2023 -24 ನೇ ಸಾಲಿನ ಬರ ಪರಿಹಾರ ಹಣದ ವ್ಯತ್ಯಾಸ ಶೀಘ್ರದಲ್ಲಿ ಸರಿಪಡಿಸಬೇಕು ಹಾಗೂ ಎಲ್ಲ ರೈತರಿಗೆ ಸರಿಯಾದ ಪ್ರಮಾಣದಲ್ಲಿ ಬೆಳೆ ಪರಿಹಾರ ತಲುಪುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ. ಇತ್ತೀಚಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ. ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು. ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂಣಪ್ಪ ಪೂಜಾರ ಮಾತನಾಡಿ. ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಕಟ್ಟಿರುವ ರೈತರಿಗೆ ವಿಮೆ ಹಣ ಕೊಡಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಇತ್ತೀಚಿಗೆ ಸುರಿದ ಮಳೆಯಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಇನ್ನೂ ಜಿಲ್ಲೆಯ ಕೆಲವು ಗ್ರಾಮಗಳಿಗೆ ದನಕರುಗಳಗೋಸ್ಕರಮೇವು ಬ್ಯಾಂಕು ತೆರೆಯಬೇಕು, ಎಂದು ಒತ್ತಾಯಿಸಿದರು.
ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರು ಕಿಶೋರ ಮಿಠಾರಿ ಮಾತನಾಡಿ.ಭೀಕರ ಬರದಿಂದ ರೈತ ಕುಲ ಸಂಕಷ್ಟಕ್ಕೆ ಒಳಗಾಗಿದೆ. ಬಹು ದಿನಗಳ ನಂತರ ಬರ ಪರಿಹಾರ ಬರುವ ಹಣ ಖಾನಾಪುರ ತಾಲೂಕಿನ ಕಕ್ಕೇರಿ,ಭೂರನಕಿ, ರಾಮಾಪುರ, ಸುರಪುರ ಕೇರವಾಡ,ಮಾಸ್ಕೆನಟ್ಟಿ ಸುರಪುರ, ಬೀಡಿ , ತೊಲಗಿ,ಗಂದಿಗವಾಡ, ಸೇರಿದಂತೆ ಹಲವಾರು ಗ್ರಾಮಗಳ, ಹಾಗೂ ಜಿಲ್ಲೆಯ ಸುಮಾರು ತಾಲೂಕುಗಳಲ್ಲಿ ಸರಿಯಾದ ಪ್ರಮಾಣದಲ್ಲಿ ರೈತರ ಖಾತೆಗೆ ಹಣ ಜಮೆ ಯಾಗುತ್ತಿಲ್ಲ ಹಾಗೂ ಅನೇಕರಿಗೆ ಬರ ಪರಿಹಾರವೇ ಜಮೆಯಾಗಿಲ್ಲ ತಕ್ಷಣ ಬೆಳೆ ಪರಿಹಾರ ವ್ಯತ್ಯಾಸ ಸರಿಪಡಿಸಿ ರೈತರ ಖಾತೆಗೆ ಬರ ಪರಿಹಾರ ತಲುಪುವಂತೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ ನಾಯಕ ಮಾತನಾಡಿ. ಬರ ಪರಿಹಾರ ಹಣ ರೈತರಿಗೆ ಹೆಕ್ಟರಿಗೆ ಎಷ್ಟು ಅನ್ನುವುದು ಗೊತ್ತಿಲ್ಲದಂತಾಗಿದೆ. ಕಡಿಮೆ ಹೊಲ ಹೊಂದಿರುವ ರೈತರಿಗೆ, ಹಾಗೂ ಹೆಚ್ಚು ಭೂಮಿ ಹೊಂದಿರುವ ರೈತರಿಗೆ ಒಂದೊಂದು ತರಹ ಹಣ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಿರುವುದು ಸರಿಯಲ್ಲ ಇದನ್ನು ಕೈ ಬಿಟ್ಟು ಸರಿಯಾದ ಪ್ರಮಾಣದಲ್ಲಿ ಖಾತೆಗಳಿಗೆ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ರೈತ ಮುಖಂಡರಾದ, ಯಲ್ಲಪ್ಪ ಚನ್ನಾಪುರ ಬಸವರಾಜ ಮೊಕಾಶಿ, ಕಿಸನ್ ನಂದಿ, ಸೋಮು ರೃನಾಪುರ , ಶಿವಲಿಂಗಪ್ಪ ಪಾಟೀಲ, ಮಲ್ಲನಗೌಡ ಪಾಟೀಲ, ಸಿದ್ರಾಮ ಗಂಗಿ, ಸುರೇಶ ವಾಲಿ, ಪಾಂಡುರಂಗ ಬಿರಣ್ಣಗಡ್ಡಿ, ಇತರರು.


ಜಿಲ್ಲಾಧಿಕಾರಿಗಳು ನಿತೀಶ ಪಾಟೀಲ ಮನವಿ ಸ್ವೀಕರಿಸಿ. 2023-24ನೇ ಸಾಲಿನ ರಾಜ್ಯ ಸರ್ಕಾರದಿಂದ ರೈತರಿಗೆ ಬರ ಪರಿಹಾರ ಹಣವನ್ನು ಕೆಲವರ ಖಾತೆಗೆ ಜಮಾ ಆಗಿವೆ. ಇನ್ನು ಜಿಲ್ಲೆಯಲ್ಲಿ ಲಕ್ಷಾಂತರ ರೈತರಿಗೆ ಹಣಜಮವಾಗಿಲ್ಲ ಏಕೆಂದರೆ ಫ್ರೂಟ್, ಎಫ್ .ಐ .ಡಿ .ರೈತರು ಕಾರ್ಡ್ ಕಡ್ಡಾಯವಾಗಿ ನೋಂದಣಿ ತಮ್ಮ ಕೃಷಿ ಇಲಾಖೆಗೆ ಹೋಗಿ ಮಾಡಿಕೊಳ್ಳಿ ತಮ್ಮ ಅಕೌಂಟಿಗೆ ನೇರವಾಗಿ ಹಣ ಸಂದಾಯವಾಗುತ್ತದೆ. ಮೇವು ಬ್ಯಾಂಕು ಎಲ್ಲಿ ಇಲ್ಲ ಅಲ್ಲಿ ತಕ್ಷಣ ಮಾಡಿಸುವುದಾಗಿ ಭರವಸೆ ನೀಡಿದರು. ರೈತರು ಭಯಪಡದೆ ಧೈರ್ಯಯಿಂದ ಇರಬೇಕೆಂದು ಹೇಳಿದರು.

ಖಾನಾಪುರ ತಾಲೂಕು, ಹಾಗೂ ಬೆಳಗಾವಿ ಜಿಲ್ಲೆಯ ಸುಮಾರು ತಾಲೂಕುಗಳ ರೈತರಿಗೆ ಬರ ಪರಿಹಾರ ಹಾಗೂ ಬೆಳೆ ಪರಿಹಾರದಲ್ಲಿ ರೈತರಿರಾದ ಅನ್ಯಾಯ ಶೀಘ್ರ ಸರಿಪಡಿಸುವಂತೆ ಒತ್ತಾಯಿಸಿ . ಜಿಲ್ಲಾಧಿಕಾರಿಗಳು ನಿತೀಶ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರಾಜ್ಯಾಧ್ಯಕ್ಷ ಚೂಣಪ್ಪ ಪೂಜಾರಿ , ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರು ಕಿಶೋರ ಮಿಠಾರಿ , ರೈತ ಮುಖಂಡರಾದ ಪ್ರಕಾಶ ನಾಯಕ, ಬಸವರಾಜ ಮೋಕಾಶಿ, ಸುರೇಶ ವಾಲಿ, ಪಾಂಡುರಂಗ ಬಿರಣ್ಣಗಡ್ಡಿ, ಕಿಶನ ನಂದಿ, ಸೋಮು ರೃನಾಪುರ, ಶಿವಲಿಂಗಪ್ಪ ಪಾಟೀಲ, ಮಲ್ಲನಗೌಡ ಪಾಟೀಲ,ಸಿದ್ರಾಮ ಗಂಗಿ, ಇತರರು.

LEAVE A REPLY

Please enter your comment!
Please enter your name here