ಲಿಂಗಸಗೂರು ಫೆಬ್ರುವರಿ 15:-ಲಿಂಗಸಗೂರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಇಂದು ಸಮಾಜ ಕಲ್ಯಾಣ ಇಲಾಖೆ ರಾಯಚೂರಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಗಳ,ಹಾಗೂ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗ ಯುವಕರಿಗೆ,ಮತ್ತು ವಿದ್ಯಾರ್ಥಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ರೀತಿಯ ವಿನೂತನವಾದ ಯೋಜನೆಗಳನ್ನು ಪ್ರತಿ ವರ್ಷ ಜಾರಿಗೆ ತರುತ್ತವೆ. ಆದರೆ ನಾವುಗಳು ಅವುಗಳ ಬಗ್ಗೆ ತಿಳಿದುಕೊಳ್ಳದೆ ಕಾಲಹರಣ ಮಾಡುತ್ತಾ ಸಮಯವನ್ನು ವ್ಯರ್ಥಮಾಡುತ್ತಾ ಜೀವನ ನಡೆಸುತ್ತೀದ್ದೇವೆ ಈಗಾಲದರೂ ನೀವುಗಳು ಈ ರೀತಿಯ ತರಬೇತಿಗಳನ್ನು ಪಡೆದುಕೊಂಡು ಸರಕಾರದ ಪ್ರತಿಯೊಂದು ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತಾ ಅಭಿವೃದ್ದಿಯನ್ನು ಕಾಣಬೇಕು ಹಾಗೂ ಸರಕಾರದ ಪ್ರತಿಯೊಂದು ಯೋಜನೆಗಳ ಲಾಭ ಪಡೆದುಕೊಳ್ಳಿ ಎಂದು ತಿಳಿಸಿದರು.ಇದಲ್ಲದೆ ಗಿಗ್ ಶಿಕ್ಷಣದ ಮೂಲಕ ಹಲವಾರು ಕ್ಷೇತ್ರಗಳ ಕುರಿತು ತರಬೇತಿ ನೀಡುವುದರ ಮೂಲಕ ನಮ್ಮ ಕಾಲೇಜಿನ ಯುವಕರುಗಳಲ್ಲಿ ಕೌಶಲ್ಯ ಅಭಿವೃದ್ದಿ ಚಟುವಟಿಕೆಗಳ ಕುರಿತು ಮಾಹಿತಿ ನೀಡುವುದಕ್ಕೆ ನಮ್ಮ ಕಾಲೇಜಿಗೆ ಬಂದಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಡಾ.ಹನುಮಂತಪ್ಪ ಅವರು ತಿಳಿಸಿದರು.ಈ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ SKES ಪ್ಯಾರಾ ಮೇಡಿಕಲ್ ಕಾಲೇಜ್ ಸಂಸ್ಥೆಯ ಅಧ್ಯಕ್ಷರಾದ ಡಾ. ಬಾಬುರಾವ್ ಎಮ್ ಶೇಗುಣಿಸಿ ರಾಯಚೂರು ಇವರು ಸಹ ನೇರದಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗ ಯುವಕರನ್ನು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಸ್ಪರ್ಧೆ ಮಾಡುವುದಕ್ಕೆ ಯಾವುದೇ ರೀತಿಯಲ್ಲಿ ಭೇದ ಭಾವ,ತಾರತಮ್ಯ ಇರುವುದಿಲ್ಲ ಆದ್ದರಿಂದ ನಾವುಗಳು ಅಂತಹ ಮೇಲು ಕೀಲು ತಾರತಮ್ಯಗಳನ್ನು ಹಿಂದಕ್ಕೆ ತಳ್ಳಿ ಮುಂದೆ ಬಂದಾಗ ಮಾತ್ರ ನಮಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನಗಳು ಸಿಗಲಿಕ್ಕೆ ಸಾಧ್ಯ ಎಂದು ತಿಳಿಸಿದರು.ಅದೇ ರೀತಿಯಾಗಿ ಇಂದಿನ ಕಾರ್ಯಕ್ರಮದ ಸಂಪನ್ಮೂಲದ ವ್ಯಕ್ತಿಗಳಾಗಿ ಉಪನ್ಯಾಸ ನೀಡುವುದಕ್ಕೆ ಆಗಮಿಸಿದ್ದ ದೇವೇಂದ್ರ ಕುಮಾರ್ ಹೂಗಾರ್ ಗಾಂಧಿ ಕಾಲೇಜಿನ ಉಪನ್ಯಾಸಕರು ಮಾತನಾಡಿ ಪ್ರತಿಯೊಬ್ಬ ಯುವಕರು,ವಿದ್ಯಾರ್ಥಿಗಳು ಬಹಳ ಶ್ರಮ ಜೀವಿಗಳು ಆಗಬೇಕು ಅಂದಾಗ ಮಾತ್ರ ನಾವು ಜೀವನದಲ್ಲಿ ಏನಾದರು ಸಾಧಿಸಲಿಕ್ಕೆ ಸಾಧ್ಯ ಏಕೆಂದರೆ ಮುಂದೆ ಜಗತ್ತು ಬಹಳ ಸ್ಪರ್ಧೆಯಿಂದ ಕೂಡಿರುತ್ತದೆ. ಅಂತಹ ಸ್ಪರ್ಧೆಗೆ ಈಗಿನಿಂದಲೆ ನಾವು ಒಳ್ಳೆಯ ಕೌಶಲ್ಯಯುತ ಶಿಕ್ಷಣವನ್ನು ಪಡೆದುಕೊಂಡು ಸ್ಪರ್ಧಾತ್ಮಕ ಜಗತ್ತಿಗೆ ನಾವು ಸಹ ಸ್ಪರ್ಧಾಳುಗಳು ಎಂದು ತಿಳಿಸಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮದ ನಿರೂಪಣೆಯನ್ನು ಕಾಲೇಜಿನ ಉಪನ್ಯಾಸಕರಾದ ಹುಲುಗಪ್ಪ ಅವರು ನೇರವೇರಿಸಿದರೆ, ಸ್ವಾಗತವನ್ನು ಅಮರೇಶ ವೆಂಕಟಾಪೂರು ಮಾಡಿಕೊಂಡರು,ಹಾಗೂ ವಂದನಾರ್ಪಣೆಯನ್ನು ಹನುಮಂತಪ್ಪ ಚಿಕ್ಕಕಡಬೂರು ರವರು ಮಾಡಿದರು,ಇಂದಿನ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಮತಿ ರಾಜೇಶ್ವರಿ, ಶ್ರೀ ನವೀನ್ ರವರು,SKES ಕಾಲೇಜಿನ ಉಪನ್ಯಾಸಕರಾದ ಶ್ರೀಕಾಂತ್ ದಾಸ ಗುಜ್ಜಾರ್ ರವರು ಹಾಗೂ ಕಾಲೇಜಿನ ಇತರ ಉಪಾನ್ಯಾಸಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here