ಹಾಸನ:ಸಂಸದನಾಗಿ ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ ಸಂಸದ ಪ್ರಜ್ವಲ್ ರೇವಣ್ಣ ನನ್ನ ಕೂಡಲೇ ಬಂಧಿಸಬೇಕು,
ಸಂತ್ರಸ್ತೇ ಮಹಿಳೆಯರಿಗೆ ಪರಿಹಾರ ಒದಗಿಸಬೇಕೆಂದು
ರಾಜ್ಯದ ಮೂಲೆ ಮೂಲೆಗಳಿಂದ ಬಂದಂತಹ ಸಾವಿರಾರು ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು, ಲೇಖಕರು ಸಾಹಿತಿಗಳು,ಬಸವ ಬಳಗ ದಾವಣಗೆರೆ, ಎಲ್ಲಾ ಸಮುದಾಯಗಳ ವಿಚಾರಧಾರೆ
ರಂಗಕರ್ಮಿಗಳು, ಸೇರಿದಂತೆ ಸುಮಾರು 10 ಸಾವಿರಕ್ಕೆ ಹೆಚ್ಚು ಜನ ಪಾಲ್ಗೊಂಡು ಹಾಸನದ ಹೇಮಾವತಿ ಪಾರ್ಕ್ ಇಂದ
ಜಿಲ್ಲಾಧಿಕಾರಿ ಕಚೇರಿ ಆವರಣ ಮುಂಭಾಗಕ್ಕೆ ಬೃಹತ್ ಮೆರವಣಿಗೆಯಲ್ಲಿ ಸಾಗುತ್ತಾ
ಧಿಕ್ಕಾರ ಕೂಗಿ, ಮಾಜಿ ಪ್ರಧಾನಿ ದೇವೇಗೌಡ ಅವರ ಪಿತೃ ವಾತ್ಸಲ್ಯಕ್ಕೆ ವಿರೋಧ ವ್ಯಕ್ತಪಡಿಸಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಪಡಿಸಿದರು.
ಜನವಾದಿ ಸಂಘಟನೆಯ ಕೆ ನೀಲ ಗುಲ್ಬರ್ಗ, ವಿಮಲಾ ಜನವಾದಿ, ಮಹಿಳಾ ಸಾಹಿತಿ ಮಲ್ಲಿಕಾ ಗಂಟಿ, ಶ್ರೀಮತಿ ವಸುಂದರ ಭೂಪತಿ, ಮೀನಾಕ್ಷಿ ಬಾಳೆ, ರೈತ ಸಂಘಟನೆಯ ಸುನಂದ ಜಯರಾಮ್, ಶ್ರೀಮತಿ ಚುಕ್ಕಿ ನಂಜುಂಡಸ್ವಾಮಿ, ಶ್ರೀಪತಿ ಇಂದಿರಾ ಕ್ರಿಸ್ಟಪ್ಪ, ಸಾಮಾಜಿಕ ಹೋರಾಟಗಾರ ಎಸ್ ಎಸ್ ಆರ್ ಹಿರೇಮಠ, ದಿನೇಶ್ ಅಮೀನ್ ಮಟ್ಟು, ಎಸ್‌ಜಿ ಸಿದ್ದರಾಮಯ್ಯ, ವರಲಕ್ಷ್ಮಿ, ತಲ್ಕಿಶ್ ಬಾನು, ಬಿಹಾರದ ಮಹಿಳಾ ಹೋರಾಟಗಾರ್ತಿ ಜನಪದ ರಂಗಕರ್ಮಿ ಸಿ ಬಸ್ಲಿಂಗಯ್ಯ, ಡಾ. ಸಿದ್ದನಗೌಡ ಪಾಟೀಲ್, ಮೈಸೂರ್ ಜನ್ನಿ, ಕೆ ಮಾಂತೇಶ್, ಮಂಗಳೂರಿನ ಮುನೀರ್ ಕಟ್ಪಾಡಿ, ಧರ್ಮೇಶ್, ಸುಭಾಷಿಣಿ ಆಲಿ, ಶ್ರೀಮತಿ ಜಬೀನಾ ಖಾನಂ, ಶ್ರೀಮತಿ ವೀಣಾ ಮಂಜುನಾಥ್ ಬಸವ ಬಳಗ ದಾವಣಗೆರೆ , ವಿಶ್ವ ಮಾನವ ಮಂಟಪದ ಅವರಗೆರೆ ರುದ್ರಮನಿ, ಪುರಂದರ ಲೋಕೀಕೆರೆ, ದೊಮ್ಮಲೂರು ಪರಶುರಾಮ್, ಸೇರಿದಂತೆ ಹಲವಾರು ಮಹಿಳಾ ಮುಖಂಡರುಗಳು ಪಾಲ್ಗೊಂಡಿದ್ದರು.
ಆರಂಬದಲ್ಲಿ
ಹಾಸನದ ಮಹಾರಾಜ್ ಕಾಲೇಜು ನಿಂದ ಸುಮಾರು 10ಸಾವಿರಕ್ಕೂ ಮಿಕ್ಕಿ ರಾಜ್ಯ ವಿವಿಧ ಜಿಲ್ಲೆ, ತಾಲೂಕು ಗಳಿಂದ ಸಾವಿರ ಸಾವಿರ,ಮಹಿಳೆಯರು,
ವಿಚಾರ ವಾದಿಗಳು, ವಿವಿಧ ಮಹಿಳಾ ಸಂಘಟಿ ನೆ ಗಳ ಮುಖಂಡರು, ಜನವಾದಿ ಸಂಘಟನೆ ಮುಖ್ಯಸ್ಟೇ ವಿಮಲಾ, ಉಡುಪಿ ವಸುಧರ ಭೂಪತಿ, ಎಚ್ ಎಲ್ ಪುಷ್ಪ, ಗುಲ್ಬರ್ಗ ಕೆ ನೀಲಾ, ಮಲ್ಲಿಕಾ ಘಂಟಿ, ಕೆ ಶರೀಫಾ, ಜಬಿನ್ ಖಾನಮ್, ಮಂಗಳೂರ್ ಮುನೀರ್, ಕೆ. ಮಹಾಂತೇಶ್, ಬಸವ ಲಿಂಗಯ್ಯ್, ಎಸ್ ಎಸ್ ಹಿರೇಮಠ್, ಸೇರ್ದoತೆ ನೂರಾರು ಮುಂಖಂಡರು.
ಪಾಲ್ಗೊಂಡು ಕೂಡಲೇ ಪ್ರಜ್ವಲ್ ರೇವಣ್ಣ ನ ನ್ನು ಬಂದಿಸಲು ಒತ್ತಾಯಿಸಿದರು.(ವರದಿ:ಹಾಸನದಿಂದ ಪುರಂದರ್ ಲೋಕಿಕೆರೆ)