ಮಂಡ್ಯ:ನಗರಸಭೆ ಅಡಿಯಲ್ಲಿ ಬರುವ ರಸ್ತೆ ಕಾಮಗಾರಿ ಮತ್ತು ಚರಂಡಿ ದುರಸ್ಥಿ ಬಗ್ಗೆ ಅದಷ್ಟು ಬೇಗ ಗಮನ ಹರಿಸಿ ಎಂದು ಮಂಡ್ಯ ಶಾಸಕರಾದ ಪಿ. ರವಿಕುಮಾರ್ ರವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಅವರು ಇಂದು ನಗರಸಭೆ ಕಾರ್ಯಾಲಯದಲ್ಲಿ ನಡೆದ ನಗರ ಸಭೆಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರದ ಅನೇಕ ಯೋಜನೆಗಳಿಂದ ಈಗಾಗಲೇ ನಗರದಲ್ಲಿ ಅನೇಕ ಸ್ಲಂ ಕಾಲೋನಿಯಲ್ಲಿ ವಾಸವಿರುವ ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಹಾಗೇ ಇನ್ನೂ ಕೆಲವು ಜನಸಾಮಾನ್ಯರಿಗೆ ಮುಂದಿನ ದಿನಗಳಲ್ಲಿ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ, ನಗರಸಭೆ ಪೌರಯುಕ್ತರಾದ ಆರ್ ಮಂಜುನಾಥ್, ಜಿಲ್ಲಾ ನಗರಾಭಿವೃಧಿ ಕೋಶ ಯೋಜನಾ ನಿರ್ದೇಶಕಿ ತುಷಾರಮಣಿ, ನಗರಸಭೆ ಮಾಜಿ ಅಧ್ಯಕ್ಷರಾದ ಮಂಜು ಹೆಚ್, ಎಸ್ , ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷೆ ಇಷ್ರತ್ ಪಾತಿಮಾ ಸೇರಿದಂತೆ ನಗರಸಭೆಯ ಸದಸ್ಯರುಗಳು ಹಾಜರಿದ್ದರು.

LEAVE A REPLY

Please enter your comment!
Please enter your name here