ಹುಣಸಗಿ: ಕಾಂಗ್ರೆಸ್ ಗ್ಯಾರಂಟಿ ಎಮ್.ಪಿ ಎಲೇಕ್ಷನ್ ತನಕ ಮಾತ್ರ ಅಲ್ಲಿಂದ ಎಲ್ಲವೂ ಬಂದ್ ಆಗುತ್ತವೆ ಈ ಎಲ್ಲಾ ಸ್ಕೀಮ್ ಗಳು ಯಾವು ಶಾಶ್ವತವಾಗಿ ಇರುವುದಿಲ್ಲ ಗ್ಯಾರಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ನಂಬದೇ ಜನರ ಏಳಿಗೆಗಾಗಿ ಶ್ರಮಿಸುತ್ತಿರುವ ಬಿ.ಜೆ.ಪಿ ಪಕ್ಷದ ಎಲ್ಲಾ ವಾರ್ಡುಗಳಲ್ಲಿ ಸ್ಪರ್ದಿಸಿರುವ ಅಭ್ಯರ್ಥಿಗಳನ್ನು ಬಹುಮತದೊಂದಿಗೆ ಆರಿಸಿ ತರಬೇಕೆಂದು ಬಿ.ಜೆ.ಪಿ ಮುಖಂಡ ಹಣಂತನಾಯಕ ( ಬಬ್ಲುಗೌಡ) ಮತದಾರರಲ್ಲಿ ಮತಯಾಚನೆ ಮಾಡಿದರು.

ಹುಣಸಗಿ ಪಟ್ಟಣ ಪಂಚಾಯತ ಮೇಲ್ದರ್ಜೆಗೆ ಏರಲು, ಹುಣಸಗಿ ತಾಲೂಕು ಕೇಂದ್ರವಾಗಲು, ಹಾಗೂ ಪಟ್ಟಣದಲ್ಲಿ ಸುಸಜ್ಜಿತವಾದ ಆಸ್ಪತ್ರೆ, ಸಿ.ಸಿ.ರಸ್ತೆ, ಮಲ್ಲಾ, ನಾರಾಯಣಪೂರ ರಾಜ್ಯವಹೆದ್ದಾರಿ ಹೀಗೆ ಅನೇಕ ಕೆಲಸಗಳನ್ನು ನಮ್ಮ ಬಿ.ಜೆ.ಪಿ ಸರಕಾರದ ಆಡಳಿತದಲ್ಲಿ ಮಾಜಿ ಶಾಸಕ ರಾಜುಗೌಡ್ರು ಆಡಳಿತದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಇನ್ನೂ ಈಗ ನಡೆಯುತ್ತಿರುವ ಹುಣಸಗಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಬಿ.ಜೆ.ಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಬಹುತದೊಂದಿಗೆ ಆರಿಸಿ ತಂದರೆ ಪಟ್ಟಣದಲ್ಲಿ ಇನ್ನು ಬಾಕಿ ಇರುವ ಎಲ್ಲಾ ಸಾರ್ವಜನಿಕ ಕೆಲಸಗಳನ್ನು ಮಾಡಲು ನಮ್ಮ ಅಭ್ಯರ್ಥಿಗಳು ಸಿದ್ಧರಿದ್ದಾರೆ ಹೀಗಾಗಿ ತಾವುಗಳು ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ 16 ವಾರ್ಡುಗಳಲ್ಲಿನ ಅಭ್ಯರ್ಥಿಗಳನ್ನು ಬಹುಮತದೊಂದಿಗೆ ಆರಿಸಿ ಪಟ್ಟಣ ಪಂಚಾಯತ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.

ಇದೇ ವೇಳೆ ಬಿ.ಜೆ.ಪಿ ಮುಖಂಡರಾದ ವಿರೇಶ ಬಿ ಚಿಂಚೋಳಿ, ಬಿ.ಎಮ್.ಅಳ್ಳಿಕೋಟಿ, ಸಂಗಣ್ಣ ವೈಲಿ, ಎಮ್.ಎಸ್.ಚಂದಾ, ವಿರೂಪಾಕ್ಷಯ್ಯಸ್ವಾಮಿ ಹಿರೇಮಠ, ಸೇರಿದಂತೆ ಬಿ.ಜೆ.ಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಇತರರು ಇದ್ದರು.

LEAVE A REPLY

Please enter your comment!
Please enter your name here