ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಬೇಕಾದರೆ ಅವಿರತ ಪರಿಶ್ರಮ, ಆಸಕ್ತಿ, ದೃಢಸಂಕಲ್ಪ, ತ್ಯಾಗ ಮನೋಭಾವನೆ ಮುಖ್ಯ. ಸಾಮಾಜಿಕ ಕಳಕಳಿ, ಸೃಜನಶೀಲತೆ, ನವ ನವೀನ ಪ್ರಯತ್ನಗಳು ಒಂದು ದಿನ ವ್ಯಕ್ತಿಯನ್ನು ಸಾಧನೆಯ ದಡ ಸೇರಿಸುತ್ತವೆ. ವಿವಿಧ ವರ್ಣರಂಜಿತ ಕ್ಷೇತ್ರಗಳ ಪೈಕಿ ಸಿನಿಮಾ ಕ್ಷೇತ್ರವೂ ಕೂಡ ಒಂದು. ಉತ್ತಮ ಸದಾಭಿರುಚಿಯ ಚಿತ್ರ ಸಮಾಜಕ್ಕೆ ಬರಬೇಕಾದರೆ ಕಥೆ, ಚಿತ್ರಕಥೆ, ನಿರ್ದೇಶನ, ಸಂಭಾಷಣೆ ಸಿನಿಮಾದ ಜೀವಾಳ. ಇದರ ಜೊತೆಗೆ ತಂತ್ರಜ್ಞರ ಕ್ರಿಯಾಶೀಲತೆ ಮತ್ತು ಕಲಾ ನೈಪುಣ್ಯತೆ ಕೂಡ ಚಲನಚಿತ್ರದ ಯಶಸ್ಸಿಗೆ ಕಾರಣವಾಗಲಿದೆ.
ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಕ್ಷೇತ್ರದ ಬಗ್ಗೆ ಆಸಕ್ತಿ, ಒಲವು ಹೊಂದಿದ್ದ, ಸುಜಯ್ ಕುಮಾರ್ ಭಾವಿಕಟ್ಟಿ ಕನ್ನಡ ಚಲನಚಿತ್ರ ರಂಗದಲ್ಲಿ ಸಹಾಯಕ ಛಾಯಾಗ್ರಾಹಕರಾಗಿ ಪಾದಾರ್ಪಣೆ ಮಾಡಿದರು. ಸಿನಿಮಾ ಕ್ಷೇತ್ರದಲ್ಲಿ ಇದೀಗ ಸ್ವತಂತ್ರ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಹವ್ಯಾಸ ಸುಜಯ್ ಕುಮಾರ್ ಅವರನ್ನು ಚಲನಚಿತ್ರ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳತ್ತ ಮುಖ ಮಾಡುವಂತೆ ಮಾಡಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮತ್ತು ಜನರ ನಿರೀಕ್ಷೆ ಹಾಗೂ ಅಭಿರುಚಿ ಅರಿತ ಅವರು ಹೊಸ ನಿರ್ಮಿಸಲು ಮುಂದಾಗಿರುವುದು ಹೆಮ್ಮೆ ಪಡುವ ಸಂಗತಿಯಾಗಿದೆ.
ಯುವ ಛಾಯಾಗ್ರಹಕರಾಗಿ ಅವರು ಕ್ಲಿಕ್ಕಿಸಿದ ಛಾಯಾಚಿತ್ರಗಳನ್ನು ನೋಡುತ್ತಾ ಹೋದರೆ ಪರಿಸರ ಬಗ್ಗೆ ಇರುವ ಸೌಂದರ್ಯ ಪ್ರಜ್ಞೆಯ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ. ಕ್ಯಾಮೆರಾದಲ್ಲಿ ವಿಭಿನ್ನವಾಗಿ ಸೃಜನಶೀಲ ಸಂಯೋಜನೆಯಿಂದ ಸೆರೆಹಿಡಿದ ಫೋಟೋಗ್ರಾಫಿಗಳು ಹಳ್ಳಿಗಳ ಜನಜೀವನದ ಮೇಲೆ ಬೆಳಕು ಚೆಲ್ಲುತ್ತವೆ.
ಇಂತಹ ಹವ್ಯಾಸವನ್ನೇ ಪ್ರವೃತ್ತಿಯಾಗಿಸಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅತ್ಯುತ್ತಮ ಕ್ಯಾಮೆರಾ ಮ್ಯಾನ್ ಆಗಿ ಹೊರ ಹೊಮ್ಮಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಲು ಹಠಕ್ಕೆ ಬಿದ್ದವರಂತೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಸುಜಯ್ ಅವರು ಮುಂಬೈನಲ್ಲಿ ಖಾಸಗಿ ಕಂಪನಿಯಲ್ಲಿ ಮೂರು ವರ್ಷಗಳ ಕಾಲ ಕೆಲಸವನ್ನು ನಿರ್ವಹಿಸಿ ಬಂದಿರುವ ಇವರು ಬಿಡುವಿನ ವೇಳೆಯಲ್ಲಿ ತಮ್ಮ ಕ್ಷೇತ್ರದ ಬಗ್ಗೆ ಹೆಚ್ಚಿನ ಮಟ್ಟದಲ್ಲಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ಗ್ಯಾಲರಿಗಳಿಗೆ ಭೇಟಿ ನೀಡುವುದು ಸೇರಿದಂತೆ ಮುಂಬೈನ ಜನರ ಜೀವನ ಮತ್ತು ಅಲ್ಲಿನ ವ್ಯವಸ್ಥೆಯನ್ನು ತಮ್ಮ ಕ್ಯಾಮೆರಾದ ಮೂಲಕ ಸೆರೆ ಹಿಡಿದಿದ್ದಾರೆ. ಪ್ರಸ್ತುತ ಅವರು ಬೆಂಗಳೂರಿನಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಇಂತಹ ಪ್ರತಿಭೆಗಳು ನಿರ್ಮಿಸುವ ಚಲನಚಿತ್ರ ನೋಡಿ ಪ್ರೇಕ್ಷಕರು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಿದರೆ ಖಂಡಿತವಾಗಿ ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳೊಂದಿಗೆ ನವೀನ ಮಾದರಿಯ ಚಲನಚಿತ್ರಗಳು ತೆರೆಗೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಇವರ ಪ್ರಯತ್ನಕ್ಕೆ ಇವರಲ್ಲಿನ ಸಾಂಸ್ಕೃತಿಕ ಪ್ರಜ್ಞೆ ಮತ್ತು ಸಾಮಾಜಿಕ ಚಿಂತನೆ ಹೊಸ ರೀತಿಯಲ್ಲಿ ಸಮಾಜಕ್ಕೆ ತಮ್ಮ ಕ್ಷೇತ್ರದ ಮೂಲಕ ತೋರಿಸಬೇಕೆನ್ನುವ ಆಸೆ ಹೊತ್ತ ಛಾಯಾಗ್ರಾಹಕ. ಸುಜಯ್ ಅವರು ಕ್ಯಾಮೆರಾದ ಮೂಲಕ ಸಂಯೋಜಿಸಿ ಸೆರೆಹಿಡಿದ ಕಾರ್ಯಕ್ಕೆ ಕನ್ನಡ ಚಿತ್ರರಂಗದ ಅನೇಕ ನಿರ್ದೇಶಕರು, ನಿರ್ಮಾಪಕರು, ನಟ, ನಟಿಯರು ಮತ್ತು ಸಾಹಿತಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇವರು ಇತ್ತೀಚಿಗೆ ಸ್ವತಂತ್ರವಾಗಿ ಛಾಯಾಗ್ರಹಣ ಮಾಡಿದ ಚಲನಚಿತ್ರ “ಬಯಲು ಸೀಮೆ” ಇವರ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ. ಚಲನಚಿತ್ರ ವೀಕ್ಷಣೆ ಮಾಡಿದ ಹಲವು ಕಲಾವಿದರು ಇವರ ಛಾಯಗ್ರಹಣ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವುದಂತೂ ಸತ್ಯ.
ಲೇಖನ
ರಾಘವೇಂದ್ರ ನಾಯಕ ಎನ್ ಟಿ
I am continually invstigating online for articles that can facilitate me. Thanks!