ವಿಜಯಪುರ:ಇಡೀ ವಿಜಾಪುರ ನಗರವೇ ಇಂದು ಕಾಂಗ್ರೆಸ್ ಮಯವಾಗಿತ್ತು. ಎಲ್ಲಿ‌ ನೋಡಿದಲ್ಲಿ ಕಾಂಗ್ರೆಸ್ ಬಾವುಟಗಳನ್ನು ಹಿಡಿದು, ಕಾಂಗ್ರೆಸ್ ಟೋಪಿ, ಶಾಲು ಧರಿಸಿದ ಸುಮಾರು 50 ಸಾವಿರದಷ್ಟಿದ್ದ ಕಾರ್ಯಕರ್ತರು ಬಿರುಬಿಸಿಲನ್ನೂ ಲೆಕ್ಕಿಸದೆ ನಗರದ ರಸ್ತೆಗುಂಟ ನಡೆದರು. ಬಂಜಾರಾ ಹೆಣ್ಣುಮಕ್ಕಳು ಹಲಗೆಮೇಳಕ್ಕೆ ಹೆಜ್ಜೆ ಹಾಕಿದರು.

ಇಂಥ ಅಪಾರ ಜನಸ್ತೋಮದೊಂದಿಗೆ ಸಿದ್ಧೇಶ್ವರ ದೇಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬಂದ ವಿಜಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರು ನಾಮಪತ್ರ ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಕ್ಕರೆ ಸಚಿವ ಶಿವಾನಂದ ಪಾಟೀಲ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಸಿಂದಗಿ ಶಾಸಕ ಅಶೋಕ ಮನಗೂಳಿ, ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ, ನಾಗಠಾಣ ಶಾಸಕ ವಿಠ್ಠಲ ಕಟಕದೋಂಡ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಡಾ. ಮಕಬೂಲ ಬಾಗವಾನ, ಮುಖಂಡರಾದ ಹಮೀದ್ ಮುಷರಿಫ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮಹಿಳಾ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಸೇರಿದಂತೆ ಪಕ್ಷದ ವಿವಿಧ ಸ್ತರದ ಮುಖಂಡರು ಪ್ರೊ. ರಾಜು ಆಲಗೂರ ಅವರಿಗೆ ಜೊತೆಗೂಡಿದರು.

LEAVE A REPLY

Please enter your comment!
Please enter your name here