ರಾಮನಗರ:” ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ), ಭೀಮವಾದ,ದ ರಾಜ್ಯ ಸಂಘಟನಾ ಸಂಚಾಲಕ ದಿ. ನಾರಾಯಣ್, ರಾಜ್ಯ ಸಂಚಾಲಕ ಎಂ. ಸಿ. ನಾರಾಯಣ್, ಜಿಲ್ಲಾ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಭೈರಲಿಂಗಯ್ಯ, ಜಿಲ್ಲಾ ಸಂಚಾಲಕ ಶಿವಶಂಕರ್, ಅಶೋಕ್ ಮುಂತಾದವರು ಭಾಗವಹಿಸಿ,ಶೋಷಿತರ ಸಮಸ್ಯೆಗಳು, ಬೀದಿಬದಿ ವ್ಯಾಪಾರಿಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು,
ಮತ್ತು ಮುಖ್ಯಮಂತ್ರಿಗಳ ಖಾತೆ ವಾರ್ತಾ ಇಲಾಖೆಯ ಅಧಿಕಾರ ದುರ್ಬಳಕೆ ಮಾಡುತ್ತಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕೆಂಬ, ಬೇಡಿಕೆಗಳನ್ನು ಈಡೇರಿಸುವಂತೆ, ಒತ್ತಾಯಿಸಿ, ರಾಮನಗರದ ಪ್ರಮುಖ ಬೀದಿಗಳಲ್ಲಿ, ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.