ಬೆಂಗಳೂರು:ದಾವಣಗೆರೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ರವರು ಶ್ರೀಮಠಕ್ಕೆ ಭೇಟಿ ನೀಡಿ ಜಗದ್ಗುರುಗಳ ದರ್ಶನಾಶೀರ್ವಾದ ಪಡೆದು ಬೆಂಗಳೂರು ದಕ್ಷಿಣ ತಾಲ್ಲೂಕು ದೊಡ್ಡ ಆಲದಮರ ಮುಖ್ಯ ರಸ್ತೆ ಕೇತೋಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಶಾಖಾಮಠ ಕಟ್ಟಡದ ನಿರ್ಮಾಣಕ್ಕೆ ದೇಣಿಗೆಯನ್ನು ನೀಡಿದರು ಎಂದು ಹೇಳಲಾಗುತ್ತಿದೆ.
ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಕುರುಬ ಸಮಾಜದವರು ತಮ್ಮ ಸ್ವಜಾತಿಯ ಜಿಬಿ.ವಿನಯ್ ಕುಮಾರ್ ಸ್ಪರ್ಧೆಮಾಡಿದ್ದರೂ ಕೂಡಾ ಸಮಾಜದವರು ಸ್ವಜಾತಿಯ ವಿನಯ್ ಕುಮಾರರನ್ನು ಬೆಂಬಲಿಸದೆ ಜಾತಿ ಬೇಧಮಾಡದೇ ಪ್ರಭ ಮಲ್ಲಿಕಾರ್ಜುನ್ ರವರನ್ನು ಬೆಂಬಲಿಸಿ ಲೋಕಸಭೆಗೆ ಆಯ್ಕೆಮಾಡುವಲ್ಲಿ ಪ್ರಮುಖಪಾತ್ರವಹಿಸಿದ್ದರು.ಹಲವು ಜಿಲ್ಲೆಗಳಲ್ಲಿ ಅಧಿಕಾರಕ್ಕಾಗಿ ಒಳೊಪ್ಪಂದ ಮಾಡಿಕೊಂಡು ಸ್ವಜಾತಿಪ್ರೇಮ ತೋರಿಸಿ ಸ್ಥಾನ ಮಾನ ನೀಡಿದ ಪಕ್ಷಕ್ಕೆ ದ್ರೋಹಬಗೆಯುವ ಸಂದರ್ಭದಲ್ಲಿ
ಕುರುಬ ಸಮಾದವರನ್ನು ರಾಜಕೀಯವಾಗಿ ಮೇಲೇಳಲು ಬಿಡದ ಜಾತಿವಾದಿಗಳಿಗೆ ದಾವಣಗೆರೆಯ ಕುರುಬ ಸಮುದಾಯ ನಂಬಿದವರಿಗೆ ಹಾಲುಕೊಡ್ತಾರೆ ಹೊರತು ದ್ರೋಹ ಬಗೆಯಲ್ಲವೆಂಬ ಸ್ಪಷ್ಟ ಸಂದೇಶವನ್ನು ಜಾತಿವಾದಿಗಳಿಗೆ ರವಾನಿಸಿದ್ದಾರೆಂದು ಜನಜನಿತವಾಗಿದೆ ಎಂದು ಸಮಾಜದ ಹಿತೈಸಿಗಳು ತಿಳಿಸಿದ್ದಾರೆ.