ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾಜಿ ಶಾಸಕರಾದ ಪ್ರೊಫೆಸರ್‌ ರಾಜು ಆಲಗೂರವರ ಪರ ಪ್ರಚಾರ ಬಿರುಸಿನಿಂದ ನಡೆದಿದ್ದು.ಸತಾಯಗತಾಯ ಪ್ರಯತ್ನಿಸಿ ಈ ಬಾರಿ ಸಂಸದ ರಮೇಶ ಜಿಗಜಿಣಗಿಯವರನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸಬೇಕೆಂಬ ಛಲದೊಂದಿಗೆ ಪ್ರಚಾರ ಕೈಗೊಂಡಿರುವ ಸ್ಥಳಿಯ ನಾಯಕರುಗಳು ಇಂದು ಬೆಳಗ್ಗೆ ವಿಜಯಪುರ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀ ರಾಜು ಆಲ್ಗೂರ್ ಮಹಾನಗರ ಪಾಲಿಕೆ ಉಪಮೇಯರ್ ದಿನೇಶ್ ಹಳ್ಳಿ ನಾಗರಾಜ್ ಲಂಬು ಮತ್ತು ಜಿಲ್ಲಾಪಂಚಾಯತಿ ಮಾಜಿ ಅಧ್ಯಕ್ಷೆ ಶ್ರೀ ಮತಿ ಸುಜಾತಾ ಕಳ್ಳಿಮನಿಯವರ ಪತಿ ಜಿಲ್ಲಾಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಸೋಮನಾಥಕಳ್ಳಿಮನಿ ಸೇರಿ ಅನೇಕ ಪ್ರಮುಖ ವಾಯುವಿಹಾರದ ಸ್ಥಳಗಳು ಮತ್ತು ಕ್ರೀಡಾಂಗಣಕ್ಕೆ ಭೇಟಿಕೊಟ್ಟು ಕಾಂಗ್ರೆಸ್ ಬೆಂಬಲಿಸಲು ವಿನಂತಿಸಿ ಕೊಂಡರು.

LEAVE A REPLY

Please enter your comment!
Please enter your name here