ಬೆಂಗಳೂರು:ಹಿಂದುಳಿದ ವರ್ಗಗಳ ಅತ್ಯಂತ ಸೌಮ್ಯ ಸ್ವಚ್ಛಂದ ರಾಜಕಾರಣಿ ರಘು ಕೌಟಿಲ್ಯ ರವರ ನೇತೃತ್ವದಲ್ಲಿ
ರಾಜ್ಯ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾವನ್ನು
ಅತ್ಯಂತ ಯಶಸ್ವಿಯಾಗಿ ರಾಜ್ಯದಲ್ಲಿ ಇರುವ ಹಿಂದುಳಿದ ವರ್ಗಗಳನ್ನು ಒಗ್ಗೂಡಿಸಿಕೊಂಡು ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಬಿಜೆಪಿ ಪಕ್ಷದ ರಾಜ್ಯ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರ ಕೈ ಬಲಪಡಿಸುತ್ತಾ ವಿಶ್ವದ ಶ್ರೇಷ್ಠ ನಾಯಕ ಹಿಂದುಳಿದ ವರ್ಗಗಳ ಸರ್ವೋಚ್ಛ ನಾಯಕರಾದ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯವನ್ನು ಸುತ್ತಾಡಿ ಬಿಜೆಪಿ ಸಂಘಟನೆಯನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತಿರುವ ಆರ್ ರಘು ಕೌಟಿಲ್ಯ ಅವರು ಮಾನ್ಯ ಪ್ರಧಾನ ನರೇಂದ್ರ ಮೋದಿ
ಕರ್ನಾಟಕ ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ಎಲ್ಲರಿಗೂ ತಿಳಿ ಹೇಳುತ್ತಾ 28 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ NDA ಅಭ್ಯರ್ಥಿಗಳು ಅತ್ಯಂತ ಹೆಚ್ಚಿನ ಮತಗಳಿಂದ ಗೆದ್ದು ಲೋಕಸಭಾ ಸದಸ್ಯರನ್ನಾಗಿ ಮಾಡಬೇಕೆಂದು ರಘು ಅವರು ಪಣತೊಟ್ಟಿದ್ದಾರೆ
ಸುಮಾರು ಹತ್ತು ಜಿಲ್ಲೆಗಳಿಗೆ ಈಗಾಗಲೇ ಪ್ರವಾಸ ಮಾಡಿದ್ದಾರೆ.
ಮಂಗಳೂರು, ಬೆಂಗಳೂರು ಉತ್ತರ ,ಬೆಂಗಳೂರು ಸೆಂಟ್ರಲ್,ಬೆಳಗಾವಿ ಮಹಾನಗರ, ಬೆಳಗಾವಿ ಗ್ರಾಮಾಂತರ, ಹುಬ್ಬಳ್ಳಿ ಮಹಾನಗರ ಧಾರವಾಡ ಗ್ರಾಮಾಂತರ,ಶಿವಮೊಗ್ಗ ಜಿಲ್ಲೆ, ಇನ್ನು ಅನೇಕ ಜಿಲ್ಲೆಗಳಿಗೆ ನಿರಂತರವಾಗಿ ಪ್ರವಾಸ ಮಾಡುತ್ತಾ
ಕರ್ನಾಟಕದಲ್ಲಿ ಬರುವ ಹಿಂದುಳಿದ ವರ್ಗಕ್ಕೆ ಸೇರಿದ 199 ಸಮುದಾಯಗಳ ಬಗ್ಗೆ ರಾಜಕೀಯ ಶೈಕ್ಷಣಿಕ ಆರ್ಥಿಕ ಕೇಂದ್ರ ಸರ್ಕಾರದ ಯೋಜನೆಗಳು
ಎಲ್ಲ ಸಮುದಾಯಗಳಿಗೆ ತಲುಪಿಸುವ ಗುರಿಯನ್ನು ಹೊಂದಿದ್ದಾರೆ ಕೇಂದ್ರ ಸರ್ಕಾರದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕೆಲಸಗಳ ಬಗ್ಗೆ
ಹೇಳುತ್ತಾ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಘಟಕದಲ್ಲಿ ಯೋಜನೆ ಮತ್ತು ಸಂಯೋಜನೆ ವಿಭಾಗವನ್ನು ಅಂದರೆ Policy and Research Department .
ಹಿಂದುಳಿದ ವರ್ಗಗಳ 199 ಸಮುದಾಯಗಳ ಬಗ್ಗೆ ಅಧ್ಯಯನ ಮಾಡುತ್ತಾ ಎಲ್ಲ ವಿಚಾರಗಳನ್ನು
ಮಾಹಿತಿಯನ್ನು ತೆಗೆದುಕೊಂಡು ಬಿಜೆಪಿ ಮಾತೃ ಘಟಕದ ರಾಜ್ಯಾಧ್ಯಕ್ಷರಾದ ಬಿವೈ ವಿಜೇಂದ್ರ ಅವರಿಗೆ
ಹಿಂದುಳಿದ ವರ್ಗಗಳ ಬಗ್ಗೆ ಎಲ್ಲ ಮಾಹಿತಿ ನೀಡುತ್ತಾ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲಿಸಲು ಭಾರತೀಯ ಜನತಾ ಪಕ್ಷ ಹಿಂದುಳಿದ ಮೋರ್ಚಾಗಳ ವತಿಯಿಂದ
ಸಮುದಾಯಗಳ ಸ್ನೇಹ ಸಮ್ಮೇಳನ ಎಲ್ಲ ಜಿಲ್ಲೆಯಲ್ಲಿ ಮಾಡುತ್ತಾ ಅದೇ ರೀತಿ ಹಿಂದುಳಿದ ವರ್ಗಗಳ ಯುವ ಸಮ್ಮೇಳನ ಮತ್ತು ಭಾರತೀಯ ಜನತಾ ಪಕ್ಷದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ
ಭಾರತ ಸರ್ಕಾರದ ಸಂಪುಟದಲ್ಲಿ ಸುಮಾರು 27 ಜನ ಹಿಂದುಳಿದ ವರ್ಗಕ್ಕೆ ಸೇರಿದ ಸಚಿವರಿದ್ದು
ಅದೇ ರೀತಿ ಲೋಕಸಭೆ ಚುನಾವಣೆಯ
ಮೊದಲ ಪಟ್ಟಿಯಲ್ಲಿ 195 ಜನರಲ್ಲಿ
ನರೇಂದ್ರ ಮೋದಿ ಸಹಿತ 57 ಜನರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು ಎಲ್ಲ ವಿಚಾರಗಳನ್ನು ಕರ್ನಾಟಕದಲ್ಲಿ ಎಲ್ಲ ಜನರಿಗೆ ಪಕ್ಷದ ಪ್ರಮುಖರಿಗೆ ಹಿಂದುಳಿ ವರ್ಗಕ್ಕೆ ಸೇರಿದ ವಿವಿಧ ಸಮುದಾಯದ ಮುಖಂಡರಿಗೆ ಹೇಳುತ್ತಾ ಸಂಘಟನೆ ಮಾಡುತ್ತಿರುವ
ರಘು ಅವರು ಇವರಿಗೆ ಸಾತ್ ಕೊಟ್ಟು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸೋಮಶೇಖರ್ ಅವರು ಅವಣ್ಣ ಮ್ಯಾಕೇರಿಯವರು, ರಾಜ್ಯದ ಪದಾಧಿಕಾರಿಗಳಾದ ವಿವೇಕಾನಂದ ಡಬ್ಬಿಯವರು, ಕುಮಾರ್ ರಾಮಚಂದ್ರಪ್ಪನವರು, ಕಾರ್ಯಾಲಯದ ಕಾರ್ಯದರ್ಶಿಗಳಾದ ದೊಡ್ಡಯ್ಯನವರು,ರಾಧಾಕೃಷ್ಣನ್ ಅವರು, ಸಾಮಾಜಿಕ ಜಾಲತಾಣ ,ಮಾಧ್ಯಮ, ಸಂಚಾಲಕರು ಜಿಲ್ಲೆಯ ಅಧ್ಯಕ್ಷರು ಪದಾಧಿಕಾರಿಗಳು
ಮಂಡಲದ ಅಧ್ಯಕ್ಷರು ಪದಾಧಿಕಾರಿಗಳು ವಿವಿಧ ಸಮುದಾಯದ ಮುಖಂಡರು ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಜನಪ್ರತಿನಿಧಿಗಳು ವಿವಿಧ ಹಿಂದುಳಿದ ವರ್ಗಕ್ಕೆ ಸೇರಿದ ಸಂಸ್ಥೆಗಳು ಹಿಂದುಳಿದ ಸಮುದಾಯದ ಸಮಾಜದ ಸಂಘಟನೆಗಳು ಎಲ್ಲರನ್ನೂ ತೆಗೆದುಕೊಂಡು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಲು
ಮಾನ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಅಧ್ಯಕ್ಷರಾದ ರಘು ಕೌಟಿಲ್ಯ ಅವರು ಪಣತೊಟ್ಟಿದ್ದಾರೆ ಎಂದು ರಾಜ್ಯ ಒಬಿಸಿ ಮೋರ್ಚಾ ಯೋಜನೆ ಮತ್ತು ಸಂಯೋಜನೆ ಪ್ರಭಾರಿ
ರಾಜಕುಮಾರ್ ಸಗಾಯಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.