ಬೆಂಗಳೂರು ನಗರ ಜಿಲ್ಲೆ, ಮೇ.27: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಾವಣೆಯಾದ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಎಲ್ಲಾ ವಕ್ಫ್ ಸಂಸ್ಥೆಗಳು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮಾದರಿ ನಿಯಾಮವಳಿಯ ನಮೂನೆ ನಂ.-42 (ಬೈ ಲಾ) ನ್ನು ಅಂಗೀಕರಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಅಂಗೀಕರಿಸಿಕೊಳ್ಳದ ವಕ್ಫ್ ಸಂಸ್ಥೆಗಳು ಕೂಡಲೆ ಮಾದರಿ ನಿಯಾಮವಳಿಯನ್ನು ಅಂಗೀಕರಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಮಾದರಿ ನಿಯಾಮವಳಿಯ ಅಂಗೀಕಾರಕ್ಕಾಗಿ ವಕ್ಫ್ ಸಂಸ್ಥೆಗಳು ಸಂಬಂಧಿಸಿ ದಾಖಲೆಗಳನ್ನು ಜಿಲ್ಲಾ ವಕ್ಫ್ ಕಚೇರಿ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಇಲ್ಲಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಔಖಾ‍‍ಫ್ ಮಂಡಳಿ, ಬೆಂಗಳೂರು ನಗರ ಜಿಲ್ಲೆ, ನಂ.16 & 22, 2ನೇ ಮಹಡಿ, ಹೆಚ್.ಹೆಚ್.ಎಸ್ ಮತ್ತು ಹೆಚ್.ಎಂ,ಎಸ್ ಕಾಂಪ್ಲೇಕ್ಸ್, ಕಬ್ಬನ್ ಪೇಟೆ, ಬೆಂಗಳೂರು ಅಥವಾ ಪೋನ್ ನಂಬರ್: 080-22110108, ಇ-ಮೇಲ್ dwacbnu@gmail.com ಇಲ್ಲಿ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here