ಮೂಡಲಗಿ:ಡಿ,1೦-ಪಟ್ಟಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಿಂದ ಶಬರಿ ಮಲೈಗೆ, ಸ್ವಾಮಿಗಳು, ಕನ್ಯ ಸ್ವಾಮಿಗಳು ಪಾದಯಾತ್ರೆ ಮಾಡುವ ಸ್ವಾಮಿಗಳನ್ನು ಬಿಳ್ಕೋಟ್ಟರು. ಇರುಮುಡಿ ಕಟ್ಟಿಕೊಂಡು ದಿನಾಲು 30 ರಿಂದ 40 ಮೈಲಿ (ಕಿ ಮಿ) 30 ದಿನಗಳವರೆಗೆ ತಲೆಯ ಮೇಲೆ ಇರುಮುಡಿ, ಕಾಲಿನಲ್ಲಿ ಪಾದರಕ್ಷೆ ಇಲ್ಲದೆ ಡಾಂಬರೀಕರಣ ರಸ್ತೆಯಲ್ಲಿ ಪಾದದ ಕೆಳಭಾಗದ ಚರ್ಮ ಹರಿಯುವ ಸಂಭವಕೂಡಾ ಹೆಚ್ಚಾಗಿರುತ್ತದೆ. ಸಂಚರಿಸಿ ಕೊನೆಗೆ ಅಯ್ಯಪ್ಪ ಸ್ವಾಮಿಗಳು ಶಬರಿಮಲೈಗೆ ತಲುಪುವರು. ಮೂಡಲಗಿಯಿಂದ ಈರಪ್ಪ ವರ್ಲಿ ಸ್ವಾಮಿ ಸತತ ಮೂರು(3) ವರ್ಷದಿಂದ ಪಾದಯಾತ್ರೆ ಮಾಡುತ್ತಿದ್ದಾರೆ ,ಶಿವಾನಂದ ಮೆಣಸಿ,ಪ್ರವೀಣ ಮಾನೆ,ಭೀಮಶಿ ಕೋಟಿನತೋಟ,ರೋಹಿತ ಮಾನೆ ಇವರು ಇದೆ ಮೊದಲ ಬಾರಿಗೆ.