(ಕೊಪ್ಪಳ ಹುತಾತ್ಮರ ವೇದಿಕೆ) ಕೊಪ್ಪಳ ಮೇ 25
1858 ರ ಸ್ವಾತಂತ್ರ ಹೋರಾಟದಲ್ಲಿ ಮುಂಡರಗಿ ಭೀಮರಾಯರoತ ಸ್ವತಂತ್ರ ಸೇನಾನಿಗಳು,ಬ್ರಿಟಿಷರ ವಿರುದ್ಧ ಸೆಡ್ಡು ಹೊಡೆದು ಕೊಪ್ಪಳ ಕೋಟೆಯನ್ನು ವಶಪಡಿಸಿಕೊಂಡಂತೆ, ನಂತರ ಅದೇ ಬ್ರಿಟಿಷ್ ಸೈನ್ಯ ಮೋಸದಿಂದ ನೂರಕ್ಕೂ ಹೆಚ್ಚು ಜನ ಸ್ವತಂತ್ರ ಹೋರಾಟಗಾರರನ್ನು ಗುಂಡಿಕ್ಕಿಕೊoದ ನೆಲದಲ್ಲಿ,
ಅಧ್ಯಾತ್ಮದ ಮೂಲಕ ಶಿಕ್ಷಣ ಮತ್ತು ಅನ್ನದಾಸೋವನ್ನು ಸುಮಾರು ದಶಕ ಗಳಿಂದ ರೂಢಿಗತ ಮಾಡಿಕೊಂಡು ಬರುತ್ತಿರುವ ಶ್ರೀ ಗವಿಸಿದ್ದೇಶ್ವರ ಸನ್ನಿಧಾನದಲ್ಲಿ ” ಸಂವಿಧಾನ ಭಾರತ ಮತ್ತು ಧರ್ಮರಾಜಕಾರಣ ” ಈ ವಿಷಯದ ಆಧಾರಗಳ ಮೇಲೆ
ಪ್ರಸ್ತುತ ದೇಶದಲ್ಲಿ ಉಂಟಾಗುತ್ತಿರುವ ಸಂವಿಧಾನದ ವಿರೋಧ ಮತ್ತು ಸಂವಿಧಾನದ ಬಿಕ್ಕಟ್ಟು, ಸಂವಿಧಾನವನ್ನೇ ಬದಲಾವಣೆ ಮಾಡುವಂತಹ ವಾತಾವರಣದ ನಡುವೆ ಧರ್ಮರಾಜ ಕಾರಣವೂ ಕೂಡ ಮುಖ್ಯ ಚರ್ಚೆ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ 25 ರ ಇಂದು ಮತ್ತು ನಾಳೆ ಪ್ರತಿವರ್ಷ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಆಯ್ದ ಜಿಲ್ಲಾ ಮುಖ್ಯ ಕೇಂದ್ರಗಳಲ್ಲಿ ಮೇ ಸಾಹಿತ್ಯ ಬೇಡ ನಡೆಯುತ್ತಿರುವುದು ಒಂದು ವಿಶೇಷ.
ಚಿತ್ರಕಲಾ ಪ್ರದರ್ಶನ, ದೇಶದ ರೈತಪರ ಹೋರಾಟಗಾರರು, ಸ್ವತಂತ್ರ ಹೋರಾಟಗಾರರ, ಕವಿ ಸಾಹಿತಿಗಳ, ಚಿಂತಕರ ವಿಮರ್ಶ ಕರ, ಲೇಖಕರ ಸಾಹಿತಿಗಳ, ರಾಜ್ಯದ ವಿವಿಧ ಸಂಘಟನೆಗಳ ಕೆಲಸ ಮಾಡುತ್ತಿರುವ ಕಾರ್ಮಿಕ ಮುಖಂಡರು, ಉಪನ್ಯಾಸಕರು ವಿದ್ಯಾರ್ಥಿಗಳ ವಿಚಾರ ಶೀಲರ
ಸಂಹಿತೆ ಗೊಂಡ ಈ ಮೇಳ
ತುಂಬಾ ಅರ್ಥಪೂರ್ಣ ಚರ್ಚೆ ಇಂದು ನಡೆಯಿತು
ಬುಡಕಟ್ಟು ಜನಾಂಗದ ಮಹಿಳೆ ಜಂಬವ್ವ ದುರ್ಗವ್ವ, ಬಸಮ್ಮ ಇವರೆಲ್ಲಾ ಕಸೂತಿ ಹಾಕುವ ಕೃಷಿ ಕಾರ್ಮಿಕ ಮಹಿಳೆಯರು ಇವರಿಂದಲೇ
ಎರಡು ದಿನದ ಮೇಳ ಉದ್ಘಾಟನೆ ಮಾಡಿಸಿದ್ದು ಈ ಸಾಹಿತ್ಯ ಮೇಳದ ಪ್ಪ್ಲಸ್ ಪಾಯಿಂಟ್ ಕೂಡ ಆಗಿತ್ತು.
ರಾಷ್ಟ್ರೀಯ ರೈತ ಹೋರಾಟಗಾರ ರಾಕೇಶ್ ಟಿ ಕಾಯತ್.. ಈ ದೇಶದಲ್ಲಿ ಸಂವಿಧಾನ ಯಾವಾಗ ಬದಲಾಗುವುದು ಎಂದು ಪ್ರತಿ ಪ್ರಜೆಗಳ ಆತಂಕ ಕೂಡ ಆಗಿದೆ.
ಈ ದೇಶದಲ್ಲಿ ರೈತ ಯಾವ ಬೀಜ ಬಿತ್ತಾ ಬೇಕು. ಯಾವ ಬೆಳೆ ಬೆಳೆಯಬೇಕು, ಮಹಿಳೆಯರು ಎಂತಹ ಬಟ್ಟೆ ತೊಡಬೇಕು, ಇಂತಹ ಕಾನೂನು
ಜಾರಿಯಾಗಬೇಕು, ಯಾವ ಆಹಾರ ತಿನ್ನ ಬೇಕು ಎಂಬುದನ್ನು ದೇಶದ ನಾಗ ಪುರದಿಂದ ಆಜ್ಞೆ ಹೊರಡಿಸಾಲಗುತ್ತಿದೆ
ಇಂತಹ ಭಯದ ನಡುವೆ ಬದುಕು ನೆಡೆಯುತ್ತಿದೆ, ಭಹುಜನ ಎಚ್ಚತ್ತು ಕೊಳ್ಳಿ ಎಂದು ಕರೆ ನೀಡಿದರು.
ಹೈದ್ರಾಬಾದ್ ಕವಿ, ಹೋರಾಟಗಾರ್ತಿ ಜೂಪಕ ಸುಭಾದ್ರಾ ಮಹಿಳೆಯರ ಮೇಲಿನ ದೌರ್ಜನ್ಯ, ಮಹಿಳಾ ವಿರುದ್ಧದ ಕಾನೂನುಗಳ ಬಗ್ಗೆ ಅವಲೋಕನ ಮಾಡಿದರು.
ಪಣಜಿ ಕೊಂಕಣಿ ಕವಿ, ಬರಹಗಾರ, ದಾಮೋದರ್ ಮೊಚೋ,ಜಸ್ಟಿ ಗೋಪಾಲ್ ಗೌಡ,ದೀಕ್ಸುಚಿ ಮಾತನಾಡಿದ ರು.
ಮದ್ಯಾಹ್ನ ಗೋಷ್ಠಿಯಲ್ಲಿ
ಸಂವಿಧಾನ ಚಿಂತನೆಗಳು, ಸoವಿಧಾನದ ಆದರ್ಶ ಮತ್ತು ಅವಲೋಕನ ಹಿರಿಯ ನ್ಯಾಯವಾದಿ ಮೋಹನ್ ಕಾತರಕಿ, ದೆಹಲಿ.
ಭಾರತದಲ್ಲಿ ಕೋಮು ರಾಜಕಾರಣದ ಇತಿಹಾಸ ಸಾಮಾಜಿಕ ಹೋರಾಟಗಾರ ಪನಿ ರಾಜ್ ರವರು, ಸಂವಿಧಾನ ಎದುರಿಸಿದ ಪ್ರತಿರೋಧಗಳು
ಈ ಕುರಿತು ನಬಿ ರಸೂಲ್ ಮ ಮ ದಪುರ್ ಚರ್ಚಿಸಿದರು.
ವರ್ತಮಾನದಲ್ಲಿ ಧರ್ಮ ರಾಜಕಾರಣ ನ್ಯಾಯ ವ್ಯವಸ್ಥೆ ಬಗ್ಗೆ ನ್ಯಾಯವಾದಿಗಳು ಬೆಂಗಳೂರು,
ಚುನಾವಣಾ ಪ್ರಜಾಪ್ರಭುತ್ವ ಈ ಬಗ್ಗೆ ಸುದೀರ್ ಕುಮಾರ್ ಮುರಳ್ಳಿ ನ್ಯಾಯವಾದಿಗಳು ಕೊಪ್ಪ, ಕಾರ್ಯಂಗದ ಬಗ್ಗೆ ನೂರು ಮನಸುರ್ ನಿ.ಅಧಿಕಾರಿ ಧಾರವಾಡ
ಶಿಕ್ಷಣ ವ್ಯವಸ್ಥೆ ಬಗ್ಗೆ ಡಾ. ವಿ ಪಿ ನಿರಂಜನಾರಾದ್ಯ. ಸಿನಿಮಾ ಮಾಧ್ಯಮ ಕುರಿತು ಕನ್ನಡ ಚಲನಚಿತ್ರ ನಿರ್ದೇಶಕ ಕೇಸರಿ ಹರವು ಮಾತನಾಡಿದರು.
ಡಾಕ್ಟರ್ ಅನುಪಮಾ ಹಾಗೂ
ಡಾಕ್ಟರ್ ಸುಚೇತನ ಬಾಳಗಿ
ಸೇರಿದಂತೆ ಹಲವರು ಕಾರ್ಯಕ್ರಮ ನಿರ್ವಹಿಸಿದ್ದರು
ಸಂಜೆ ಸಾಂಸ್ಕೃತಿಯ ಕಾರ್ಯಕ್ರಮದಲ್ಲಿ ಮೈಸೂರಿನ ಕ್ಯಾತ ಗಾಯಕ ಜನಾರ್ಧನ್ ಜನ್ನಿ ಹಾಡು ಹಾಗೂ ಮಾತುಕತೆ ನಡೆಯಿತು.