ರಾಯಚೂರು: ನಾನು 2010 ರಿಂದ ರಾಜಕೀಯದಲ್ಲಿ ಸಕ್ರಿಯವಾಗಿ ಇದೆ ಆದರೇ 2018 ನೇ ನಗರಸಭೆ ಚುನಾವಣೆ ಮತ್ತು ವಿಧಾನ ಸಭೆ ಚುನಾವಣೆ ನಂತರ ರಾಜಕೀಯದಿಂದ ದೂರವಿದೆ ಆದರೇ 2023 ನೆ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್ ಪಕ್ಷದ ಸರ್ಕಾರದ ಕೊಟ್ಟ ಮಾತು ನೆರವೇರಿಸಿದ್ದು ನೋಡಿ ಹಾಗೂ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಮನೆಯ ಮಾಲೀಕರಿಗೆ ರೂ. 2000/- ತಿಂಗಳಿಗೆ ನೀಡುತ್ತಿದ್ದು, ಅಲ್ಲದೇ ಗೃಹಜ್ಯೋತಿ ಯೋಜನೆ ಅಡಿಯಲ್ಲಿ 200 ಯುನಿಟ್ ಉಚಿತ ವಿದ್ಯುತ್ ಹಾಗೂ ಪದವಿಧರರಿಗೆ ರೂ. 3000/- ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ರೂ. 1500/- ಮಂಜೂರು ಮಾಡಿ ನುಡಿದಂತೆ ನಡೆದ ಕಾಂಗ್ರೆಸ್ ಪಕ್ಷದ ಕಂಡು ಹಾಗೂ ಸರಕಾರದ ಕಾರ್ಯಕ್ರಮಗಳನ್ನು ನೋಡಿ ನನಗೆ ಮೆಚ್ಚಿಗೆ ಹಾಗೂ ಹೆಮ್ಮೆಯಿಂದ ಕಾಂಗ್ರೇಸ್ ರಾಷ್ಟ್ರೀಯ ಯುವ ನಾಯಕ, ಯುವಕರ ಕಣ್ಮಣಿ ಶ್ರೀ ರವಿ ಬೋಸ್ ರಾಜು, ಬಸವರಾಜ ರೆಡ್ಡಿ, ಬಷೀರುದ್ದೀನ್, ಎಂ.ಪವನ್ ಕುಮಾರ, ಶಿವಮೂರ್ತಿ, ಅಂಬಣ್ಣ ಅರೋಲಿ, ಕುಮಾರ ಅಣ್ಣ ಇವರ ಸಮ್ಮುಖದಲ್ಲಿ ವಿಶ್ವನಾಥ ಪಟ್ಟಿ, ಅಂಜಿನಯ್ಯ ಮತ್ತು ಹಲವಾರು ಸ್ನೇಹಿತರ ಜೊತೆಗೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಮೊಹಮ್ಮದ್ ತಾಜುದ್ದೀನ್ ಖಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.