ಮೂಡಲಗಿ:ಡಿ,09-ತಾಲೂಕಿನ ರೈತರು ತಮಗೆ ಸಿಗಬೇಕಾದ ಸೌಕರ್ಯದ/ಬರಪಿಡಿತ ಸಲುವಾಗಿ ಬೆಳಗಾವಿ ಚಳಿಗಾಲ ಅಧಿವೇಶನ ನಡೆಯುತ್ತಿರುವ ಸುವರ್ಣ ಸೌಧಾಕ್ಕೆನಯನ ತೆರಳಿ ರಾಜ್ಯದ ಕೆಲ ನಾಯಕರಿಗೆ ಮನವಿ ಸಲ್ಲಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿ,ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ಬಿಜೆಪಿಯ ರಾಜಾಧ್ಯಕ್ಷ ಬಿ.ವಾಯ್.ವಿಜೇಂದ್ರರವರಿಗೆ ಮನವಿ ನೀಡಿದರು.

ಉತ್ತರ ಕರ್ನಾಟಕದ ರೈತಾಪಿ ಜನರಿಗೆ, ಬರಪಿಡಿತದಿಂದ ರೈತರ ಬದುಕು ಬೀದಿ ಪಾಲು ಆಗಿದೆ. ರೈತರ ಸಬ್ಸಿಡಿ ಕುರಿತು ಮತ್ತು ನೀರಾವರಿ ಯೋಜನೆಗಳಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳ ಬಗ್ಗೆ, ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ (ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.6 ಮೀಟರನಿಂದ 524 ಮೀಟರ್ ಗೆ ಏರಿಸುವ ಯೋಜನೆ) ಹಾಗೂ ಲಿಫ್ಟ್ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದರ ಕುರಿತು ರೈತರ ಹಾಲಿನ ಪ್ರೋತ್ಸಾಹ ಧನ ಕುರಿತು ಮತ್ತು ಬೆಳಗಾವಿ ನಗರದ ಮೂಲಕ ಹಾದು ಹೋಗುವ ಪ್ರಮುಖ ಒಳಚರಂಡಿ ಮಾರ್ಗ ಮತ್ತು ಒಳಚರಂಡಿ ಸಂಸ್ಕರಣೆ ಘಟಕಗಳು ಸ್ಥಾಪಿಸುವುದರ ಬಗ್ಗೆ,ಗಡಿ ಬಿಕ್ಕಟ್ಟು,ಕಾರ್ಮಿಕರ ಕಲ್ಯಾಣ ಯೋಜನೆಗಳನ್ನು ಒಳಗೊಂಡಂತೆ ಹತ್ತು ಹಲವು ರಚನಾತ್ಮಕ ಚರ್ಚೆಗಳಾಗಬೇಕಾಗಿದೆ ದಯವಿಟ್ಟು ಸದನದಲ್ಲಿ ಮಾತನಾಡಬೇಕೆಂದು ಅರಭಾವಿ ಮತಕ್ಷೇತ್ರದ ರೈತ ಮುಖಂಡರೊಂದಿಗೆ ಹಾಗೂ ನಮ್ಮ ರೈತ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ್ ನಾಯ್ಕ್ ನಮ್ಮ ಬೇಡಿಕೆಗಳು ಮನವಿ ಮುಖಾಂತರ ಕೇಳಿಕೊಂಡಿದ್ದೇವೆ ಹಾಗೂ ನಮ್ಮ ಭಾಗದ ಸಚಿವರಾದ ಸತೀಶ ಜಾರಕಿಹೊಳಿಯವರಿಗೂ ನಮ್ಮ ಸಂಕಟ ಬಗ್ಗೆ ಹೇಳಿಕೊಂಡೆವು ಅಂತ ಹೇಳಿದರು.

ರೈತ ಹಿತರಕ್ಷಣಾ ವೇದಿಕೆಯ ಸದಸ್ಯರುಗಳು ಜಿಲ್ಲಾ ಸಂಘಟನಾ ಸಂಚಾಲಕರು ಪಾರೇಶ ಉಪ್ಪಿನ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಜ್ಜಪ್ಪ ನಾಯಕ, ಜಿಲ್ಲಾ ಚಾಲಕರು ಸಂಗಪ್ಪ ಹಡಪದ, ಜಿಲ್ಲಾ ಯುವ ಘಟಕದ ಅಧ್ಯಕ್ಷರು ಪ್ರಕಾಶ ಕಾಳಶೆಟ್ಟಿ, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಸಿದ್ದಪ್ಪ ನಡಹಟ್ಟಿ, ಸದಾಶಿವ ನಾವಿ,ತಾಲೂಕಾಧ್ಯಕ್ಷ ಭೀಮಪ್ಪ ರೊಡ್ಡನ್ನವರ ಮಾದೇವ ಬಂಗೇನವರ, ಮಾರುತಿ ನಾಯಕ, ರಮೇಶ ಹುಡೆದ, ವಿಠ್ಠಲ ಖಜಿಡೋಣಿ, ಮಾರುತಿ ನಾಯಕ, ಬಸಯ್ಯ ಹಿರೇಮಠ ಇನ್ಮು ಅನೇಕ ಮೂಡಲಗಿ ತಾಲೂಕಿನ ಹಳ್ಳಿಯ ಹಾಗೂ ಸುತ್ತಲಿನ ರೈತರು ಭಾಗಿಯಾಗಿದರು.

LEAVE A REPLY

Please enter your comment!
Please enter your name here