ವಿಜಯಪುರ:ಕರ್ನಾಟಕ ಸಕಾರದ ಕಂದಾಯ ಇಲಾಖೆಯಲ್ಲಿ ಗ್ರಾಮಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಯಾವುದೇ ಸೇವಾ ಭದ್ರತೆ ಇಲ್ಲಾ ಮತ್ತು ಕನಿಷ್ಟ ವೇತನವೂ ಇಲ್ಲದೆ ಪ್ರತಿನಿತ್ಯ ಗ್ರಾಮಗಳಲ್ಲಿ ಮಳೆ,ಗಾಳಿ,ನೆರೆಹಾವಳಿ,ಬರಗಾಲ ಮೂಂತಾದ ಎಲ್ಲಾ ಸಮಯದಲ್ಲಿ ಜೀವದ ಹಂಗುತೊರೆದು ಮನೆ ಮನೆಗಳಿಗೆ ತೆರಳಿ ಸರ್ಕಾರದ ಯೋಜನೆಗಳನ್ನು ತಲುಪಿಸುತ್ತಿರುವ ನಮ್ಮನ್ನು ಸರ್ಕಾರ ಕಡೆಗನಿಸುತ್ತಿರುವುದು ಅತ್ಯಂತ ಖಂಡನೀಯವೆಂದು ಸಂಘದ ಪದಾಧಿಕಾರಿಗಳು ಖೇದ ವ್ಯಕ್ತಡಿಸಿದರು ಕೂಡಲೆ ಸರ್ಕಾರ ತಮ್ಮ ಮನವಿಯನ್ನು ಪರಿಗನಿಸಿ ಬೇಡಿಕೆ ಈಡೇರಿಸಬೇಕೆಂದು ಕಂದಾಯಸಚಿವ ಕೃಷ್ಣಬೈರೇಗೌಡರಿಗೆ ಮನವಿ ಅರ್ಪಿಸಿದರು.
ವಿಜಯಪುರಕ್ಕೆ ಆಗಮಿಸಿದ ಕಂದಾಯ ಸಚಿವರನ್ನು ಗ್ರಾಮಸಹಾಯಕರ ಸಂಘದ ಪದಾಧಿಕಾರಿಗಳು ಸಚಿವರನ್ನು ಭೇಟಿಮಾಡಿ ಈ ಹಿಂದೆ ತಾವು ಕೈಗೊಂಡ ಸೇವಾ ಭದ್ರತೆ, ”ಡಿ”ಗ್ರುಪ್ ನೌಕರರೆಂದು ಪರಿಗನಿಸಲು ಮತ್ತು ಕನಿಷ್ಟವೇತನಕ್ಕೆ ಒತ್ತಾಯಿಸಿ ನಡೆಸಿದ್ದ ಹೋರಾಟಗಳ ಕುರಿತು ವಿವರಿಸಿದರು. ಹಿಂದೆ ನಮ್ಮ ಹೋರಾಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಪದಾಧಿಕಾರಿಗಳನ್ನು ಕರೆಸಿ ನಮ್ಮ ಮನವಿಯನ್ನು ಆಲಿಸಿದ್ದರು ಮತ್ತು ಅಡ್ವೋಕೇಟ್ ಜನರಲ್ ರವರಿಗೆ ವರದಿ ನೀಡುವಂತೆ ಸೂಚಿಸಿದ್ದರು.ಮುಖ್ಯಮಂತ್ರಿಗಳ ಆದೇಶದಂತೆ ಪ್ರೋ.ರವಿವರ್ಮಕುಮಾರ್ ರವರು ವರದಿಯನ್ನು ಸಲ್ಲಿಸಿದ್ದಾರೆ.

ಇದಲ್ಲದೆ ಹಾರ‍್ನಹಳ್ಳಿ ರಾಮಸ್ವಾಮಿಯವರು ಕಂದಾಯ ಸಹಾಯಕರ ಹುದ್ದೆಗಳು ಅಗತ್ಯವಿಲ್ಲಾ ಅವುಗಳನ್ನು ರದ್ದು ಪಡಿಸಬೇಕೆಂದು ಸೂಚಿಸಿದ್ದಾಗ ಮೂವತ್ತೊದು ಜಿಲ್ಲೆ ಗಳ ಜಿಲ್ಲಾಧಿಕಾರಿಗಳ ಅಭಿಪ್ರಾಯವನ್ನು ಸರ್ಕಾರ ಕೇಳಿದಾಗ ಗ್ರಾಮಸಹಾಯಕರ ಹುದ್ದೆಗಳು ಅವಸ್ಯಕತೆ ಇದ್ದು ಇವುಗಳು ಇರಬೇಕೆಂದು ಮೂವತ್ತೊಂದು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇಂಥಾ ಹತ್ತು ಹಲವಾರು ಅಭಿಪ್ರಾಯಗಳು ಗ್ರಾಮಸಹಾಯಕರ ಪರವಾಗಿದ್ದರೂ ಕೂಡಾ ಸರ್ಕಾರಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆಎಂದು ಪದಾಧಿಕಾರಿಗಳು ನೊಂದು ನುಡಿದರು. ಈ ಬಾರಿ ನಡೆಯುವ ಬೆಳಗಾವಿಯ ಚಳಿಗಾಲ ಅಧಿವೇಷಣದಲ್ಲಿ ಗ್ರಾಮಸಹಾಯಕರು ಕುಟುಂಬ ಸಹಿತ ಸುಮಾರು ಹದಿನಾಲ್ಕು ಸಾವಿರ ಜನರು ಧರಣಿಯಲ್ಲಿ ಭಾಗವಹಿಸಲಿದ್ದೇವೆ ಸಕಾರ ನಮ್ಮ ಮನವಿಗೆ ಸ್ಪಂದಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೃಷ್ಣಬೈರೇಗೌಡರಲ್ಲಿ ಮನವಿಮಾಡಿಕೊಂಡರು.ಇದಕ್ಕೆ ಸ್ಪಂದಿಸಿ ಸಕಾರಾತ್ಮಕವಾದ ಅಭಿಪ್ರಾಯ ವ್ಯಕ್ತಪಡಿಸಿದ ಸಚಿವರು ಈ ತಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಚರ್ಚಿಸಿ ತಮಗೆ ನ್ಯಾಯ ವದಗಿಸಿ ಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸಹಾಯಕರ ಸಂಘಟನೆಯ ಪದಾಧಿಕಾರಿಗಳಾದ ನಜೀರ್ ಇನಾಮದಾರ್,ಅಲ್ಲಾಭಕ್ಷ ಕೊರಬು,ಹನುಮಂತ ಉಪ್ಪಾರ್,ಮುತ್ತಣ್ಣ ತಳವಾರ್,ಮಲ್ಲು ನಾಯ್ಕೋಡಿ,ಬಾಳು ಜಮಕಂಡಿ,ಶ್ರೀಶೈಲ ನರಿಯವರ್,ರಮೇಶ್ ಹಳಬರ್,ರಹಿಮಾನ್ ಮುಶ್ರಫ್,ಚಂದ್ರಶೇಖರ್ ವಾಲಿಕಾರ್,ಬಸು ದನ್ಯಾಳ್,ಶರಣಬಸು ಹಿರೊಳ್ಳಿ,ದವಲತ್ರಾಯ್ ಮಹಾಲಿಂಗ್,ಶರಣು ಶಿವಶರಣ, ಇತರೆ ಪದಾಧಿಕಾರಿಗಳು ಹಾಗೂ ಮಹಿಳಾ ಪದಾಧಿಕಾರಿಗಳು ಭಾಗವಹಿಸಿದ್ದರು ಎಂದುರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮಂತ ಉಪ್ಪಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here