ವಿಶ್ವದಲ್ಲಿ 90% ಮಾಧ್ಯಮವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರೋದು ಬ್ಲಾಕ್ ರೋಕ್. ದೇಶದ ಮತ್ತು ವಿಶ್ವದ ದೊಡ್ಡ ದೊಡ್ಡ ಶ್ರೀಮಂತರು ತಮ್ಮ ಪರಿಚಯವನ್ನು ಎಲ್ಲೂ ನೀಡುವುದಿಲ್ಲ. ಇವರು ಗೌಪ್ಯವಾಗಿಯೇ ಇರುತ್ತಾರೆ. ಅವರು ಬೆಳಕಿಗೆ ಬಂದರೆ ಈಗ ಚುನಾವಣೆ ಬಾಂಡ್ ವಿಚಾರದಲ್ಲಿ ಚರ್ಚೆ ನೆಡೆಯುತ್ತಿದೆ ನೋಡಿ ಹೀಗೆ ಆಗುತ್ತೆ. ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಜನರ ಕಣ್ಣು ತೆರೆಸಿದೆ. ಈ ಶ್ರೀಮಂತರು ಇವರು ಸಮಾಜದ ಮುಂದೆ ಬಂದರೆ ಜನರು ಇವರ ಹಿನ್ನಲೆಯನ್ನು ಹುಡುಕುತ್ತಾರೆ.ಮತ್ತೆ ಇದು ರಾಜಕೀಯ ಪಕ್ಷಗಳಿಗೆ ತುಂಬಾ ತೊಂದರೆ ಕೊಡುತ್ತೆ ಕಾನೂನಿನ ರೀತಿಯಲ್ಲಿ ಇದನ್ನು ಮುಚ್ಚಿಡಬೇಕು ಎಂದೇ ಟಿವಿ ಮತ್ತು ಪೇಪರ್ ನಲ್ಲಿ ರಾಜಕೀಯ ನಾಯಕರ ಡ್ರಾಮಾ. ಧರ್ಮ ಜಾತಿಯಾ ಕಿತ್ತಾಟ. ಸೀರಿಯಲ್. ಸಿನಿಮಾ. ಕ್ರಿಕೆಟ್. ಇದರಲ್ಲೇ ಜನತೆಯನ್ನು ಮುಳುಗಿಸಿ ಇಡಲಾಗಿದೆ. ಇದರ ಪರಿಣಾಮ ಏನು ಗೊತ್ತೇ… ಜನರು ಗ್ರಂಥಾಲಯಗಿಂತ ಹೆಚ್ಚು ದೇವಸ್ಥಾನದಲ್ಲಿ ನಿಂತಿರುವುದು.ಜನರು ಮನೆಯಲ್ಲಿಲ್ಲದೆ ಆಸ್ಪತ್ರೆಗೆ.ತಿರುಗುವುದು.ಶಿಕ್ಷಣಗಿಂತ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ನೀಡುವುದು….ನನ್ನ ಅಧ್ಯಾಯದ ಪ್ರಕಾರ ದೇಶದಲ್ಲಿ ಇರುವುದು ಎರಡೇ ಜಾತಿ ಒಂದು ಶ್ರೀಮಂತ ಜಾತಿ ಇನ್ನೊಂದು ಬಡವ ಜಾತಿ. ಶ್ರೀಮಂತ ಶ್ರೀಮಂತರು ಒಂದಾದಾಗ ಅವರು ಕೇವಲ ವ್ಯಾಪಾರದ ಬಗ್ಗೆ ಮಾತ್ರ ಮಾತಾಡಿಕೊಳ್ಳುತ್ತಾರೆ. ಅಲ್ಲಿ ಜಾತಿ ಧರ್ಮದ ಮಾತುಗಳು ಬರಲ್ಲ. ಅವರಿಗೆ ಬೇಕಾದದ್ದು ವ್ಯಾಪಾರ ಮಾತ್ರ ಅದೇ ಬಡವರು ಒಂದಾದಾಗ ಬರುವ ಮಾತುಗಳು ಆ ಪಕ್ಷ ಈ ಪಕ್ಷ ನಾನು ಭಕ್ತ ಜಾತಿ ಧರ್ಮ. ಅವನು ಇವನು.ದೇವಸ್ಥಾನ ಮಸೀದಿ ಚರ್ಚ್…. ಹೀಗೆ ನೀವು ನೆಡೆದುಕೊಳ್ಳುವಾಗೆ ನಿಮ್ಮ ನಾಯಕರು ಈ ಸಮಾಜವನ್ನು ಸೃಷ್ಠಿಸಿದ್ದಾರೆ ಇದನ್ನು ಬದಲಾವಣೆ ಮಾಡೋಕೇನೇ ನಾವು ಬಂದಿರುವುದು. ಬಡವ ಶ್ರೀಮಂತ ಅನ್ನುವ ಜಾತಿಯನ್ನು ಕಿತ್ತು ಬಿಸಾಕಿ ಮಾನವ ಧರ್ಮ ಒಂದೇ ಅನ್ನುವ ಬೀಜವನ್ನು ಬಿತ್ತಬೇಕು.ನಮ್ಮ ಮನೆಗೆ ಕುಡಿಯುವ ನೀರು ಸರಿಯಾಗಿ ಮತ್ತು ಶುದ್ಧ ನೀರು ಬರುತ್ತಿಲ್ಲ ಇದರ ಚಿಂತೆ ನಮಗಿಲ್ಲ. ಒಂದು ಡಾಲರ್. ನಮ್ಮ 84 ರೂಪಾಯಿ ಗೆ ಬಂದಿದೆ ನಮಗೆ ಇದರ ಚಿಂತೆ ಇಲ್ಲ ದೇಶದಲ್ಲಿ ಕ್ಯಾನ್ಸರ್ ರೋಗದಿಂದ ಒಂದು ವರ್ಷಕ್ಕೆ 20 ಲಕ್ಷ ಜನರು ಸಾಯುತ್ತಿದ್ದರು. ಮದ್ಯಪಾನ ಧೂಮಪಾನ ನಮಗೆ ಬೇಕು. ದೇಶದಲ್ಲಿ ವರ್ಷಕ್ಕೆ 25 ಕೋಟಿ ಜನರು ಕೆಲಸ ಇಲ್ಲದೆ ಇದ್ದರೂ. ನಮ್ಮ ರಾಜಕೀಯ ನಾಯಕರು ನಮಗೆ ದೇವರು. ಭಕ್ತರ ಸಂಖ್ಯೆ ಕಮ್ಮಿಯಾಗಲ್ಲ.ಕೊನೆಗೆ….. ಜೀವನದಲ್ಲಿ ನಾನು ಸೋತೆ. ಯಾರು ನನಗೆ ಸಹಾಯ ಮಾಡಿಲ್ಲ. ನನ್ನ ಟೈಮ್ ಸರಿ ಇಲ್ಲ. ಜೀವನ ಅಂದ್ರೆ ಇಷ್ಟೇ. ಜೀವನದಲ್ಲಿ ಏನು ಇಲ್ಲ ಜೀವನ ಯಲ್ಲಾ ಶೂನ್ಯ. ವೇಧವಾಕ್ಯಗಳು…ಮತ್ತು ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅದ್ಭುತ ಅಲ್ಲವೇ….? ಯೋಚಿಸಿ ಪರಿವರ್ತನೆ. ನಮ್ಮಲ್ಲೇ ಇದೆ.ನಿರ್ಧಾರ ನಿಮ್ಮದು. ಇದನ್ನೆಲ್ಲ ಸರಿ ಮಾಡಬೇಕು ಅನ್ನುವ ಉದ್ದೇಶದಿಂದ ಚುನಾವಣೆಗೆ ಸ್ವರ್ಧೆ ಮಾಡುತ್ತಿದ್ದೇನೆ. ನಿಮಗೆ ಸರಿ ಅನ್ನಿಸಿದ್ರೆ ನಿಮ್ಮ ಮತ ನನಗೆ ನೀಡಿ ದಕ್ಷಿಣ ಕನ್ನಡದಲ್ಲಿ ಒಟ್ಟು 18 ಲಕ್ಷ ಮತದಾರರು ಇದ್ದಾರೆ ಇದರಲ್ಲಿ ಸುಮಾರು 14 ರಿಂದ 15 ಲಕ್ಷ ಮತ ಜಲಾವಣೆ ಆಗುವ ಸಾಧ್ಯತೆ ಇದ್ದೆ. ಪ್ರತಿಯೊಬ್ಬರ ಮನೆಗೂ ಬೇಟಿ ನೀಡಿ ಮತ ಕೇಳುತ್ತೇನೆ. ನಿರ್ಧಾರ ನಿಮ್ಮದು ಪ್ರಯತ್ನ ನನ್ನದು ನನ್ನ ಪ್ರಯತ್ನ ನಿರಂತರ. (ದುರ್ಗಾ ಪ್ರಸಾದ್)