ಇಂದು ಬೆಳಿಗ್ಗೆ ಬಿ.ಬಿ.ಎಂ.ಪಿ ಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರವರನ್ನು.ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಘಟಕ ಬೇಟಿ ಮಾಡಿ.2024-2025 ರ ಬಜೆಟ್ ನಲ್ಲಿ ಪತ್ರಕರ್ತರ ಆರೋಗ್ಯ ನಿಧಿಗಾಗಿ 2 ಕೋಟಿ ಹಾಗೂ ಸಣ್ಣ ಮತ್ತು ಮದ್ಯಮ ಪತ್ರಿಕೆಗಳಿಗೆ ಜಾಹೀರಾತಿಗಾಗಿ ಏರಡು ಕೋಟಿ ರೂಗಳನ್ನು ಮೀಸಲಿಡಬೇಕೆಂದು ಮನವಿ ಸಲ್ಲಿಸಲಾಯಿತು. ಕೂಡಲೇ ಆಯುಕ್ತರು ಮನವಿ ಪತ್ರದ ಮೇಲೆ ಷರಾ ಬರೆದು ಹಿಂದಿನ ವರ್ಷದ ಬಜೆಟ್ ನಲ್ಲಿ ಮೀಸಲಿಡಲು ಹಣಕಾಸು ವಿಶೇಷ ಆಯುಕ್ತರಿಗೆ ಬರೆದರು.ಆ ನಂತರ ವಿಶೇಷ ಹಣಕಾಸು ಆಯುಕ್ತರನ್ನು ಬೇಟಿಮಾಡಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಸೋಮಶೇಖರ ಗಾಂಧಿ.ಪ್ರದಾನಕಾರ್ಯದರ್ಶಿ ನರೇಂದ್ರ ಪಾರ ಕಟ್ಟ್,ಉಪಾದ್ಯಕ್ಷ ಶ್ರೀನಾಥ್, ಖಜಾಂಚಿ ಶಿವರಾಜ್ ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಸ್ವಾಮಿ,ಸದಸ್ಯರಾದ ಸುಂದರೇಶ್ ಶಿವಾನಂದ,ರಮಾಕಾಂತ್ ಹಾಗೂ ಇನ್ನಿತ್ತರರು ಹಾಜರಿದ್ದರು.
Home ಸಾರ್ವಜನಿಕ ಧ್ವನಿ ಪತ್ರಕರ್ತರ ಆರೋಗ್ಯ ನಿಧಿಗಾಗಿ 2 ಕೋಟಿ ಹಾಗೂ ಸಣ್ಣ ಮತ್ತು ಮದ್ಯಮ ಪತ್ರಿಕೆಗಳಿಗೆ ಜಾಹೀರಾತಿಗಾಗಿ ಏರಡು...