ಕಲಬುರಗಿ: ಪ್ರಸಕ್ತ ಸಾಲಿನ ಅಂದರೆ 2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ ಜಿಲ್ಲಾ ಘಟಕದಿಂದ ಅರ್ಜಿಗಳು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ ತಿಳಿಸಿದ್ದಾರೆ.
ಶೇ. 80 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಅರ್ಹತೆ ಪಡೆದಿರುತ್ತಾರೆ. ಸಂಘದ ಸದಸ್ಯರಾಗಿರುವ ಮಕ್ಕಳನ್ನು ಪರಿಗಣಿಸಲಾಗುವುದು. ಜೂನ್ 21 ರವರೆಗೆ ಅರ್ಹ ವಿದ್ಯಾರ್ಥಿಗಳ ಅಂಕಪಟ್ಟಿ, ಆಧಾರ ಕಾರ್ಡ, ಸದಸ್ಯತ್ವ ಕಾರ್ಡ ಝರಾಕ್ಸ್ ಪ್ರತಿಯನ್ನು ಪತ್ರಿಕಾ ಭವನದಲ್ಲಿ ಸಲ್ಲಿಸಬೇಕು ಎಂದು ಅವರು ಕೋರಿದ್ದಾರೆ.