ದಾವಣಗೆರೆ: ನಗರದ ರೌಂಡ್ ಟೇಬಲ್ ಇಂಡಿಯಾ ದಾವಣಗೆರೆ-76 ಮತ್ತು ಅಪೋಲೋ ಡಯಾಗೋಸ್ಟಿಕ್, ದಾವಣಗೆರೆ ಶಾಖೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ದಿನಾಂಕ: 26-11-2023ರ ಭಾನುವಾರ ನಗರದ ಎಂ.ಸಿ.ಸಿ. ‘ಬಿ’ ಬ್ಲಾಕ್ ನ 1946 ಪ್ರಕಾಶ್ ಕಾಫಿ ವರ್ಕ್ಸ್ ಪಕ್ಕದಲ್ಲಿ ನೆರವೇರಿತು.

ಶಿಬಿರದಲ್ಲಿ ಸಕ್ಕರೆ ಕಾಯಿಲೆ, ಬಿ.ಪಿ. ಮತ್ತು ಕೊಲೆಸ್ಟ್ರಾಲ್‌ನ್ನು ಉಚಿತವಾಗಿ ಹಾಗೂ ಥೈರಾಯ್ಡ್ ತಪಾಸಣೆಯನ್ನು ರಿಯಾಯಿತಿ ದರದಲ್ಲಿ ಮಾಡಲಾಯಿತು. ಸುಮಾರು 150ಕ್ಕೂ ಹೆಚ್ಚು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಭಿಷೇಕ್ ಶೇಟ್, ಕಾರ್ಯದರ್ಶಿ ಶಂಕರಮೂರ್ತಿ ಜಿ.ವಿ.,. ಖಜಾಂಚಿ ಧನುಷ್, ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here