ಮೂಡಲಗಿ:ನ,29-ಪಟ್ಟಣದ ಪ್ರತಿಷ್ಠಿತ ಮೂಡಲಗಿ ಶಿಕ್ಷಣ ಸಂಸ್ಥೆಯ, ಎಸ್.ಎಸ್.ಆರ್. ಪದವಿ ಪೂರ್ವ ಕಾಲೇಜಿನ ಎನ್.ಎಸ್. ಎಸ್. ಘಟಕದ 2023-24ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರವು ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಜರುಗಿತು. ಎನ್.ಎಸ್.ಎಸ್.ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ- ಶೃದ್ದೆಯನ್ನು ಮೂಡಿಸುವ ಕೆಲಸ ಮಾಡುತ್ತದೆ.ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸುಣಧೋಳಿಯ ಶ್ರೀ. ಮ. ನಿ.ಪ್ರ.ಸ್ವ. ಶಿವಾನಂದ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ವಹಿಸಿ, ದೀಪ ಬೆಳಗಿಸಿದ ನಂತರ ವಿದ್ಯಾರ್ಥಿಗಳಿಗೆ ಹೇಳಿದರು. ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿ.ಎಸ್. ಸೋನವಾಲ್ಕರ,ಕಾರ್ಯಕ್ರಮದ ಅಧ್ಯಕ್ಷರಾಗಿ ಗ್ರಾಮದ ಬಸಪ್ಪ ಸಂಕನ್ನವರ, ಮುಖ್ಯ ಅತಿಥಿಗಳಾಗಿ ಪ್ರೊ. ಎಸ್. ಜಿ. ನಾಯಿಕ, ಪ್ರೊ. ಜಿ.ವಿ.ನಾಗರಾಜ,ವಿದ್ಯಾರ್ಥಿಗಳನ್ನು ಉದ್ದೇಶಿಸಿ ಈ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ತಾವು ವಿದ್ಯಾರ್ಥಿಯಾದ ಸಮಯದಲ್ಲಿ ಎನ್.ಎಸ್.ಎಸ್ ನಲ್ಲಿ ಭಾಗ ವಹಿಸಿದ ಸವಿ ನೆನಪುಗಳನ್ನು ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜೀತ ಮನ್ನಿಕೇರಿಯವರು ಮೆಲುಕು ಹಾಕಿದರು. ಕಾಲೇಜಿನ ಪ್ರಾಚಾರ್ಯರಾದ ಎಂ.ಎಸ್. ಪಾಟೀಲ ಸ್ವಾಗತಿಸಿದರು, ಎಚ್.ಎಂ. ಹತ್ತರಕಿ ಮಾಲಾರ್ಪಣೆ ಕಾರ್ಯ ನಿರ್ವಹಿಸಿದರು, ಬಿ.ಜಿ. ಗಡಾದ ವಂದಿಸಿದರು, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಎಸ್. ಕೆ. ಹಿರೇಮಠ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರಾದ ಡಾ. ಆರ್. ಪಿ. ಬಿರಾದಾರ,ಎಚ್. ಡಿ. ಚಂದರಗಿ, ಎಲ್.ಆರ್. ಧರ್ಮಟ್ಟಿ. ಹಾಗೂ ಎನ್. ಪಿ. ಗುಳೇದಗುಡ್ಡ ಎನ್.ಎಸ್. ಎಸ್. ಸ್ವಯಂ ಸೇವಕರು, ಪತ್ರಕರ್ತರು ಹಾಗೂ ಗ್ರಾಮದ ಜನರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here