ದಾವಣಗೆರೆ:ಜಗಳೂರು ತಾಲೂಕನ್ನು ಸಮಗ್ರ ನೀರಾವರಿಗೆ ಒಳಪಡಿಸಬೇಕೆಂದು ಒತ್ತಾಯಿಸಿ..ಇದೇ 13ರಂದು ಶನಿವಾರ ಜಗಳೂರು ಬಂದ್ ಕರೆಯಲಾಗಿದ್ದು,ಈ ಕಾರ್ಯಕ್ರಮದ ಪೂರ್ವಭಾವಿಯಾಗಿ (ಸೋಮವಾರ) ಮಾಧ್ಯಮದವರ ಸಮ್ಮುಖದಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಬಂದ್ ಸ್ವಯಂ ಪ್ರೇರಿತವಾಗಿದ್ದು,ಶಾಂತಿಯುತವಾಗಿ
ನಡೆಸಲು ರೈತರು,ವರ್ತಕರು,ಸಾರಿಗೆ ಮಾಲೀಕರು,
ಕಾರ್ಮಿಕರು,ಕೈಗಾಡಿಯವರು, ಬೀದಿಬದಿ ವ್ಯಾಪಾರಿಗಳು,
ಆಟೋರಿಕ್ಷಾದವರು,ಹೀಗೆ ವಿವಿಧ ವರ್ಗದ ವೃತ್ತಿ ಬಾಂಧವರು ತೀರ್ಮಾನಿಸಿದ್ದಾರೆ.ಈ ನಿರ್ಧಾರಕ್ಕೆ
ವಿದ್ಯಾರ್ಥಿ ಯುವಜನರು, ರೈತ,ಮಹಿಳೆಯರು,ವಿವಿಧ
ವರ್ಗದ ಕಾರ್ಮಿಕರು,ಮುಖ್ಯವಾಗಿ ಜಗಲೂರು
ಪಟ್ಟಣದ ನಾಗರೀಕ ಬಂಧುಗಳು ಸಂಪೂರ್ಣ
ಬೆಂಬಲ ವ್ಯಕ್ತಪಡಿಸಿದ್ದಾರೆ.
ಹದಿನೈದು ವರ್ಷದ ನಿರಂತರ..ಹೋರಾಟದ
ಫಲಶ್ರುತಿ ಎನ್ನುವಂತೆ ತಾಲೂಕಿಗೆ 2.40 ಟಿ.ಎಂ.ಸಿ.
ನೀರನ್ನು ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ
ಅಡಿಯಲ್ಲಿ ಹರಿಸಲು ರಾಜ್ಯ ಸರ್ಕಾರ ಈಗಾಗಲೇ
ಹಸಿರು ನಿಶಾನೆ ತೋರಿಸಿದೆ. ಜೊತೆಗೆ 57 ಕೆರೆಗಳಿಗೆ
ನೀರು ತುಂಬಿಸುವ ಕಾಮಗಾರಿಯೂ.. ಚಾಲ್ತಿಯಲ್ಲಿದೆ.
ಈ ನಿರ್ಧಾರದಿಂದ ನಮ್ಮ ತಾಲೂಕಿನ ಶೇ.30ರಷ್ಟು ಭಾಗಕ್ಕೆ ನೀರು ಕೊಡಲು ಸಾಧ್ಯ.ಇನ್ನುಳಿದ ಶೇ.70ಭಾಗಕ್ಕೆ ನೀರು ತರಲು ನಿರಂತರ ಹೋರಾಟ ಮಾಡಬೇಕಿದೆ.
ಮತ್ತೊಂದು ಗಮನಾರ್ಹ ಸಂಗತಿಯೇನೆಂದರೆ, ಈಗ
ಚಾಲ್ತಿಯಲ್ಲಿರುವ ಭದ್ರಾ ಮೇಲ್ದಂಡೆ ಯೋಜನೆ
ಕಾಮಗಾರಿಗಳು ಯಾವ ಹಂತದಲ್ಲಿವೆ..? ಕೆರೆ ನೀರು
ತುಂಬಿಸುವ ಕಾಮಗಾರಿಗಳ ಹಕೀಕತ್ ಏನು..?!
ಎಂಬುದರ ಸ್ಪಷ್ಟ ಚಿತ್ರಣವಿಲ್ಲ. ಹೀಗಾಗಿ ಈ ಎರಡೂ
ಯೋಜನೆಗಳ ಸ್ಪಷ್ಟ ಚಿತ್ರಣ ಬೇಕು!! ಹಾಗೆಯೇ ಈ
ಎರಡೂ ಯೋಜನೆಗಳು ಆದಷ್ಟು ಶೀಘ್ರವಾಗಿ
ಅನುಷ್ಠಾನಗೊಳಿಸಬೇಕು.
ಈ ವರ್ಷವೇನು..? ಕಳೆದ ಬಹುತೇಕ ವರ್ಷಗಳಲ್ಲಿ
ಮಳೆ ಇಲ್ಲದೆ ಬೆಳೆಗಳು ನೆಲ ಕಚ್ಚಿ ರೈತರ ದಿಕ್ಕೆಟ್ಟ
ಬದುಕು ಹೇಳತೀರದು. ಈ ವರ್ಷವಂತೂ ರೈತರ
ಬದುಕು ಅಕ್ಷರಶಃ ನರಕ!! ನೀರು ಪಾತಾಳದತ್ತತ್ತ..
ಸರಿದು ಕೊರೆದ ಬೋರ್ವೆಲ್ಗಳೆಲ್ಲಾಲ್ಲಾ ನೀರೇ ಇಲ್ಲ.
ಬಿತ್ತಿದ ಅಡಿಕೆ ಬೆಳೆಗಳು ಒಣಗಿ ಹೋಗಿ ಬಹುತೇಕ
ರೈತ ಕುಟುಂಬಗಳು ತತ್ತರಿಸಿ ಹೋಗಿವೆ. ತೋಟಗಾರಿಕಾ
ಬೆಳೆಗಳಾದ ತೆಂಗು, ಬಾಳೆ,ದಾಳಿಂಬೆ, ಪಪ್ಪಾಯಿ,ಸೀಬೆ,
ಒಣಗಿ ಸದೃಶ್ಯ ನರಕ ವಾತಾವರಣ ಸೃಷ್ಟಿಸಿವೆ!! ಇಷ್ಟರ
ಮದ್ಯೆ ಹಳ್ಳಿ ಹಳ್ಳಿ ಗಳಲ್ಲಿ ಕುಡಿಯುವ ನೀರಿನ ಅಭಾವ
ತಲೆದೋರಿ.., ಸಿಗುವ ಅಷ್ಟಿಷ್ಟು ನೀರಿಗಾಗಿ ಜನರ ಮದ್ಯೆ
ಕುರುಕ್ಷೇತ್ರ ಯುದ್ದ ಆರಂಭವಾಗಿದೆ !!
ಇನ್ನು ಬರಲಿರುವ ದಿನಗಳು ನಿಜಕ್ಕೂ ಭೀಕರ.ಇಂತಹ ಬೀಕರ ಪರಿಸ್ಥಿತಿಯಿಂದ ತಪ್ಪಿಸಿಕೊಂಡು.. ನಾಳೆ ಸಮೃದ್ಧ ಬದುಕು ಬೇಕೆಂದರೆ.. ಬೀದಿಗೆ ಇಳಿಯಲೇ ಬೇಕು. “ನಮ್ಮ ನೀರು- ನಮ್ಮ ಹಕ್ಕು” ಎಂದು ಹೋರಾಟ
ಮಾಡದಿದ್ದರೆ.. ಬಹುಶಃ ಬದುಕು ಭವಿಷ್ಯ ಎರಡೂ ಇಲ್ಲ!!
ಹೀಗಾಗಿ ಶನಿವಾರ ನಡೆಯಲಿರುವ “ಜಗಳೂರ್
ಬಂದ್”ನ್ನು ಯಶಸ್ವಿಗೊಳಿಸುವ ಮೂಲಕ ಸರ್ಕಾರದ
ಗಮನ ಸೆಳೆಯೋಣ..ಮುಂದಿನ ಹೋರಾಟಗಳನ್ನು
ಹುರಿಗೊಳಿಸೋಣ..ಎಂದು ಪ್ರಗತಿಪರ ಹೋರಾಟಗಾರ ದೊಣ್ಣೆಹಳ್ಳಿ ಗುರುಮೂರ್ತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.