ದಾವಣಗೆರೆ ಜ ೧೬:ಈ ದೇಶದಲ್ಲಿ ಕೇವಲ ಮೂರು ಪರ್ಸೆಂಟ್ ಜನರು ಶೇ 70 ಕ್ಕಿಂತ ಹೆಚ್ಚು ಇರುವ ಅಲ್ಪಸಂಖ್ಯಾತರ ಹಿಂದುಳಿದ ದಲಿತ ವರ್ಗಗಳ ಮೇಲೆ ಅಧಿಕಾರ ಹಕ್ಕು ಚಲಾಯಿಸುವ
ದುರಂತದ ನೆಲ ನಮ್ಮದು ಎಂದು ವಾಲ್ಮೀಕಿ ಸಮುದಾಯ, ಅಹಿಂದ ವರ್ಗಗಳ ಜಿಲ್ಲಾ ಮುಖಂಡ ಹೊದಿಗೆರೆ ರಮೇಶ್ ವಿಷಾಧ ವ್ಯಕ್ತಪಡಿಸಿದರು.
ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟ, ದಲಿತ ಹಿಂದುಳಿದ ಅಲ್ಪಸಂಖ್ಯಾತರ ವರ್ಗಗಳ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ
ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಬೃಹತ್ ಸಂಘಟನಾ ಸಮಾವೇಶ ಹಕ್ಕೊತ್ತಾಯ ಆಂದೋಲನ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು
ತಲೆ ತಲೆಂತಾರದಿಂದ ಶೋಷಿತ ಸಮುದಾಯಗಳು ಸಾಮಾಜಿಕ ಶೈಕ್ಷಣಿಕ ಆರ್ಥಿಕ ರಾಜಕೀಯ ಸಾಂಸ್ಕೃತಿಕ ವಾಗಿ
ಶೋಷಣೆಗೇ ಒಳಗಾಗಿವೆ ಹಕ್ಕುಗಳಿಗಾಗಿ ಹೋರಾಟಗಳು ನಡೆದವು ಈಗಲೂ ನಡೆಯುತ್ತಲೇ ಇವೆ ಯಾವ ಶೋಷಿತ ಅಲಕ್ಷಿತ ಸಮುದಾಯಗಳಿಗೇ ಸಾಮಾಜಿಕ ನ್ಯಾಯ ರಾಜಕೀಯ ಸ್ಥಾನಮಾನ ಸಿಕ್ಕಿವೆ
ಈಗಲೂ ಅಸ್ತಿತ್ವಕ್ಕೆ ಹೋರಾಡುತ್ತಲೆ ಇದ್ದರೂ ರಾಜ್ಯದಲ್ಲಿ ಶೋಷಿತ ಸಮುದಾಯಗಳ ಪರ ಇರುವ ಮುಖ್ಯ ಮಂತ್ರಿ ಗಳು ಇದ್ದರೂ
ಅವರನ್ನು ಬ್ಲಾಕ್ ಮೇಲ್ ತಂತ್ರ ಬಳಸಿ ಏಕವಚನದಲ್ಲಿ ಕರೆಯುವುದು,ಆಧಿರ ರನ್ನಾಗಿಸಿ
ರಾಮನ ಜಪ ತಪದ ಕಡೆ ಜನರನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ, ಜನಗಣತಿ ಆಧಾರದಲ್ಲಿ ಮೀಸಲಾತಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ
ಹಿರಿಯ ನ್ಯಾಯಮೂರ್ತಿ ಕಾಂತರಾಜ್ ವರದಿ ಸಲ್ಲಿಕೆ ಆಗಿಲ್ಲ ಆಗಲೇ ವರದಿ ಕಣ್ಣಾರೆ ಕಂಡು ತಪ್ಪು ಹಿಡಿದವರಂತೇ ರಾಜ್ಯದಲ್ಲಿ ಇಡೀ ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ
ಸರ್ಕಾರಕ್ಕೆ ಒತ್ತಡ ಹಾಕಿ ವರದಿ ಬಿಡುಗಡೆ ಮಾಡಿದಂತೆ
ದಿನಕ್ಕೊಂದು ಹೇಳಿಕೆ ವಿರೋಧಗಳು ಮಠಾಧೀಶರು, ಬಲಾಡ್ಯ ರಾಜಕಾರಣಿ ಗಳಿಂದಲೇ ಒತ್ತಡ ಏರುತ್ತಿರುವುದು ಈ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಪ್ರಶ್ನಿಸಿದ ಅವರು
ಕಾಂತರಾಜ್ ವರದಿ ಕೇವಲ ಜನಸಂಖ್ಯಾ ಆಧಾರಿತ ವರದಿಮಾತ್ರ ಅಲ್ಲ ಎಲ್ಲಾ ಸಮುದಾಯದ ಸಾಂಸ್ಕೃತಿಕ, ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಆರ್ಥಿಕ ರಾಜಕೀಯ ಬದುಕು ಬವಣೆ ಗಳ ಸಮಗ್ರ ಮಾಹಿತಿ ಇರುವ ವರದಿ ಇಂಥ ಸಮಾಜಮುಖಿ ಚಿಂತನೆ ಇರುವ ಸಾಮಾಜಿಕ ನ್ಯಾಯ ಪರ ಅಂಕಿ ಅಂಶಗಳ ಸಮೇತ ಬಿಡುಗಡೆ ಮಾಡಲು ಸಹ ಈ ಭೂಷ್ವಾ ಶಾಹಿ ಗಳು ಅಡ್ಡಿ ಉಂಟು ಮಾಡುತ್ತಿರುವುದು ಈ ದೇಶದ ಜನ ಕಣ್ಣಾರೆ ನೋಡುತ್ತಿದ್ದಾರೆ
ಇಂಥ ಜನರ ಕಣ್ಣು ತೆರೆಸಿ ಸಮ ಸಮಾಜ ಸಾಮೂಹಿಕ ವಾಹಿನಿಜನರ ಬಗ್ಗೆ ತಿಳುವಳಿಕೆ ಮೂಡಿಸುವುದೇ ಜನವರಿ ೨೮ ರ ಐತಿಹಾಸಿಕ ಹಿನ್ನೆಲೆ ಆಗುವ ಸುಮಾರು ೧೫ ಲಕ್ಷಕ್ಕೂ ಹೆಚ್ಚು ಶೋಷಿತ ಸಮುದಾಯಗಳ ಜನರು ಪಾಲ್ಗೊಂಡು ಕಾಂತರಾಜ್ ವರದಿ ಜಾರಿ ಆಗಲೇ ಬೇಕು ಎಂಬ ಕೂಗು ವಿರೋಧ ಮಾಡುವ ಎಲ್ಲರಿಗೂ ಮುಟ್ಟಿಸುವ ಸಾಮಾಜಿಕ ನ್ಯಾಯ ಹರಿಕಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರ ಕೈ ಬಲಪಡಿಸುವ ಏಕೈಕ ಅಜೆಂಡಾ ಈ ಶೋಷಿತ ಸಮುದಾಯಗಳ ಹಿಂದುಳಿದ ಅಲ್ಪಸಂಖ್ಯಾತರ ಜಾತಿಗಳ ಒಕ್ಕೂಟದ ಬೃಹತ್ ಸಂಘಟನಾ ಸಮಾವೇಶ ಹಕ್ಕೊತ್ತಾಯ ಎಂದು ಹೊದಿಗೆರೆ ರಮೇಶ್ ಘಂಟಾ ಘೋಷಾವಾಗಿ ಹೇಳಿದರು
ಸಭೆಯಲ್ಲಿ ಪಾಲ್ಗೊಂಡ ಅಹಿಂದ ವರ್ಗದ ಮುಖಂಡ ಹೊನ್ನಾಳಿ ಸಿದ್ದಪ್ಪ ಪ್ರತಿ ಕೇರಿ ಊರುಗಳಿಂದ ಸಾವಿರ ಲಕ್ಷೋಪಾಧಿ ಶೋಷಿತ ವರ್ಗಗಳ ಸಮುದಾಯ ನಮ್ಮ ಬಂಧುಗಳು ಬಂದು ಸೇ, ಬೇಕು ಎಂದು ಕರೆ ನೀಡಿದರು.
ಭೋವಿ ಸಮಾಜದ ಮುಖಂಡ ಡಿ ಬಸವರಾಜ್ ಮಾತನಾಡಿ ಇಲ್ಲಿ ಕುತಂತ್ರ ಮೇಲ್ವರ್ಗದ ಉಳ್ಳವರು ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಇಲ್ಲ,ದ ರಾಮನ ತೋರಿಸಿ ನಮ್ಮ ಪಿಜೆ ಬಡಾವಣೆ ಯಲ್ಲಿರುವ ರಾಮನ ಅನಾಥ ಮಾಡಿ ಬಿಜೆಪಿ ರಾಮನನ್ನು ಅಯೋಧ್ಯೆಯಲ್ಲಿ ಕೇಂದ್ರ ಸರ್ಕಾರ ಕೃಪ ಪೋಷಿತ ರಾಮನ ತಂದು ಸೃಷ್ಟಿ ಮಾಡಿ
ಜನರ ದುಡ್ಡು ರೊಕ್ಕ ಸುರಿದು ದೇಶಕ್ಕೆ ಮತ್ತೋಮ್ಮೆ ಬೆಂಕಿ ಹಚ್ಚಿ ಅಧಿಕಾರ ಹಿಡಿಯುವ ನಾಟಕ ಯಾರೂ ನಮ್ಮ ಶೋಷಿತ ಸಮುದಾಯಗಳ ಜನರು ನಂಬಬಾರದು ಎಂದು ಕಿವಿಮಾತು ಹೇಳಿದರು.
ಪ್ರೋ.ಎಬಿ ರಾಮಚಂದ್ರಪ್ಪ
ಹರಿಹರ ಮಾಜಿ ಶಾಸಕ ರಾಮಪ್ಪ, ಮುಸ್ಲಿಂ ಸಮುದಾಯ ಮುಖಂಡರ ಮಾಜಿ ಪಾಲಿಕೆ ಉಪಾಧ್ಯಕ್ಷ ಚಮನ್ ಸಾಬ್, ಅಬ್ದುಲ್ ಗನ್ನಿ,
ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ ವೀರಣ್ಣ, ಹಾಲೇಕಲ್ಲು ಅರವಿಂದ್, ಪುಟ್ಬಾಲ್ ಗಿರೀಶ್,
ದಲಿತ ಮುಖಂಡ ಹರಪನಹಳ್ಳಿ ಅಂಜಿನಪ್ಪ, ಚೆನ್ನಗಿರಿ ಅಹಿಂದ ವರ್ಗದ ಮುಖಂಡರು ಬಂಜಾರ ಸಮುದಾಯದ ಸೇವಾಲಾಲ್ ಅಭಿವೃದ್ಧಿ ನಿಗಮ ನಿರ್ದೇಶಕಹೊನ್ನಾಳಿ ಕೃಷ್ಣನಾಯಕ್, ಚೆನ್ನಗಿರಿ ಮೀಸೆ ರಾಮಣ್ಣ,ಮಾಜಿ ಜಿ.ಪಂ.ಸಧಸ್ಯ ಮಹೇಶ್, ಅಲೆಮಾರಿ ಬುಡಕಟ್ಟು ಜನಾಂಗದ ತಿಪ್ಪೇಶ್, ನೇಕಾರ ಸಮುದಾಯದ ಅಭಿವೃದ್ಧಿ ನಿಗಮ ಅಧ್ಯಕ್ಷ ಬಸವರಾಜ್, ಹಕ್ಕಿ ಪಿಕ್ಕಿ ಸಮುದಾಯದ ಹರೀಶ್, ಅಹಿಂದ ವರ್ಗದ ಒಕ್ಕೂಟದ ಅಧ್ಯಕ್ಷ ಸಿದ್ದಪ್ಪ ಮಾಸ್ಟರ್, ಸಿ ಬಸವರಾಜ್, ದಲಿತ ಒಕ್ಕೂಟದ ನಾಯಕ ಹೆಗ್ಗರೆ ರಂಗಪ್ಪ, ಮಾಯಾಕೊಂಡ ಕ್ಷೇತ್ರದ ಶಾಸಕ ಬಸವಂತಪ್ಪ, ಪತ್ರಕರ್ತ ವರದಿಗಾರ ಕೂಟದ ಅಧ್ಯಕ್ಷ ಏಕಾಂತಪ್ಪ ಸೌಹಾರ್ದ ವೇದಿಕೆ ಅನಿಷ್ ಪಾಶ, ಹೆಚ್ ಎಂ ಆಂಜನೇಯ ಗುರೂಜಿ, ಪ್ರಗತಿ ಪರ ಸಾಂಸ್ಕೃತಿಕ ರಂಗದ ಪುರಂದರ್ ಲೋಕಿಕೆರೆ, ಎಡಪಂಥೀಯ ವಿಚಾರಧಾರೆಯ ಕಲಾವಿದ ಐರಣಿ ಚಂದ್ರು, ಸೇರಿದಂತೆ ನೂರಾರು ಹಲವು ಸಾಮಾಜಿಕ ಹೋರಾಟಗಾರ ವಕೀಲರು, ಪ್ರಗತಿ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು
ಪ್ರಗತಿ ಪರ ಸಂಘಟನೆಗಳ ಮುಖಂಡ ಚಂದ್ರಶೇಖರ್ ಪ್ರಸ್ತುತ ಪಡಿಸಿದ ಪೂರ್ವ ಭಾವಿ ಸಭೆಯಲ್ಲಿ ನಿರೂಪಿಸಿ ವಂದಿಸಿದರು.