ವಿಜಯಪುರ:ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ನಾಮ ಫಲಕ ಕಡ್ಡಾಯ ಅಳವಡಿಕೆಗಾಗಿ ನಡೆದ ಐತಿಹಾಸಿಕ ಹೋರಾಟದಲ್ಲಿ ರಾಜ್ಯಾಧ್ಯಕ್ಷರಾದ ಟಿ ಎ.ನಾರಾಯಣಗೌಡರು ಸೇರಿದಂತೆ ಸುಮಾರು 53 ಜನ ಕಾರ್ಯಕರ್ತರು ಬಂಧಿತರಾಗಿ 14 ದಿನಗಳ ಕಾಲ ಕಾರಾಗೃಹ ವಾಸ ಅನುಭವಿಸಿ ಇಂದು ವಿಜಯಪುರ ನಗರಕ್ಕೆ ಜಿಲ್ಲಾಧ್ಯಕ್ಷರಾದ ಶ್ರೀ ಎಂ ಸಿ ಮುಲ್ಲಾ ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಮಹದೇವ ರಾವಜಿ ರವರು ರೈಲ್ವೇ ನಿಲ್ದಾಣಕ್ಕೆ ಬಂದಿಳಿದಾಗ ಅಪಾರ ಪ್ರಮಾಣದಲ್ಲಿ ಸೇರಿದ್ದ ಕರವೇ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು,ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು,
ಈ ಸಂದರ್ಬದಲ್ಲಿ ಮಾತನಾಡಿದ ಎಂ ಸಿ ಮುಲ್ಲಾರವರು ಕನ್ನಡ ಪರ ಹೋರಾಟಗಾರರನ್ನು ಬಂದಿಸಿ ವಿಕೃತ ಮನೋಭಾವನೆ ತಾಳಿದ ರಾಜ್ಯ ಸರಕಾರದ ಧೋರಣೆ ಖಂಡನೀಯ ನಮ್ಮ ಐತಿಹಾಸಿಕ ಹೋರಾಟಕ್ಕೆ ಮಣಿದ ರಾಜ್ಯ ಸರಕಾರ ಇಂದು ಕನ್ನಡ ನಾಮಫಲಕ ಕಡ್ಡಾಯವಾಗಿ ಅಳವಿಡಿಸಬೇಕೆಂದು ಸುಗ್ರೀವಾಜ್ಞೆ ಹೊರಡಿಸಿ ಫೆಬ್ರವರಿ 28 ರೊಳಗಾಗಿ ಕನ್ನಡ ನಾಮಫಲಕಗಳಲ್ಲಿ ಪ್ರತಿಶತ ಶೇಕಡಾ 60% ಭಾಗ ಕನ್ನಡ ಬಳಕೆ ಶೇಕಡಾ 40% ಅನ್ಯ ಭಾಷೆ ಬಳಕೆ ಮಾಡಲು ಗಡುವು ನೀಡಿ ಆದೇಶ ಮಾಡಿರುವದನ್ನು ಕರವೇ ಪರವಾಗಿ ಸರಕಾರಕ್ಕೆ ಸ್ವಾಗತಿಸಿ ಅಭಿನಂದನೆ ಸಲ್ಲಿಸುತ್ತೇವೆ ಎಂದು ನುಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಬಿಜಾಪುರ, ನಗರ ಅಧ್ಯಕ್ಷರಾದ ಫಯಾಜ್ ಕಲಾದಗಿ, ನಾಗರಾಜ್ ಲಂಬೂ,ರವಿ ಕಿತ್ತೂರು, ಸಾಹೇಬಣ್ಣ ಮಡಿವಾಳರ,ಮಲ್ಲನಗೌಡ ಬಗಲಿ, ವಿನೋದ ದಳವಾಯಿ, ಅನುರಾಧ ಕಲಾಲ,ಮನೋಹರ ತಾಜವ, ನಸೀಮ್ ರೋಜಿನ್ದಾರ, ದಾದಾಪೀರ್ ಮುಜಾವರ್, ಡಾ, ದಯಾನಂದ ಸಾವಳಗಿ, ಡಾ, ರಾಜಶೇಖರ ಮಠಪತಿ,ಡಾ, ಹಾಜಿಸಾಬ ಮುಲ್ಲಾ,ಮಂಜು ಯಳಮೇಲಿ, ಪಂಡಿತ ಪೂಜಾರಿ, ಬಸವರಾಜ ಕಾಂಬಳೆ, ಬಸವರಾಜ ಬಿ ಕೆ, ರವಿ ಮಗ್ಡುಮ, ಮೂರ್ತಜ ಕೆಂಭಾವಿ, ಯೂನಸ್ ಮುಲ್ಲಾ, ಜಾಫರ ಶರಬತ್ ವಾಲೆ, ಸೌಕತ ಕೊತ್ವಾಲ್, ಮೌಲಾಲಿ ಬಡೇಘರ, ಶೇಕಿಲ್ ಪಟೇಲ್, ಮಲಂಗ ಬಿಜಾಪುರ, ದಾದಪೀರ್ ಬಗಲಿ,ಬಂಧೇನವಾಜ ಸಿರಗೂರು ಬಸವರಾಜ ಆಹೇರಿ, ಫಿದಾ ಕಲಾದಗಿ, ಜೆ ಎಂ ಬಿರಾದಾರ ಕೆಎಸ್ಆರ್ ಟಿಸಿ ಕ್ರೀಯಾ ಸಮಿತಿ ಅಧ್ಯಕ್ಷರು , ಮೌಲಸಾಬ ಅಗರ್ಖೇಡ್, ನಜೀರ ಇನಾಂದಾರ್,
ಶಬ್ಬೀರ್ ನಾಗರಬೌಡಿ, ಆರಿಫ್ ಇನಾಂದಾರ್ ಅಮಿತ್ ರಾಠೋಡ, ನಿಜಾಮುದ್ದೀನ್ ತಾಜಿಮತರಕ್, ಅರ್ಬಾಜ್ ಶೇಖ, ಪ್ರಶಾಂತ ಚವ್ಹಾಣ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿ ನಮ್ಮ ಹೋರಾಟಕ್ಕೆ ಸಂದ ಜಯಕ್ಕೆ ಪಟಾಕಿ ಸಿಡಿಸಿ, ಬಾಜಾ ಭಜಂತ್ರಿಯೊಂದಿಗೆ ಸಂಭ್ರಮಿಸಲಾಯಿತು.
ರೈಲು ನಿಲ್ದಾಣದಿಂದ ಆರಂಭಗೊಂಡ ಮೆರವಣಿಗೆ ಕನಕ ದಾಸರ ವೃತ,ಅಂಬೇಡ್ಕರ ವೃತ,ಬಸವೇಶ್ವರ ವೃತದಿಂದ ಗಾಂಧಿ ಚೌಕ ವರೆಗೆ ವಿವಿಧ ಘೋಷಣೆಯೊಂದಿಗೆ ವಿಜಯೋತ್ಸವ ಆಚರಿಸಲಾಯಿತು ಎಂದು ಕರ್ನಾಟಕ ರಕ್ಣಾ ವೇದಿಕೆಯ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಬಿಜಾಪುರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here