ಸುರಪುರ: ಗ್ರಾಮೀಣ ಭಾಗದ ಕಲೆಯನ್ನು ಉಳಿಸಿ ಇಲ್ಲಿನ ವಿವಿಧ ರೀತಿಯ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ನಾಡಿಗೆ ಪರಿಚಯಿಸುವುದು ಬಹಳ ಮುಖ್ಯವಾದುದಾಗಿದೆ ಈ ನಿಟ್ಟಿನಲ್ಲಿ ನಾಡಪ್ರಭು ಕೆಂಪೇಗೌಡ ಯುವಕ ಸಂಘವು ಗ್ರಾಮೀಣ ಭಾಗದ ಕಲಾವಿದರನ್ನು ಪ್ರಮುಖ ಪಾತ್ರವಹಿಸುತ್ತಿದೆ ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ರಾಜ್ಯಾದ್ಯಕ್ಷರಾದ ವಿಜಯಕುಮಾರ್ ಸೋನಾರಿ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜನಪದ ಕಲೆಗಳು ಈಗಿನ ಮಕ್ಕಳಿಗೆ ಅದರ ಬಗ್ಗೆ ತಿಳಿ ಹೇಳುವಂತ ಕೆಲಸ ಮತ್ತು ಜನಪದ ಕಲಾವಿದರನ್ನು ಬೆಳೆಸುವಂತಹ ಕೆಲಸ ಮಾಡಬೇಕು ಎಂದರು.
ನಾಡಪ್ರಭು ಕೆಂಪೇಗೌಡ ಸಾಂಸ್ಕೃತಿಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯದಲ್ಲಿ ನಡೆದ ಕಾರ್ಯಕ್ರಮ ಈ ಸಂಸ್ಥೆಯು ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸುವುದರ ಜೊತೆಗೆ ಕಲೆಯನ್ನು ಪ್ರೋತ್ಸಾಹಿಸುವಂತಹ ಕೆಲಸ ಸಂಸ್ಥೆ ಸದಾ ಕಾಲ ಮಾಡ್ತಾ ಬಂದಿದ್ದು ಅತ್ಯಂತ ಸಂತೋಷದಾಯಕವಾದುದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಿದ್ದನಗೌಡ ಹೆಬ್ಬಾಳವರು ಪ್ರಸ್ತಾಪ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ರಾಜ್ಯಾದ್ಯಕ್ಷರಾದ ವಿಜಯಕುಮಾರ ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣು ನಾಯಕ್ ಭೇಟಿಯವರು ವಹಿಸಿಕೊಂಡಿದ್ದರು.
ಈ ವೇಳೆ ಸಗರನಾಡು ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರಕಾಶ್ ಅಂಗಡಿ ಕನ್ನಳ್ಳಿ ಶ್ರೀ ಶಿವಶರಣಪ್ಪ ಹೆಡಿಗಿನಾಳ, ಸಾಯ್ಬಣ್ಣ ಪುರ್ಲೆ , ಶ್ರೀ ಅಂಬರೀಷ್ ಹಸಂಕಲ್,
ಹಾಗೂ ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರಿಗೆ ಗೌರವಿಸಿ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು . ಹಾಗೂ ಅನೇಕ ಕಲಾವಿದರು ಮತ್ತು ಸಂಸ್ಥೆಯ ಸದಸ್ಯರು ಭಾಗವಹಿಸಿದರು.