ಹಾಸನ : ಹಾಸನವಾಣಿ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಮುರಳಿ(55) ಅವರು ಹಾಸನದ ಜನಪ್ರಿಯ ಆಸ್ಪತ್ರೆಯಲ್ಲಿ
ನಿಧನರಾಗಿದ್ದ ಸುದ್ದಿ ಅಘಾತವನ್ನುಂಟು ಮಾಡಿದೆ. ಪತ್ರಕರ್ತರ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಮ್ಮೇಳನಗಳಲ್ಲಿ ಸಕ್ರೀಯವಾಗಿ ಭಾಗವಹಿಸುತಿದ್ದ ಮುರಳಿ ನಮ್ಮೊಂದಿ ಉತ್ತಮ ಸ್ನೇಹಿತರಾಗಿದ್ದರು.ಘೋರಕ್ ಪುರ್,ನೇಪಾಳ ದಲ್ಲಿ ನಡೆದ ಐ.ಎಫ್.ಡಬ್ಲ್ಯೂ.ಜೆ ಸಮ್ಮೇಳನದಲ್ಲಿ ಭಾಗವಹಿಸಿದ್ದಾಗ ನಮ್ಮ ಆಪ್ತಮಿತ್ರರಲ್ಲಿ ಮುರಳಿಕೂಡಾ ಒಬ್ಬರಾಗಿದ್ದರು.

ಹಿರಿಯ ಪತ್ರಕರ್ತೆ ಲೀಲಾವತಿ ಅವರ ಪುತ್ರನಾಗಿದ್ದ ಮುರುಳಿ, ಪತ್ನಿ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಯಾಗಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಸ್ನೇಹಜೀವಿ ಮುರುಳಿ,

ರಾಷ್ಟ್ರೀಯ ಪತ್ರಕರ್ತರ ಸಮ್ಮೇಳನ ಮತ್ತು ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಮುರುಳಿ ಅವರ ಅಂತ್ಯಕ್ರಿಯೆ ಹಾಸನದ ಬಿಟ್ಟಗೋಡನಹಳ್ಳಿ ರುದ್ರಭೂಮಿಯಲ್ಲಿ ನಡೆಯಲಿದೆ.

ಕೆಯುಡಬ್ಲೂಜೆ ದಾವಣಗೆರೆ ಜಿಲ್ಲಾ ಸಮಿತಿ ಹಾಗೂ ಐ.ಎಫ್.ಡಬ್ಲ್ಯೂ.ಜೆ. ಸಂತಾಪ:

ಹಿರಿಯ ಪತ್ರಕರ್ತ ಮುರುಳಿ

ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ದಾವಣಗೆರೆ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಸ್ನೇಹ ಜೀವಿಯಾಗಿದ್ದ ಪತ್ರಕರ್ತ ಮುರುಳಿ ಸಂಘಟಕನಾಗಿಯೂ ಗಮನ ಸೆಳೆದಿದ್ದರು. ಅವರ ಸಾವಿನ ಸುದ್ದಿ ಅರಗಿಸಿಕೊಳ್ಳಲಾರದ ಸಂಗತಿ ಎಂದು ಪವಿತ್ರಪ್ರಜಾ ಕನ್ನಡ ದಿನಪತ್ರಿಕೆ ದಾವಣಗೆರೆ ಹಾಗೂ ಸಹಾಯವಾಣಿ ಕನ್ನಡ ದಿನಪತ್ರಿಕೆ ಬೆಂಗಳೂರು ಸಂಪಾದಕರು ಹಾಗೂ ಐ.ಎಫ್.ಡಬ್ಲ್ಯೂ.ಜೆ ಸದಸ್ಯರಾದ ಶ್ರೀ ಎಸ್.ಕೆ.ಒಡೆಯರ್ ಶೋಕಿಸಿದ್ದಾರೆ.

ಮುರುಳಿ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

LEAVE A REPLY

Please enter your comment!
Please enter your name here