ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರು ಕಾರ್ಮಿಕರ ಘಟನೆಯು ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಸರ್ಕಾರಗಳ ಕ್ರಿಮಿನಲ್ ನಿರ್ಲಕ್ಷ್ಯತನವನ್ನು ಬಹಿರಂಗಗೊಳಿಸಿದೆ ಎಂದು Construction Workers Federation of India (CWFI) ಟೀಕಿಸಿದೆ.
41 ನಿರ್ಮಾಣ ಕಟ್ಟಡ ಕಾರ್ಮಿಕರ ಜೀವಗಳು ಇನ್ನೂ ಅಪಾಯದಲ್ಲಿರುವ ಉತ್ತರಕಾಶಿಯಲ್ಲಿ ಪರಿಹಾರ ಕಾರ್ಯಾಚರಣೆಗಳ ವೈಫಲ್ಯ ಮತ್ತು ವಿಳಂಬದ ಬಗ್ಗೆ ಭಾರತ ನಿರ್ಮಾಣ ಕಾರ್ಮಿಕರ ಫೆಡರೇಶನ್ (CWFI)ತೀವ್ರ ದುಃಖ ಹಾಗೂ ಆತಂಕ ವ್ಯಕ್ತಪಡಿಸುತ್ತದೆ.
ನವ ಉದಾರವಾದಿ ಬಿಜೆಪಿ ಸರ್ಕಾರಗಳು ಅನುಸರಿಸುತ್ತಿರುವ ಅಮಾನವೀಯ ಲಾಭದ ಹಸಿವಿನ ‘ಅಭಿವೃದ್ಧಿ’ ಮಾದರಿಗಳು ಮತ್ತು ನೀತಿಗಳ ಪರಿಣಾಮವಾಗಿ ಈ ಮಾನವ ನಿರ್ಮಿತ ದುರಂತ ಅಪಘಾತವಾಗಿದೆ. ವರದಿಗಳು ಮತ್ತು ತಜ್ಞರ ಹೇಳಿಕೆಗಳ ಪ್ರಕಾರ, ನೂರಾರು ಕಾರ್ಮಿಕರು ಮತ್ತು ಹಗಲು ರಾತ್ರಿ ದುಡಿಯುವ ಇಂತಹ ಬೃಹತ್ ನಿರ್ಮಾಣ ಯೋಜನೆಗಳಲ್ಲಿ ಅವಘಡಗಳು ಸಂಭವಿಸಿದಾಗ ತಪ್ಪಿಸಿಕೊಳ್ಳುವ ಇರಬೇಕಾದ ತುರ್ತು ಮಾರ್ಗಗಳು ಸೇರಿದಂತೆ ಯಾವುದೇ ಸುರಕ್ಷತಾ ಕ್ರಮಗಳನ್ನು ಇಲ್ಲಿ ತೆಗೆದುಕೊಳ್ಳಲಾಗಿಲ್ಲ.ಇದೇ ರೀತಿಯ ಅನೇಕ ಪ್ರಕರಣಗಳು ಹಿಂದೆ ಸಂಭವಿಸಿರುವಾಗಲೂ ವಿಶೇಷವಾಗಿ ಹಿಮಾಲಯ ಪ್ರದೇಶದಲ್ಲಿ, ದೊಡ್ಡ ಖಾಸಗಿ ನಿರ್ಮಾಣ ಕಂಪನಿಗಳು ಭೂವಿಜ್ಞಾನಿಗಳ ನಿರ್ದೇಶನಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕಾರ್ಮಿಕರ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿವೆ
ಹೊಸ ಸುರಂಗ ನಿರ್ಮಿಸುವಾಗ ಅನುಸರಿಸಬೇಕಾದ ವಿಧಾನಗಳು ಮತ್ತು ತಂತ್ರಜ್ಞಾನಗಳನ್ನು ಹಾಗೂ ಸುರಕ್ಷತಾ ನಿರ್ದೇಶನಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಕಾನೂನು ಜಾರಿ ಕಾರ್ಯವಿಧಾನವು ಸಂಪೂರ್ಣ ವಿಫಲವಾಗಿರುವುದನ್ನು ಈ ಘಟನೆ ಸಾಕ್ಷೀಕರಿಸಿದೆ.
ಭಾರತದಲ್ಲಿನ ನಿರ್ಮಾಣ ಕ್ಷೇತ್ರವು ಪ್ರಪಂಚದಾದ್ಯಂತದ ಕೆಲಸದ ಸ್ಥಳದಲ್ಲಿ ಅಪಘಾತಗಳಿಗೆ ಹೆಚ್ಚಿನ ಕೊಡುಗೆ ನೀಡುತ್ತದೆ.ಉತ್ತರಕಾಶಿಯಲ್ಲಿ ದುರ್ಘಟನೆ ನಮ್ಮ ಸರ್ಕಾರಗಳು ಸಮಯೋಚಿತ ಕ್ರಮ ಮತ್ತು ರಕ್ಷಣಾ ಕಾರ್ಯಾಚರಣೆಗಳ ನಡೆಸುವಾಗ ನಿರ್ವಹಿಸಬೇಕಾ ಸಮನ್ವಯತೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಮೋದಿ ಸರ್ಕಾರದ ಕೇಂದ್ರ ಸಚಿವರು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದು,ನಿರ್ವಹಣಾ ಕೇಂದ್ರ ತಂಡವನ್ನು ಬಹಳ ತಡವಾಗಿ ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ ಮಾತ್ರವಲ್ಲ ಘಟನೆ ಸಂಭವಿಸಿ ದ 10ನೇ ದಿನಗಳ ಬಳಿಕ ಮಾತ್ರವೇ ಅಂತಾರಾಷ್ಟ್ರೀಯ ತಜ್ಞರ ಸೇವೆ ಪಡೆಯಲಾಗಿದೆ
ದುರ್ಘಟನೆಯ ಸ್ಥಳಕ್ಕೆ ತೆರಳಿದ ಕಾರ್ಮಿಕ ನಾಯಕರನ್ನು ಘಟನಾ ಸ್ಥಳಕ್ಕೆ ತೆರಳಲು ಅವಕಾಶ ನೀಡಲಿಲ್ಲ ಪ್ರತಿಭಟನೆಯ ನಂತರವೇ ಸಿಐಟಿಯು ನಿಯೋಗಕ್ಕೆ ಕೆಲಸದ ಸ್ಥಳದಲ್ಲಿ ಇತರ ಕಾರ್ಮಿಕರನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು. ಸುರಂಗದ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಅಪಘಾತದ ನಂತರ ಹಾಕಲಾಗಿದ್ದ ಹ್ಯೂಮ್ ಪೈಪ್‌ಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ಕಾರ್ಮಿಕರು ದೂರಿದರು.ಈ ನಿರ್ಲಕ್ಷ್ಯಕ್ಕೆ ಕಾರಣವಾದ ಖಾಸಗಿ ನಿರ್ಮಾಣ ಸಂಸ್ಥೆಯ ವಿರುದ್ಧಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಎಲ್ಲಾ ತಜ್ಞರು ಮತ್ತು ಯಂತ್ರೋಪಕರಣಗಳನ್ನು ಲಭ್ಯವಾಗುವಂತೆ ಮತ್ತು ಕಾರ್ಮಿಕರ ಜೀವಗಳನ್ನು ಉಳಿಸಲು ಸರ್ಕಾರವು ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚಿಸಬೇಕೆಂದು Construction Workers Federation of India (CWFI)
ಒತ್ತಾಯಿಸುತ್ತದೆ. ಸೂಕ್ಷ್ಮ ಪರಿಸರ ದುರ್ಬಲ ಪ್ರದೇಶದಲ್ಲಿ ಸುರಂಗದ ವಿವಿಧ ಹಂತಗಳಲ್ಲಿ ಯಾವುದೇ ಹಂತದಲ್ಲಿ ಸಡಿಲತೆಯ ಬಗ್ಗೆ ನಡೆಸುವ ಇಂತಹ ಕಾಮಾಗಾರಿಗಳನ್ನು ಸಂಪೂರ್ಣ ತನಿಖೆ ಒಳಪಡಿಸಬೇಕು ಮತ್ತು ಅಪಘಾತಕ್ಕೆ ಕಾರಣವಾದ ಎಲ್ಲರ ವಿರುದ್ದ ದೂರು ದಾಖಲಿಸಬೇಕು. ನೊಂದ ಕಾರ್ಮಿಕರ ಕುಟುಂಬಗಳಿಗೆ ಅಗತ್ಯ ನೆರವು ನೀಡಬೇಕು. ಹಾಗೂ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಸಂಹಿತೆಯನ್ನು(OSH) ತಕ್ಷಣವೇ ಹಿಂಪಡೆಯಬೇಕೆಂದು ನಾವು ಒತ್ತಾಯಿಸುತ್ತೇವೆ ಈ ಹೊಸ ಸಂಹಿತೆಯು ಪ್ರಸ್ತುತ ಇರುವ ಯಾವುದೇ ಸುರಕ್ಷತಾ ಕ್ರಮಗಳನ್ನು ದುರ್ಬಲಗೊಳಿಸುತ್ತದೆ, ಬದಲಿಗೆ ಕಾರ್ಮಿಕರನ್ನು ಹೊರಗೆ ತಳ್ಳುತ್ತದೆ
ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಹಾಗೂ ಕಾರ್ಮಿಕರ ಕೆಲಸದ ಸ್ಥಳದಲ್ಲಿ ಸುರಕ್ಷತಾ ವ್ಯವಸ್ಥೆಯನ್ನು ಬಲಪಡಿಸಲು ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು Construction Workers Federation of India (CWFI) ಆಗ್ರಹಿಸಿದೆ