ರಾಜಕೀಯ ಎಲ್ಲ ಪಕ್ಷಗಳಲ್ಲಿ ಬಿಜೆಪಿ ವಿಭಿನ್ನ ಮತ್ತು ಶಿಸ್ತಿನ ಪಕ್ಷವಾಗಿರುವದರಿಂದ ಎರಡು ಸಂಸದರಿಂದ ಮೂರನೂರಕ್ಕೂ ಅಧಿಕ ಸಂಸದರು ಗೆಲ್ಲುವ ಮೂಲಕ 12 ಕೋಟಿ ಪಕ್ಷದ ಸದಸ್ಯತ್ವ ಪಡೆದ ಪ್ರಪಂಚದ ಅತ್ಯಂತ ದೊಡ್ಡದಾದ ರಾಜಕೀಯ ಪಕ್ಷವಾಗಿ ಬಿಜೆಪಿ ಬೆಳೆಯುತ್ತಿದೆ ಎಂದು ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.
ಇತ್ತಿಚ್ಚಿಗೆ ಗೊಕಾಕ ಸಪ್ಲಾಯರ್ಸ್ ಕಲ್ಯಾಣ ಮಂಟಪದಲ್ಲಿ ಜರುಗಿದ ಜಿಲ್ಲಾ ಬಿಜೆಪಿ ಚುನಾಯಿತ ಪ್ರತಿನಿಧಿಗಳ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ,
ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮಾತ್ರ ಸಂಘಟನೆ ಮಾಡದೆ ದೇಶಕ್ಕಾಗಿ ದೇಶದ ಜನತೆಗಾಗಿ ಸದಾ ಚಟುವಟಿಕೆಗಳಿಂದ ಪಕ್ಷ ಸಂಘಟನೆಯಲ್ಲಿ ನಿರಂತವಾಗಿರುತ್ತದೆ. ಅದರಲ್ಲಿ ಪ್ರಶಿಕ್ಷಣ ವರ್ಗ ಅತ್ಯಂತ ಪ್ರಮುಖವಾಗಿರುತ್ತದೆ. ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಸಮಾಜದಲ್ಲಿ ಕೈಗೊಳ್ಳುವ ಕಾರ್ಯ, ಜನಸಂಪರ್ಕ, ಪಕ್ಷದ ಇತಿಹಾಸ ಸಾಧನೆ ಹಾಗೂ ಬಿಜೆಪಿ ಸರ್ಕಾರದ ಜನಪರ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವ ಮಹತ್ತರ ಕಾರ್ಯ ಪ್ರಶಿಕ್ಷಣ ವರ್ಗದಿಂದ ನಿರಂತರ ನಡೆಯುತ್ತದೆ. ಇದರ ಫಲದಿಂದ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅಂತರಾಷ್ಟ್ರೀಯ ನಾಯಕರಾಗಿ 5ನೂರು ವರ್ಷಗಳ ರಾಮಮಂದಿರ ವಿವಾದ ಕೊನೆಗಾಣಿಸಿ 24ಕ್ಕೆ ದೇಶದ ಜನತೆಗೆ ರಾಮಮಂದಿರ ಸಮರ್ಪಣೆಯಾಗಲಿದೆ. ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲಿಸಿದೆ. ಪ್ರಪಂಚದ 3ನೇ ಆರ್ಥಿಕ ಬಲಾಡ್ಯ ರಾಷ್ಟ್ರ ಭಾರತವಾಗಿದ್ದು ರಕ್ಷಣಾ ವ್ಯವಸ್ಥೆಯಲ್ಲಿ ಅದ್ವೀತಿಯ ಸಾಧನೆ ಮಾಡಿರುವ ಹೆಗ್ಗಳಿಕೆ ನರೇಂದ್ರ ಮೊದಿಯವರಿಗೆ ಸಲ್ಲುತ್ತದೆ. ಇದಕ್ಕೆಲ್ಲ ಸಾಮಾನ್ಯ ಕಾರ್ಯಕರ್ತರ ಶ್ರಮ ಮತದಾರರ ಆರ್ಶಿವಾದ ಕಾರಣವಾಗಿದ್ದು ಬರುವ ಲೊಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿಯವರನ್ನ ಪ್ರಧಾನಿ ಮಾಡಿ ಭಾರತವನ್ನು ಜಗದ್ಗುರವನ್ನಾಗಿಸುವ ಸಂಕಲ್ಪ ಮಾಡೋಣ ಎಂದರು.
ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ ಮಾತನಾಡಿ, ಭಾರತೀಯ ಜನತಾ ಪಾರ್ಟಿಯಿಂದ ಗೆದ್ದ ಪ್ರಧಾನ ಮಂತ್ರಿಗಳಿಂದ ಗ್ರಾಮ ಪಂಚಾಯತಿ ಸದಸ್ಯರವರೆಗೆ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಂದ ಬೂತ್ ಅಧ್ಯಕ್ಷರವರೆಗೂ ವಿವಿಧ ಸ್ಥರಗಳಲ್ಲಿ ಪ್ರಶಿಕ್ಷಣ ವರ್ಗಗಳು ನಿರಂತರ ನಡೆಯುತಿದ್ದು ಇದರಿಂದ ಬಿಜೆಪಿ ಸಂಪರ್ಕಕ್ಕೆ ಬರುವ ಎಲ್ಲ ಸದಸ್ಯರಿಗೂ ಬಿಜೆಪಿಯ ಇತಿಹಾಸ ರಾಷ್ಟ್ರಮೊದಲು, ಪಕ್ಷ ನಂತರ ಕೊನೆಗೆ ವ್ಯಕ್ತಿ ಎನ್ನುವ ರಾಷ್ಟ್ರಪ್ರೇಮ ಬೆಳೆಸಲಾಗುತ್ತದೆ ಎಂದರು.
ವೇದಿಕೆಯ ಮೇಲೆ ರಾಜ್ಯ ಪ್ರಶಿಕ್ಷಣಾ ವರ್ಗದ ಸದಸ್ಯ ಶಶಿಕಾಂತ ವಿಶ್ವಬ್ರಾಹ್ಮಣ, ವಿಭಾಗ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಭಾಷ ಪಾಟೀಲ, ಸಂದೀಪ್ ದೇಶಪಾಂಡೆ, ಮಂಡಲ ಅಧ್ಯಕ್ಷರಾದ ಮಹಾದೇವ ಶೆಕ್ಕಿ, ರಾಂಜೇದ್ರ ಗೌಡಪ್ಪಗೋಳ ಇದ್ದರು. ಅರಭಾಂವಿ ಮಂಡಲಕ್ಕೆ ಪ್ರಶಿಕ್ಷಣ ವರ್ಗ ನಡೆಸಲು ಅವಕಾಶ ನೀಡಿದ ಜಿಲ್ಲಾ ಅಧ್ಯಕ್ಷ ಸಂಜಯಪಾಟೀಲರನ್ನು ಮಂಡಲ ಪದಾಧಿಕಾರಿಗಳು ಸತ್ಕರಿಸಿ ಸಹಿ ನೀಡಿದರು. ವಾರದಿಂದ ಪ್ರಶಿಕ್ಷಣಾ ವರ್ಗದ ಯಶಸ್ವಿಗಾಗಿ ಶ್ರಮಿಸಿದ ಪ್ರಬಂದಕರನ್ನು ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಸತ್ಕರಿಸಿ ಅಭಿನಂದಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.
ಮಂಡಲ ಪ್ರಧಾನ ಕಾರ್ಯದರ್ಶಿ ಪರಸಪ್ಪ ಬಬಲಿ ಸ್ವಾಗತಿಸಿದರು.
ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬೈಲಹೊಂಗಲ, ಸವದತ್ತಿ, ಮುನವಳ್ಳಿ, ಖಾನಾಪುರ, ರಾಮದುರ್ಗ, ಮೂಡಲಗಿ, ನಾಗನೂರ, ಕಲ್ಲೋಳಿ, ಮುಡಲಗಿ, ಕೊಣ್ಣೂರ ಪಪಂ, ಪುರಸಭೆಯ ಬಿಜೆಪಿ ಚುನಾಯಿತ ಪ್ರತಿನಿಧಿಗಳು ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು.