ಮಂಡ್ಯ:ವಿದ್ಯಾರ್ಥಿಗಳು ಶಾಲೆಯಲ್ಲಿ ತಮಗೆ ದೊರಕುವ ಸಂಪನ್ಮೂಲಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು. ಶೈಕ್ಷಣಿಕವಾಗಿ ಸಾಧನೆ ಮಾಡಿ, ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಹೊಂದುವ ದಾರಿಯಲ್ಲಿ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ತಿಳಿಸಿದರು.

ಗ್ರಾಮ ಪಂಚಾಯಿತಿ ಉಮ್ಮಡಹಳ್ಳಿ ಮತ್ತು ಸರ್ಕಾರಿ ಪ್ರೌಢಶಾಲೆ ಉಮ್ಮಡಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ 2023-24ನೇ ಸಾಲಿನ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ, ಮಕ್ಕಳ ಸಂತೆ, ಮೆಟ್ರಿಕ್ ಮೇಳ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಸರ್ಕಾರಿ ಪ್ರೌಢ ಶಾಲೆ -ಉಮ್ಮಡಹಳ್ಳಿಯ ಶಾಲಾವರಣದಲ್ಲಿ ಉದ್ಘಾಟಿಸಿ ಮಾತನಾಡಿದರು.

ಈ ಕಾರ್ಯಕ್ರಮ ವಿನೂತನವಾಗಿದ್ದು, ಖಾಸಗಿ ಶಾಲೆಗಳಿಗೆ ಸೀಮಿತವಾಗಿದ್ದು, ಇದನ್ನು ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿರುವುದು ಮೆಚ್ಚುವಂತದ್ದು. ಜೊತೆಗೆ ಖಾಸಗಿ ಶಾಲೆ ಯಾವುದರಲ್ಲು ಕಡಿಮೆ ಇಲ್ಲ ಮತ್ತು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ತುಂಬಾ ಅದೃಷ್ಟವಂತರು ಈ ಶಾಲೆಯ ಸೌಲಭ್ಯಗಳ ಬಳಸಿಕೊಂಡು ನನಗಿಂತ ಉನ್ನತ ಸ್ಥಾನವನ್ನು ವಿದ್ಯಾರ್ಥಿಗಳು ಮುಟ್ಟಬೇಕು ಎಂದರು.

ಉದ್ಯಮ್ಮಡಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮ್ಮ ಸಾಮಾಗ್ರಿಗಳೊಂದಿಗೆ ಸಂತೆಯಲ್ಲಿ ವ್ಯಾಪಾರ- ಪಹಿವಾಟು ನಡೆಸಿದರು

ಜಿಲ್ಲಾ ಪಂಚಾಯತ್ ಸಿಇಒ ಶೇಕ್ ತನ್ವಿರ್ ಆಸಿಫ್ ಅವರು ಮುಕ್ಕಳನ್ನು ಮಾತನಾಡಿಸಿ ಅವರು ಸಿದ್ಧಪಡಿಸಿಕೊಂಡು ಬಂದಿದ್ದ ತಿಂಡಿ ತಿನಿಸುಗಳನ್ನು ಸವಿದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇದರೊಂದಿಗೆ ‘ವಿಜ್ಞಾನ ಕಾರ್ನರ್’ ನಲ್ಲಿದ್ದ ವಿವಿಧ ವಿಜ್ಞಾನದ ಮಾದರಿಗಳನ್ನು ವೀಕ್ಷಿಸಿ ಅದರ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ವಿವಿಧ ಬಗೆಯ ಜೀವಿಗಳ ಸಂರಕ್ಷಿತ ಮಾದರಿಗಳು, ಸೌರವ್ಯೂಹ. ಹೂವಿನರಚನೆ. ಸೂಕ್ಷ್ಮದರ್ಶಕ ವೀಕ್ಷಣೆ, ಜೈವಿಕ ಅನಿಲ ತಯಾರಿ ಘಟಕ, ಸೌರಕುಕ್ಕರ್, ಸೌರಜಲತಾಪಕ ಮುಂತಾದ ಮಾದರಿಗಳೊಂದಿಗೆ – ಮಧುಮೇಹ ಪತ್ತೆ ಹಚ್ಚಲು ಹಾಗೂ ರಕ್ತದ ಗುಂಪು ಕಂಡುಹಿಡಿಯುವ ಚಟುವಟಿಕೆ – ಪ್ರಯೋಗಗಳನ್ನು ವೀಕ್ಷಿಸಿದರು.

ತದನಂತರದಲ್ಲಿ ಗ್ರಾಮಸ್ಥರಿಗೆ ಇ-ಸ್ವತ್ತು ಹಕ್ಕು ಪತ್ರ ವಿತರಣೆ ನಡೆಯಿತು. ನಂತರ

ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶಿವರಾಮೇಗೌಡ ಮಾತನಾಡಿ ಕಾರ್ಯಕ್ರಮದ ಉದ್ದೇಶವು ವಿದ್ಯಾರ್ಥಿಗಳಲ್ಲಿ ವ್ಯವಹಾರ ಕೌಶಲವನ್ನು ಉತ್ತಮಪಡಿಸಲು ಸಹಕಾರಿಯಾಗಿದೆ ಮತ್ತು ಶಾಲೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೂ ವಿದ್ಯಾರ್ಥಿಗಳ ಉತ್ತಮ ಕಲಿಕೆಗೆ ಪೂರಕವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

LEAVE A REPLY

Please enter your comment!
Please enter your name here