ಬೆಂಗಳೂರು:(ಜೂನ್ 17):-ಮುಸಲ್ಮಾನ ಬಾಂಧವರ ಪವಿತ್ರ ಹಬ್ಬವಾದ ಬಕ್ರೀದ್ ಸಂದರ್ಭದಲ್ಲಿ ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಶಾಸಕರು ಆದ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಶ್ರೀ ಬಿ.ಎಸ್.ಸುರೇಶ(ಬೈರತಿ) ಅವರು ಇಂದು ಬೆಳಗ್ಗೆ ಆರ್.ಟಿ.ನಗರದ ಹೆಚ್.ಎಂ.ಟಿ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದಂದು ನಾಡಿನ ಸಮಸ್ತ ಮುಸ್ಲಿಂ ಸಮುದಾಯಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿ ಶುಭ ಕೋರಿದರು.
ಬೆಂಗಳೂರು ಉತ್ತರ ಡಿಸಿಸಿ ಅಧ್ಯಕ್ಷರಾದ ಶ್ರೀ ಅಬ್ದುಲ್ ವಾಜಿದ್, ಮಾಜಿ ರಾಜ್ಯ ಸಭಾ ಸದಸ್ಯರಾದ ಫ್ರೂ. ಎಂ ವಿ.ರಾಜೀವ್ ಗೌಡ ಸೇರಿದಂತೆ ಮುಸ್ಲಿಂ ಸಮುದಾಯದ ಧರ್ಮ ಗುರುಗಳ ಹಾಗೂ ಬಾಂಧವರು ಭಾಗವಹಿಸಿದ್ದರು