ರಾಯಚೂರು:ಹಳ್ಳಿಗಳಲ್ಲಿ ಬೆಳೆದು ನಮ್ಮ ನಗರಕ್ಕೆ ಮಾರಾಟ ಮಾಡಲು ಬಂದ ರೈತರಿಗೆ ಸರಿಯಾದ ವ್ಯವಸ್ಥೆ ಇಲ್ಲದೆ ಮಳೆಯಿಂದ ಕೆಸರಾದ ಜಾಗದಲ್ಲಿ ತರಕಾರಿ ಮಾರಾಟ ಮಾಡುತ್ತಿರುವುದು ನೋಡಿದರ್ ಎಂತಹ ವ್ಯಕ್ತಿಗೂ ಕಣ್ಣಲ್ಲಿ ನೀರು ಬಾರದೆ ಇರದು.

ಆದರೇ ಈ ರಾಯಚೂರ ನಗರ ಸಭೆ ಅಧಿಕಾರಿಗಳಿಗೆ ಅದು ಯಾವ ಭೂತ ಅವರ ಮೈಯಲ್ಲಿ ಸೇರಿಕೊಂಡಿದೆಯೋ ಗೊತ್ತಾಗ್ತಾಯಿಲ್ಲ, ಅನಧಿಕೃತ ಕಟ್ಟಡಗಳಿಗೆ ಸೂಚನ ಪತ್ರಕ್ಕೆ ಹಚ್ಚಲು ಮಾತ್ರಕ್ಕೆ ಸೀಮಿತವಾಗಿದೆ ನೀಡಿದ ಸಮಯ ಕಳೆದರು ಇನ್ನೂ ಅನಧಿಕೃತ ಕಟ್ಟಡಗಳು ನೆಲಸಮ ಮಾಡದೆ ಇದ್ದನ್ನು ನೋಡಿದರೆ ನಗರ ಸಭೆ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಮೋಡಿದೆ, ಈ ಅನಧಿಕೃತ ಕಟ್ಟಡಗಳು ನೆಲಸಮ ಮಾಡಿ ಸುಸಜ್ಜಿತ ವ್ಯವಸ್ಥೆ ಮಾಡಿ ಬಡ ರೈತರಿಗೆ ತರಕಾರಿ ಮಾರಾಟ ಮಾಡಲು ಅನುಕೂಲ ಮಾಡಿ ಅಕ್ಕ ಪಕ್ಕದ ನಿವಾಸಿಗಳಿಗೆ ಖರೀದಿ ಮಾಡಲು ಕೂಡ ಅನುಕೂಲ ಮಾಡಬಹುದು ಆದರೇ ನಮ್ಮ ನಗರದ ನಗರ ಸಭೆ ಅಧಿಕಾರಿಗಳಿಗೆ ತಮ್ಮ ಜೇಬು ತುಂಬಿಕೊಳ್ಳುವ ಕಾರ್ಯಕ್ರಮ ಬಿಟ್ಟು ನಗರದ ಸ್ವಚ್ಛತಾ ಬಗ್ಗೆ ಯಾವುದೇ ರೀತಿಯ ಆಲೋಚನೆ ಇಲ್ಲದಂತೆ ಕಾಣುತ್ತಿದೆ,

ರೈತರು ಮಾರಾಟ ಮಾಡುವ ಸ್ಥಳಕ್ಕೆ ಹೋಗಿ ನೋಡಿದರೆ ಮೈ ಜುಮ್ಮೆನಿಸುತ್ತಿದೆ, ಈಗ ಮಳೆಗಾಲ ಶುರು ಆಗಿದೆ ಈಗಲಾದರೂ ನಗರ ಸಭೆ ಎಚ್ಚೆತ್ತುಕೊಂಡು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಒತ್ತುವರಿ ಆದ ರಾಜ ಕಾಲುವೆ ಜಾಗಗಳು ತೆರವುಗೊಳಿಸಿ, ನಗರದ ಮುಖ್ಯ ರಸ್ತೆಗಳಲ್ಲಿ ಬೀದಿ ದೀಪಗಳು ಅಳವಡಿಸಿ ಪ್ರತಿಯೊಂದು ವಾರ್ಡ್ ಗಳಲ್ಲಿ ಮಳೆ ನೀರು ನಿಲ್ಲದೆ ಸುಗಮವಾಗಿ ಹರಿಯಲು ವ್ಯವಸ್ಥೆ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಸಂಪೂರ್ಣ ನಗರ ಕಸದ ತೊಟ್ಟಿ ಎನ್ನುವ ಹೆಸರು ನಿಜ ವಾಗುತ್ತೆ, ನಗರ ಸಭೆ ಆಯುಕ್ತರು ನೀತಿ ಸಂಹಿತೆ, ಚುನಾವಣೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ.

ಅವರ ಮಾತಿನಿಂದ ಚುನಾವಣೆ, ನೀತಿ ಸಂಹಿತೆ ಗಳಿಗೆ ಹಾಗೂ ನಗರ ಸ್ವಚ್ಛತೆಗಾಗಿ ಮತ್ತು ಅನಧಿಕೃತ ಕಟ್ಟಡ ಗಳನ್ನು ತೆರವುಗೊಳಿಸಲು ಏನು ಸಂಬಂಧ ಎಂದು ಅರ್ಥ ಆಗ್ತಿಲ್ಲಾ. ಮಾನ್ಯ ಆಯುಕ್ತರೇ ಚುನಾವಣೆ ನಿಮಿತ್ಯ ನಗರಕ್ಕೆ ಬಂದಿದ್ದೀರಿ ಏನಾದರೂ ಒಳ್ಳೆ ಕೆಲಸ ಮಾಡಿ ತಮ್ಮ ಹೆಸರು ನಗರದ ಜನರು ನೆನಪಿಸಿಕೊಳ್ಳುವ ತರಹ ಕೆಲಸ ಮಾಡಿ ಹೋಗಿ ಸುಮ್ಮನೆ ಆಯಾ ರಾಮ್ ಗಯಾ ರಾಮ್ ತರಹ ಆಗ ಬೇಡಿ ಆಯುಕ್ತರೇ.ಎಂದು ಸಾಮಾಜಿಕ ಹೋರಾಟಗಾರ ಅಂಬಾಜಿ ರಾವ್ ಮೈದರ್ಕರ್ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here