ವಿಜಯಪುರ: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಗ್ರಾಮಸಹಾಯಕರಾಗಿ ಸೇವೆಸಲ್ಲಿಸುತ್ತಿರುವ ಗ್ರಾಮಸಹಾಯಕರಿಗೆ ಸೇವಾ ಭದ್ರತೆ,ಡಿ ದರ್ಜೆ ನೌಕರರೆಂದು ಪರಿಗಣನೆ,ಹಾಗೂ ಕನಿಷ್ಟವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮಸಹಾಯಕರು ಸುಮಾರು ವರ್ಷಗಳಿಂದ ಹಲವು ವಿಧದ ಹೋರಾಟಗಳನ್ನು ಮಾಡುತ್ತಾ ಸರ್ಕಾರದಗಮನಸೆಳೆದಿದ್ದಾರೆ.

ಆದರೂಕೂಡಾ ಇಲ್ಲಿಯವರೆಗೆ ಆಡಳಿತನಡೆಸಿದ ಸರ್ಕಾರಗಳ ಇಚ್ಛಾಶಕ್ತಿಕೊರತೆಯಿಂದಾಗಿ ಗ್ರಾಮಸಹಾಯಕರ ಬೇಡಿಕೆಗಳು ಈಡೇರುತ್ತಿಲ್ಲವಾದ್ದಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಯಾದರೂ ಸರ್ಕಾರ ಗ್ರಾಮಸಹಾಯಕರಬೇಡಿಕೆ ಈಡೇರಿಸುವನಿರ್ಧಾರ ತಗೆದುಕೊಳ್ಳಲೆಂದು ಸರ್ಕಾರಕ್ಕೆ ಒತ್ತಾಯಿಸಲು ದಿನಾಂಕ:11-12-2023ರಂದು ವೀರರಾಣಿ ಕಿತ್ತೂರು ಚನ್ನಮ್ಮ ಅರಮನೆಯಿಂದ ಪಾದಯಾತ್ರೆಮೂಲಕ ಸುವರ್ಣ ಸೌಧಕ್ಕೆ ತೆರಳಿ12-12-2023ರಿಂದ ಸುವರ್ಣ ಸೌಧದಬಳಿ ಅನಿರ್ಧಿಷ್ಟಾವದಿ ಮುಷ್ಕರ ನಡೆಸಲಾಗುವುದು ಆದ್ದರಿಂದ ಅನುಮತಿ ಕೋರಿ ಉಪವಿಭಾಗಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಗ್ರಾಮಸಹಾಯಕರ ಸಂಘಟನೆಯಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.