ಕರ್ನಾಟಕ ಹೈಕೋರ್ಟ್ ನಲ್ಲಿ ಏಪ್ರಿಲ್23 ರಂದು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಫೆಡರೇಶನ್ ನೇತೃತ್ವದಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಕುರಿತಾಗಿ ಮಧ್ಯಂತರ ಆದೇಶ ನೀಡಿರುವ ನ್ಯಾಯಾಲಯವು ಅರ್ಜಿದಾರರಾದ ಇಬ್ಬರು ವಿದ್ಯಾರ್ಥಿನಿಯರಿಗೆ ಅವರು ತುಂಬಿರುವ ಕಾಲೇಜು ಶುಲ್ಕವನ್ನು ಈ ಆದೇಶವಾಗಿರುವ ನಾಲ್ಕು ವಾರದೊಳಗೆ ಅವರ ಖಾತೆಗೆ ಪಾವತಿಸಲು ಮಹತ್ವದ ಆದೇಶ ನೀಡಿದೆ. ಒಂದು ವೇಳೆ ಕಲ್ಯಾಣ ಮಂಡಳಿಯು ದಂಡ ಸಹಿತ ಈ ಹಣವನ್ನು ವಿದ್ಯಾರ್ಥಿಗಳ ಖಾತೆಗೆ ನಿಗದಿತ ಅವಧಿಯೊಳಗೆ ಪಾವತಿಸಲು ವಿಫಲವಾದರೆ ಬಳಿಕದ ಪ್ರತಿದಿವಸಕ್ಕೂ ಐನೂರು ರುಪಾಯಿ ಗಳನ್ನು ಪ್ರತಿ ವಿದ್ಯಾರ್ಥಿನಿಯರಿಗೆ ದಂಡವಾಗಿ ಮಕ್ಕಳ ಖಾತೆಗೆ ಪಾವತಿಸಬೇಕು ಎಂದು ನ್ಯಾಯಮೂರ್ತಿ ಶ್ರೀ‌ನಾಗಪ್ರಸನ್ನ ಅವರು ಆದೇಶಿಸಿ ಮುಂದಿನ ವಿಚಾರಣೆಯ ಯನ್ನು ಜೂನ್ 4 ಕ್ಕೆ ಮೂಂದೂಡಿದ್ದಾರೆ. ಏಪ್ರಿಲ್ 8 ರಂದು ಈ ಕುರಿತು ಸಲ್ಲಿಕೆಯಾಗಿದ್ದ ಪಿಐಎಲ್ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯವು ರಾಜ್ಯ ಸರ್ಕಾರ ಹಾಗೂ ಕಲ್ಯಾಣ ಮಂಡಳಿಗೆ ನೋಟೀಸ್ ಜಾರಿ ಮಾಡಿತ್ತು ಮತ್ತು ಅರ್ಜಿದಾರರಾದ ಇಬ್ಬರು ವಿದ್ಯಾರ್ಥಿನಿಯರು ಪಾವತಿಸಿರುವ ಶೈಕ್ಷಣಿಕ ಧನಸಹಾಯ ಮರುಪಾವತಿಗೆ ಅಗತ್ಯವಿರುವ ಕ್ರಮವಹಿಸಿ ಎಂದು‌ ಸರ್ಕಾರಕ್ಕೆ ಹಾಗೂ ಕಲ್ಯಾಣ ಮಂಡಳಿ ವಕೀಲರಿಗೆ ಮೌಖಿಕ ಆದೇಶ ನೀಡಿ ವಿಚಾರಣೆಯನ್ನು ಏಪ್ರಿಲ್23 ಕ್ಕೆ ಮುಂದೂಡಿತ್ತು. ಏಪ್ರಿಲ್‌ 23 ರ‌ ಬೆಳೆಗ್ಗೆ‌ ಅರ್ಜಿಯ ವಿಚಾರಣೆ ನಡೆಸಿದಾಗ ನ್ಯಾಯಮೂರ್ತಿಗಳ ಮುಂದೆ ಕಲ್ಯಾಣ ಮಂಡಳಿಯು ಹಿಂದಿನ ಮೌಖಿಕ ಆದೇಶವನ್ನು ಪಾಲಿಸಲು ಯಾವುದೇ ಕ್ರಮವಹಿಸಿಲ್ಲ ಎನ್ನುವ ವಿದ್ಯಾರ್ಥಿಗಳ ಪರವಾದ ವಕೀಲರ ಮನವಿಯನ್ನು ಪರಿಗಣಿಸಿ ಮಧ್ಯಾನ್ಹ 2.30 ರೊಳಗೆ ಅರ್ಜಿದಾರ ಇಬ್ಬರೂ ವಿದ್ಯಾರ್ಥಿಗಳಿಗೆ ಕ್ರಮವಾಗಿ ರೂ 30000 ಹಾಗೂ ರೂ 35000 ಶೈಕ್ಷಣಿಕ ಧನ ಸಹಾಯಪಾವತಿಸಲು ಸೂಚನೆಯನ್ನು ನೀಡಿ ವಿಚಾರಣೆಯನ್ನು ಮಧ್ಯಾನ್ಹಕ್ಕೆ ಮುಂದೂಡಿತು.
ಮಧ್ಯಾನ್ಹ ವಿಚಾರಣೆ ಆರಂಭಿಸಿದಾಗ ಮಂಡಳಿಯು ನ್ಯಾಯಾಲಯದ ಆದೇಶದ ಅನ್ವಯ ಇಬ್ಬರೂ ವಿದ್ಯಾರ್ಥಿಗಳ ಖಾತೆಗೆ ಹಣ ಪಾವತಿಸಲು ಯಾವುದೇ ಕ್ರಮವಹಿಸಲಿಲ್ಲ ಈ ಅಂಶವನ್ನು ಮಕ್ಕಳ ಪೊಷಕರ ಬ್ಯಾಂಕ್ ಖಾತೆ ವಿವರಸಹಿತ ದಾಖಲೆಗಳನ್ನು ಅರ್ಜಿದಾರ ವಕೀಲರು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.ಆದರೆ ಮಂಡಳಿ‌ಪರವಾಗಿ ಹಾಜರಿದ್ದ ವಕೀಲರು ಮಂಡಳಿ ಹಿಂದಿನ ತೀರ್ಮಾನದಂತೆ ಕೇವಲ ರೂ 10 ಹಾಗೂ 11 ಸಾವಿರ ರುಪಾಯಿಗಳನ್ನು ಮಾತ್ರವೇ ಪಾವತಿಸಲು‌ ಸಾಧ್ಯ ಎನ್ನುವ ಅಭಿಪ್ರಾಯ ಮಂಡಿಸಿದರು ಆದರೆ ಕಲ್ಯಾಣ ಮಂಡಳಿ ಪರವಾಗಿ ವಾದ‌ ಮಂಡಿಸಿದ ವಕೀಲರ ಅಭಿಪ್ರಾಯವನ್ನು ನ್ಯಾಯಮೂರ್ತಿ ಒಪ್ಪಲಿಲ್ಲ ಸರ್ಕಾರ ಹೊಸದಾದ‌ ಅಧಿಸೂಚನೆ ಹೊರಡಿಸುವ ಮುಂಚೆಯೇ ಈ ಎರಡು ವಿದ್ಯಾರ್ಥಿನಿಯರು ಮಂಡಳಿ ಹಿಂದೆ ನೀಡುತ್ತಿದ್ದ ರೂ 30.000 ಹಾಗೂ ರೂ 35.000 ಶೈಕ್ಷಣಿಕ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಆದರೆ 10 ತಿಂಗಳಾದರೂ ಕಲ್ಯಾಣ ಮಂಡಳಿ ಆ ಅರ್ಜಿಗಳನ್ನು ಇತ್ಯರ್ಥ ಪಡಿಸದೇ ಶೈತ್ಯಗಾರದಲ್ಲಿ ಇಟ್ಟಿದ್ದು ನ್ಯಾಯಸಮ್ಮತವೇ ನಿತ್ಯ ಯಾವೊಂದು ಸರ್ಕಾರಿ ನೌಕರರಿಗೆ ಸಿಗುವ ಯಾವೊಂದು ಭತ್ಯೆಗಳು ಇಲ್ಲದೆ ಬಿಸಿಲಿನಲ್ಲಿ ಬೆವರು ಸುರಿಸುವ ಬಡ ಕಾರ್ಮಿಕರ ಕುರಿತಾಗಿ ಅವರದ್ದೆ ಶ್ರಮದಿಂದ ಸಂಗ್ರಹವಾಗಿರುವ ರೂ‌ 8200 ಕೋಟಿ ಕಲ್ಯಾಣ ನಿಧಿ ಇದ್ದಾಗ್ಯೂ ಅವರ ಮಕ್ಕಳಿಗೆ ನ್ಯಾಯಬದ್ದವಾಗಿ ದೊರಕಬೇಕಾದ ಶೈಕ್ಷಣಿಕ ಧನಸಹಾಯವನ್ನು ನಿರಾಕರಣೆ ಯಾವ‌ಕಾರಣದಿಂದಲೂ ಸಮರ್ಥನೀಯವಲ್ಲ‌ಎಂದು ನ್ಯಾಯಮೂರ್ತಿ ಶ್ರೀ ನಾಗಪ್ರಸನ್ನ ಏಪ್ರಿಲ್ 23. ರಂದು ನೀಡಿದ ಮಧ್ಯಂತರ ಆದೇಶದಲ್ಲಿ ಮಂಡಳಿಯ ಅಧಿಕಾರಶಾಹಿತನವನ್ನು ಮತ್ತು ಬಡ ಕಾರ್ಮಿಕರು ಹಾಗೂ ಅವರ ಮಕ್ಕಳು ತಮಗೆ ದೊರಕಬೇಕಾದ ನ್ಯಾಯಬದ್ಧ ಶೈಕ್ಷಣಿಕ ಧನಸಹಾಯ ಪಡೆಯಲು ನ್ಯಾಯಾಲಯದ ‌ಮೆಟ್ಟಿಲು ಹತ್ತುವಂತೆ ಮಾಡಿದ ಕಲ್ಯಾಣ ಮಂಢಳಿ‌ ಕ್ರಮವನ್ನುಅತ್ಯಂತ ಖಾರವಾಗಿ ನ್ಯಾಯಮೂರ್ತಿಗಳು ಟೀಕಿಸಿದ್ದಾರೆ.‌ ಬಡ ಕಟ್ಟಡ ಕಾರ್ಮಿಕರು ಹಾಗೂ ಅವರ‌ ಮಕ್ಕಳ ಪರವಾಗಿ ಸಮರ್ಥವಾಗಿ ದಾಖಲೆ ಸಹಿತ ವಾದ ಮಂಡಿಸಿದ ವಕೀಲರಾದ ಶ್ರೀ ಆದಿತ್ ಚಟರ್ಜಿ ಹಾಗೂ ಅವರ ಸಹಾಯಕರಾದ ಅಕ್ಷತಾ ಗೋಯಲ್ ಹಾಗೂ ಕೀ ಸ್ಟೋನ್ ಲಾ ಪಾರ್ಮ ಎಲ್ಲ ಸಿಬ್ಬಂದಿ ಗಳಿಗೂ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ)ಸಿಐಟಿಯು ಅಭಿನಂದನೆಗಳನ್ನು ಸಲ್ಲಿಸಿದೆ.ಕರ್ನಾಟಕ ಹೈಕೋರ್ಟ್ ‌ನೀಡಿರುವ ಈ‌ ಮಧ್ಯಂತರ ಆದೇಶವು ತಮ್ಮ ಉನ್ನತ ಶಿಕ್ಷಣ ಮುಂದುವರೆಸಲು ಕಷ್ಟಪಡುತ್ತಿದ್ದ ಸಾವಿರಾರು ಬಡ‌ಕಟ್ಟಡ ಕಾರ್ಮಿಕರ ‌ಮಕ್ಕಳಿಗೆ ಅವರ ಶೈಕ್ಷಣಿಕ ಬದುಕು ಮತ್ತು ಅವರ ಭವಿಷ್ಯಕ್ಕೆ ಸಹಾಯ‌ಮಾಡಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) ನ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here