸುವ ದಿನಾಂಕ, ಸ್ಥಳ ಮತ್ತು ವೇಳೆಯನ್ನು ನಿಗದಿಪಡಿಸಿ ಕರ್ನಾಟಕ ವಿಧಾನ ಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನವನ್ನು ಕರೆಯುವಂತೆ ಮಾನ್ಯ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.
:-ಸಚಿವ ಸಂಪುಟದ ನಿರ್ಣಯದ ಕುರಿತು ಹೆಚ್ಚುವರಿ ಕಾರ್ಯಸೂಚಿ:-
೧. ಒಳಾಡಳಿತ ಇಲಾಖೆಯಿಂದ ಅಡಿ Cr PC Act ೧೯೭೩ ಕಲಂ ೨(s) ರಡಿ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಒಟ್ಟು ೩೩ ಘಟಕಗಳನ್ನು ಅನುಬಂಧ-೩ ರಂತೆ ವಿಶೇಷ ಪೊಲೀಸ್ ಠಾಣೆಗಳೆಂದು ಘೋಷಣೆ ಮಾಡಲು ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ;
೨. ಸಮಾಜ ಕಲ್ಯಾಣ ಇಲಾಖೆ ಮತ್ತು ಗೃಹ ಇಲಾಖೆಗಳು ಎರಡೂ ಸೇರಿ ಸಚಿವ ಸಂಪುಟದ ಈ ತೀರ್ಮಾನ ಅನುಷ್ಠಾನಗೊಳಿಸಲು ಸಿಬ್ಬಂದಿ ಮತ್ತು ಇತರ ವಿವರಗಳನ್ನು ಅಂತಿಮಗೊಳಿಸಲು ಸೂಚಿಸಲಾಯಿತು.
ಅ) ಹಾಸನ ಜಿಲ್ಲೆ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪರಿಷ್ಕೃತ ಅಂದಾಜಿನಲ್ಲಿ ಅಳವಡಿಸಿಕೊಂಡಿರುವ ಮಾರ್ಪಟಿತ ಕಾಮಗಾರಿಗಳಿಗೆ ಮತ್ತು ಪರಿಷ್ಕೃತ ಮೊತ್ತ ರೂ.೫೯.೫೭ ಕೋಟಿಗಳ ಅಂದಾಜಿಗೆ ಅನುಮೋದನೆ ನೀಡಲು;
ಬ) ಸದರಿ ಕಾಮಗಾರಿಯ ಬಾಕಿ ಮೊತ್ತವನ್ನು
೨೦೨೪-೨೫ನೇ ಸಾಲಿನ ಆಯವ್ಯಯ ಲೆಕ್ಕಶೀರ್ಷಿಕೆ: ೪೨೦೨-೦೨-೧೦೪೧-೦೩-೩೮೬ ರಡಿ ಹಂಚಿಕೆಯಾಗಿರುವ ಅನುದಾನದಲ್ಲಿ ಬಿಡುಗಡೆಗೊಳಿಸಲು; ಸಚಿವ ಸಂಪುಟ ನಿರ್ಧರಿಸಿದೆ.
ಎ) ೫-ವರ್ಷದ ವಾರ್ಷಿಕ ನಿರ್ವಹಣಾ ಯೋಜನೆಯನ್ನು ಒಳಗೊಂಡಿರುವ ಬಾಹ್ಯ ನೆರವಿನೊಂದಿಗೆ ಪ್ರಗತಿ ಪಥ ಯೋಜನೆಯಡಿ ೭೧೧೦.೦೦ ಕಿ.ಮೀಗಳ ಗಾಮೀಣ ರಸ್ತೆಗಳ ಅಭಿವೃದ್ಧಿಯನ್ನು ರೂ.೫೧೯೦.೦೦ ಕೋಟಿಗಳಲ್ಲಿ ಅನುಷ್ಠಾನಗೊಳಿಸಲು (ರೂ.೩೬೩೩.೦೦ ಕೋಟಿಗಳ ಬಾಹ್ಯ ಸಹಾಯ ಮತ್ತು ರಾಜ್ಯದ ಕೊಡುಗೆ ರೂ.೧೫೫೭.೦೦ ಕೋಟಿಗಳ (ಟೆಂಡರ್ ಪೀಮಿಯಂ ಮೊತ್ತವನ್ನು ಹೊರತುಪಡಿಸಿ) ಬಿ) ಈ ಯೋಜನೆಯನ್ನು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಮುಖಾಂತರ ಆಯಾ ವಿಧಾನ ಸಭೆ ಕ್ಷೇತದಲ್ಲಿ ಸ್ಥಳೀಯ ಅಗತ್ಯತೆಗೆ ಅನುಗುಣವಾಗಿ ಕಾಮಗಾರಿಗಳನ್ನು ಸೂಕ್ತ ಮೊತ್ತದ ಪ್ಯಾಕೇಜ್‌ಗಳನ್ನಾಗಿ ಒಟ್ಟಾಗಿಸಿ ಕರ್ನಾಟಕ ಪಾರದರ್ಶನ ಅದಿನಿಯಮಗಳನ್ವಯ ಟೆಂಡರ್‌ಗಳನ್ನು ಇಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ಕರೆದು ಅನುಷ್ಟಾನಕ್ಕೆ ತರಲು; ಸಿ) ೨೦೨೪-೨೫ನೇ ಸಾಲಿನಲ್ಲಿ ಡಿ.ಪಿ.ಆರ್ ತಯಾರಿಕೆಗೆ ರೂ.೨೮.೦೦ ಕೋಟಿಗಳನ್ನು ನೀಡಲು ಆರ್ಥಿಕ ಇಲಾಖೆಯನ್ನು ಕೋರಲು; ಸಚಿವ ಸಂಪುಟ ಅನುಮೋದನೆ ನೀಡಿದೆ.
“Karnataka Land Grant Rules, 1969 ಹಾಗೂ PWD D-code ರ ನಿಯಮಗಳನ್ವಯ ನಿಯತಕಾಲಿಕವಾಗಿ ವಾರ್ಷಿಕ ಬಾಡಿಗೆಯನ್ನು ನಿಗದಿಪಡಿಸಿ, ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಗ್ರಾಮದಲ್ಲಿ ವೀರಶೈವ ವಿದ್ಯಾವರ್ಧಕ ಸಂಘ ಇವರು ನಡೆಸುತ್ತಿರುವ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಲೀಸ್ ನೀಡಲಾಗಿರುವ ಕರ್ನಾಟಕ ನೀರಾವರಿ ನಿಗಮದ ೨.೭೦ ಎಕರೆ ಜಾಗದ ಲೀಸ್ ಅವಧಿಯನ್ನು ದಿನಾಂಕ: ೦೧.೦೪.೨೦೨೩ ರಿಂದ ೩೧.೦೩.೨೦೫೩ ರವರೆಗೆ ವಿಸ್ತರಿಸಲು ಮತ್ತು ೨.೦೦ ಲಕ ್ಷ ರೂಪಾಯಿ ವಾರ್ಷಿಕ ಬಾಡಿಗೆ ನಿಗಧಿಪಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

LEAVE A REPLY

Please enter your comment!
Please enter your name here