ಬೆಂಗಳೂರು:ರಾಜ್ಯದಲ್ಲಿ ಬರ ಪರಿಹಾರ ಹಣ ಬೆಳೆ ನಷ್ಟ ಪರಿಹಾರ ನ್ಯಾಯಎಪ್ಪತ್ತು ಲಕ್ಷ ರೈತರ ಪೈಕಿ 27 ಲಕ್ಷ ರೈತರಿಗೆ ನಷ್ಟ ಪರಿಹಾರ ಎಂದು 500 -1000 ಮಾತ್ರ ವಿತರಿಸಲಾಗಿದೆ ಸಮತವಾಗಿಲ್ಲ. ಸಮೀಕ್ಷೆ ಮಾರ್ಗಸೂಚಿ ಬದಲಾಯಿಸಿ ರೈತರ ಸಂಪೂರ್ಣ ನಷ್ಟ ತುಂಬಿಕೊಡಿ . ರಾಜ್ಯ ಸರ್ಕಾರಕ್ಕೆ 20 ದಿನದ ಗಡುವು .
ರಾಜ್ಯದಲ್ಲಿ ಬರಗಾಲಕ್ಕೆ ತುತ್ತಾದ ರೈತರಿಗೆ ಬಿಡುಗಡೆ ಮಾಡಿರುವ ಪರಿಹಾರದ ಹಣ ನಷ್ಟ ಪರಿಹಾರದ ಮಾರ್ಗಸೂಚಿ. ಸಮೀಕ್ಷೆ ನ್ಯಾಯ ಸಮ್ಮತವಾಗಿಲ್ಲ. ಎಪ್ಪತ್ತು ಲಕ್ಷ ರೈತರ ಪೈಕಿ 27 ಲಕ್ಷ ರೈತರಿಗೆ ನಷ್ಟ ಪರಿಹಾರ ಎಂದು 500 -1000 ಮಾತ್ರ ವಿತರಿಸಲಾಗಿದೆ. ಸಮೀಕ್ಷೆ ಮಾಡಿದ ಅಧಿಕಾರಿಗಳು ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಸಮೀಕ್ಷೆ ಮಾಡಿದ್ದೇವೆ ಎನ್ನುತ್ತಾರೆ. ಬರಗಾಲಕ್ಕೆ ತುತ್ತಾದ 223 ತಾಲೂಕಿನ ಹಳ್ಳಿಗಳಲ್ಲಿ ಕೆಲವೇ ಕೆಲವು ರೈತರಿಗೆ ರಾಗಿ ಜೋಳ ಮೆಕ್ಕೆಜೋಳ ಬೆಳೆಗಳಿಗೆ ಬೆಳೆ ನಷ್ಟ ಎಂದು ಹಣ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರದ ನಿರ್ದೇಶನದಂತೆ ಎಂದು ತಿಳಿದು ಬಂದಿದೆ ಇದು ಸರಿಯಾದ ಕ್ರಮ ಅಲ್ಲ ಕೂಡಲೇ ಮಾರ್ಗಸೂಚಿ ಬದಲಾಯಿಸಿ ಮರು ಪರಿಶೀಲನೆ ನಡೆಸಲಿ ಸಂಕಷ್ಟದಲ್ಲಿ ಎಲ್ಲ ರೈತರಿಗೂ ಪರಿಹಾರ ಸಿಗುವಂತಾಗಲಿ
ಬರಗಾಲಕ್ಕೆ ತುತ್ತಾಗಿ ನೀರಿಲ್ಲದೆ ಕಬ್ಬು ಬೆಳೆ ರಾಜ್ಯದಲ್ಲಿ ಶೇಕಡ 30 ರಷ್ಟು ಒಣಗಿ ಹೋಗಿದೆ ಬತ್ತ .ತೆಂಗು. ಸಹ ನೀರಿಲ್ಲದೆ ಒಣಗಿ ಹೋಗಿದೆ ಈ ಬೆಳೆಗಳಿಗೆ ಪರಿಹಾರ ನೀಡಿಲ್ಲ. ಕಾವೇರಿ ಅಚ್ಚುಕಟ್ಟು ಭಾಗದಲ್ಲಿ ಭತ್ತ ಬೆಳೆಯಲು ನೀರು ಹರಿಸದೆ ಇದ್ದ ಕಾರಣ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದೇ ರೈತರು ಸಂಪೂರ್ಣ ಸಂಕಷ್ಟ ಅನುಭವಿಸಿದ್ದಾರೆ ರಾಜ್ಯದಲ್ಲಿ ಸುಮಾರು 15 ಲಕ್ಷ ಕೃಷಿ ಪಂಪ್ಸೆಟ್ಟುಗಳ ನೀರು ಬತ್ತಿ ಹೋದ ಕಾರಣ ಆ ರೈತರ ಬೆಳೆಗಳು ಒಣಗಿ ನಾಶವಾಗಿ ರೈತರನ್ನು ಮತ್ತಷ್ಟು ಕಂಗಾಲು ಮಾಡಿದೆ. ಈ ರೈತರಿಗೂ ಪರಿಹಾರ ಸಿಕ್ಕಿಲ್ಲ ಇಂತಹ ಎಲ್ಲಾ ರೈತರಿಗೂ ಸೂಕ್ತ ನಷ್ಟ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಿ
ಈಗ ತಾನೆ ಬಿದ್ದ ಭಾರಿ ಮಳೆ ಬಿರುಗಾಳಿಗೆ ತುತ್ತಾಗಿ ಬಾಳೆ ಮಾವು ತರಕಾರಿ ಇನ್ನಿತರ ಬೆಳೆಗಳು ನಾಶವಾಗಿವೆ ರೈತರು ಲಕ್ಷಾಂತರ ರೂ ನಷ್ಟ ಹೊಂದಿದ್ದಾರೆ ಸಂಕಷ್ಟಕ್ಕೆ ಸಿಲುಕಿದ ರೈತನಿಗೆ ಮತ್ತೊಂದು ಒಡೆತ ಬಿದ್ದಿದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕೂಡಲೇ ವೈಜ್ಞಾನಿಕ ಸಮೀಕ್ಷೆ ನಡೆಸಿ ಸರ್ಕಾರದ ಮಾರ್ಗಸೂಚಿ ಬದಲಾಯಿಸಿ ಸಂಪೂರ್ಣ ನಷ್ಟ ಪರಿಹಾರ ನೀಡಬೇಕು ಹಾಗೂ ಈ ರೈತರು ಮಾಡಿರುವ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸುತ್ತೇವೆ
ರಾಜ್ಯ ಸರ್ಕಾರ ಸುಮಾರು 27 ಲಕ್ಷದಷ್ಟು ರೈತರಿಗೆ ಬರದ ನಷ್ಟ ಪರಿಹಾರ ಎಂದು ಎರಡು ಸಾವಿರ .ಮೂರು ಸಾವಿರ ನೀಡಿದ್ದಾರೆ ಕೆಲವು ರೈತರಿಗೆ 300-.500 ಕೂಡ ಬಂದಿದೆ ಇದು ಸಂಕಷ್ಟದಲ್ಲಿರುವ ರೈತರನ್ನು ರಕ್ಷಣೆ ಮಾಡುವ ಕ್ರಮ ಅಲ್ಲ. ರಾಜ್ಯ ಸರ್ಕಾರದ ಎಸ್‌ಡಿಅರ್ ಎಫ್ ಮಾನದಂಡದಂತೆ ಕನಿಷ್ಠ ಹೆಕ್ಟೇರಿಗೆ 13,500 ರೂನಂತೆ ಎರಡು ಹೆಕ್ಟೇರಿಗೆ ನಷ್ಟ ಪರಿಹಾರದ ಹಣ ರೈತರಿಗೆ ಬಿಡುಗಡೆ ಮಾಡಲಿ
ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಬಾವಿಗಳಲ್ಲಿ ಅಂತರ್ಜಲ ಬತ್ತಿ ಹೋದ ಕಾರಣ ಲಕ್ಷಾಂತರ ಎಕರೆ ಕಬ್ಬು ತೆಂಗು ಬೆಳೆ ನೀರಿಲ್ಲದೆ ಒಣಗಿಹೋಗಿದೆ ಈ ರೈತರು ಸಾಲ ಮಾಡಿದ್ದಾರೆ ಈ ಬಗ್ಗೆ ಸಮೀಕ್ಷೆ ಮಾಡಿ ಇವರಿಗೆ ಸೂಕ್ತ ಪರಿಹಾರ ನೀಡಿ ಸಾಲವನ್ನು ಸಹ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು
2023ರಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಕಬ್ಬಿನ ಹೆಚ್ಚುವರಿ ದರ ಪ್ರತಿ ಟನ್ಗೆ 150 ರೂ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಪಾವತಿ ಆಗಿಲ್ಲ. ಕಳೆದ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿರುವ ರೈತರಿಗೆ 1500 ಕೋಟಿ ಹಣ ಕಾರ್ಖಾನೆಗಳು ಪಾವತಿಸಿಲ್ಲ. ಕೂಡಲೇ ಹಣ ಕೊಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.
2023-24ನೇ ಸಾಲಿನ ಕಬ್ಬಿನ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಿ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಹೆಚ್ಚುವರಿ ಹಣ ಕೊಡಿಸಬೇಕು.
ಇಂದು ಈ ಒತ್ತಾಯಗಳ ಬಗ್ಗೆ ಬರಗಾಲ ಹಾಗೂ ವಿಪ್ಪತ್ತು ನಿರ್ವಹಣಾ ಪಡೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ರವರನ್ನು ಬೇಟಿ ಮಾಡಿ ಚರ್ಚಿಸಲಾಯಿತು ಹಾಗೂ ಕೃಷಿ ಇಲಾಖೆ ಆಯುಕ್ತರಾದ ಪಾಟೀಲ್ ರವರ ಜೊತೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಚರ್ಚಿಸಿ ಒತ್ತಾಯಿಸಲಾಯಿತು
ನಿಯೋಗದ ಮುಖಂಡತ್ವವನ್ನು
ಕುರುಬೂರ್ ಶಾಂತಕುಮಾರ್ ರಾಜ್ಯಾಧ್ಯಕ್ಷರು ರಾಜ್ಯ ರೈತ ಸಂಘಟನೆಗಳ ಒಕ್ಕೂಟ .ರಾಜ್ಯ ಕಬ್ಬು ಬೆಳೆಗಾರರ ಸಂಘ .ಕರ್ನಾಟಕ. ರೈತ ಮುಖಂಡರುಗಳಾದ ನಿಜಗುಣ ಕೇಲಗೆರಿ ದಾರವಾಡ ಜಿಲ್ಲೆ. ಧರ್ಮರಾಜ್ ಹಾಸನ
ಆತ್ತಹಳ್ಳಿ ದೇವರಾಜು
ಮೈಸೂರು. ರಾಜಯೋಗಿ ದಾವಣಗೆರೆ
ಕೊಟ್ರೇಶ ಚೌದರಿ
ಯಾದಗಿರಿ ಜಿಲ್ಲೆ
ಬರಡನಪುರ ನಾಗರಾಜ್.ಮೈಸೂರು. ಇದ್ದರು