ಬಾಗಲಕೋಟೆ:ಕೃಷ್ಣಾ ಮೇಲ್ದಂಡೆ ಯೋಜನೆಯಲಾಲಿ ರೈತರ ಭೂ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ಪರಿಹಾರಕ್ಕಾಗಿ ದಾವೆಯನ್ನು ಮಾಡಿದ್ದು, ಸದರಿ ಮುಳಗಡೆಯಾದ ಜಮೀನುಗಳಿಗೆ ಆದೇಶ ಮಾಡುವ ಕುರಿತು.
ಜಿಲ್ಲಾಧ್ಯಕ್ಷರಾದ ಶ್ರೀ ನಾಗರಾಜ ತಂ। ಭೀಮಪ್ಪ ಹೂಗಾರ ಅಖಿಲ ಕರ್ನಾಟಕ ರಾಜ್ಯ ರೈತ ಸಂಘ ಬಾಗಲಕೋಟೆ ಜಿಲ್ಲಾ ಸಮಿತಿ ಮನವಿ
ಕೃಷ್ಣಾ ಮೇಲ್ದಂಡ ಯೋಜನೆಯ ನಾರಾಯಣಪುರ ಹಾಗೂ ಆಲಮಟ್ಟಿ ಎಡದಂಡೆ ಹಾಗೂ ಬಲದಂಡೆ ಡ್ಯಾಮಿನ ಹಿನ್ನಿರಿನಲ್ಲಿ 1979 ರಲ್ಲಿ ಸಾಕಷ್ಟು ಜಮೀನುಗಳು ಮುಳುಗಡೆಯಾಗಿ ಹೋಗಿದ್ದು, ಸದರಿ ಜಮೀನುಗಳಿಗೆ ಇಲ್ಲಿಯವರೆಗೂ ಮುಳುಗಡೆಯಾದ ಜಮೀನುಗಳಿಗೆ ಪರಿಹಾರಧನ ದೊರಕಿರುವದಿಲ್ಲ. ಹುನಗುಂದ ನ್ಯಾಯಾಲಯದಲ್ಲಿ ಎಲ್.ಎ.ಸಿ ಕೇಸ್ ಹಾಗೂ ಬಾಗಲಕೋಟಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಎಲ್.ಎ.ಸಿ. ಕೇಸ್ ಹಾಗೂ ಎಲ್.ಎ.ಸಿ ಅಪೀಲ್ ದಾವೆ ಹಾಕಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂ-ಸ್ವಾಧಿನಾಧಿಕಾರಿಗಳು ಇಲಕಲ್ಲ ಹಾಗೂ ಬಾಗಲಕೋಟೆ ಯು.ಕೆ.ಪಿ ಅಧಿಕಾರಿಗಳು ಸ್ವಾಧಿನಪಡಿಸಿಕೊಂಡ ಜಮೀನುಗಳನ್ನು ನ್ಯಾಯಾಲಯದಲ್ಲಿ ದಾವೆ ಹಾಕಿದ್ದು, ಇಲ್ಲಿಯವರೆಗೂ ಕೂಡಾ. ಒಂದು ಆದೇಶವಾಗಿರುವದಿಲ್ಲ. ರಾಜ್ಯದಲ್ಲಿ ವಿಪರೀತ ಬರಗಾಲ ಇರುವುದರಿಂದ. ರಾಜ್ಯದಲ್ಲಿ 692 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಅದರಲ್ಲಿ ನಮ್ಮ ಜಿಲ್ಲೆಯಲ್ಲಿ | ಜನ ರೈತರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇಷ್ಟೇಲ್ಲಾ ಆದರೂ ಕೂಡಾ ಇನ್ನುವರೆಗಾದರೂ ಎಲ್.ಎ.ಸಿ ಕೇಸ್ ಹಾಗೂ ಎಲ್.ಎ.ಸಿ ಅಪೀಲ್ ಮತ್ತು
ಕರ್ನಾಟಕ ರೈತ ಸಂಘ ಬಾಗಲಕೋಟೆ ರೈತರು ಈ ಮೊದಲು ದಿನಾಂಕ:
20-04-2024 ರಂದು ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ಉದ್ಘಾಟನಾ ಗೌರವಾನ್ವಿತ ಹುನಗುಂದ ನ್ಯಾಯಾಲಯದಲ್ಲಿ ಸಮಾರಂಭದಲ್ಲಿ ಜಿಲ್ಲಾ ಸತ್ರ ಸಂಚಾರಿ ನ್ಯಾಯಾಲಯದ ಉದ್ಘಾಟನಾ ಸಮಾಂಭದಲ್ಲಿ ಬಾಗಲಕೋಟೆ ಜಿಲ್ಲಾ ಘಟಕದ ರೈತರು ಗೌರವಾನ್ವಿತ ನ್ಯಾಯ ಮೂರ್ತಿಗಳಿಗೆ ಮನವಿಯನ್ನು ಸಲ್ಲಿಸಿದ್ದು ಆ ಸಂದರ್ಭದಲ್ಲಿ ತಾವುಗಳು ಕೇಳಿದ. ರೈತರು ಜಿಲ್ಲೆಯಲ್ಲಿ ದಾವೆ ಮಾಡಿರುವ ಕೇಸ್‌ಗಳು ಮತ್ತು ಕೇಸ್ ನಂಬರಗಳನ್ನು ಕೇಳಿರುತ್ತೀರಿ ಅದರಂತೆ ಈ ಕೆಳಗೆ ರೈತರು ಹಾಕಿದ ದಾವೆಗಳ ನಂಬರಗಳು ಈ ಕೆಳಗಿನಂತೆ ಇರುತ್ತವೆ.

ಈ ಮೇಲ್ಕಾಣೀಸಿ ಹುನಗುಂದ ಹಾಗೂ ಇಲಕಲ್ಲ ಅವಳಿ ತಾಲೂಕುಗಳ ಜಿಲ್ಲೆ ಹಾಗೂ ಜಿಲ್ಲಾ ಸತ್ರ ನ್ಯಾಲಯಾಲದಲ್ಲಿ 4.400 ಕ್ಕಿಂತ ಹೆಚ್ಚು ದಾವೆಗಳು ಇದ್ದು, ಇನ್ನು ಮೂರು ಸಾವಿರಕ್ಕಿಂತ ದಾಖಲಾಗಬೇಕಾದ ಪ್ರಕರಣಗಳಿವೆ. ಆದ ಕಾರಣ ದಯಾಳುಗಳಾದ ಗೌರವಾನ್ವಿತ ನ್ಯಾಯ ಮೂರ್ತಿಗಳಿಗೆ ಬಾಗಲಕೋಟೆ ಜಿಲ್ಲಾ ಘಟಕದ ರೈತರು ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ಜಿಲ್ಲೆಯಲ್ಲಿ ವಿಪರಿತ ಬರಗಾಲದ ಹಿನ್ನೆಲೆಯಲ್ಲಿ ರೈತರು ಕಣ್ಣೀರು ಹಾಕುವಂತೆ ಆಗಿದೆ. ಆದ ಕಾರಣ ತಮ್ಮಲ್ಲಿ ದಯಾಪಾಲಿಸುವುದೇನೆಂದರೆ, ಆದಷ್ಟು ಬೇಗೆನೆ ಮುಳುಗಡೆಯಾದ ಜಮೀನುಗಳಿಗೆ ಆದೇಶವನ್ನು ಮಾಡಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ರೈತ ಸಂಘ ಬಾಗಲಕೋಟೆಯ ಜಿಲ್ಲಾಧ್ಯಕ್ಷರಾದ ಶ್ರೀ ನಾಗರಾಜ ತಂ। ಭೀಮಪ್ಪ ಹೂಗಾರ ರವರು ಕರ್ನಾಟಕ ಉಚ್ಛನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳಾದ ಗೌರವಾನ್ವಿತ ಶ್ರೀ ಪ್ರಸನ್ ಬಿ.ವರಲೆ ಯವರಿಗೆ ವಿನಂತಿಯ ಮನವಿಯನ್ನು ರವಾನಿಸಿದ್ದಾರೆ.

LEAVE A REPLY

Please enter your comment!
Please enter your name here