ಮೂಡಲಗಿ: ನ,21-ಅರಭಾವಿ ಜಗದ್ಗುರು ಶ್ರೀ ದುರದುಂಡೇಶ್ವರ ಸಿದ್ದ ಸಂಸ್ಥಾನ ಮಠದಲ್ಲಿ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳವರ ಪೀಠಾರೋಹಣ ಜರುಗಿತು. ಅರಭಾವಿ ಮಠದ ಶ್ರೀ ದುರದುಂಡೇಶ್ವರ ಆಶೀರ್ವಾದ ಫಲವಾಗಿ ಮಠದ ದುರದುಂಡೇಶ್ವರ ಪುಣ್ಯಾರಣ್ಯ ಧಾರ್ಮಿಕ,ಶೈಕ್ಷಣಿಕ, ಸಾಮಾಜಿಕವಾಗಿ ಬೆಳೆದು ಭಕ್ತರ ಹೃದಯದಲ್ಲಿ ನೆಲೆಸಿದ ಲಿಂ, ಸಿದ್ದಲಿಂಗ ಸ್ವಾಮೀಜಿ ಆಶಯ ಪರಂಪರೆಯನ್ನು ಶ್ರೀ ಮಠದ ಅಭಿವೃದ್ಧಿ ಗುರುಬಸವಲಿಂಗ ಸ್ವಾಮೀಜಿ ಮುನ್ನಡೆಸುತ್ತಾರೆ ಎನ್ನುವ ಭರವಸೆ ಇದೆ ಎಂದು ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಆಶಿಸಿದರು.
ಗುರು ಬಸವಲಿಂಗ ಮಹಾಸ್ವಾಮಿಗಳವರ ಪೀಠರೋಹಣ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವಹಿಸಿ ಆಶೀರ್ವಚನ ನೀಡಿ ದುರದುಂಡೇಶ್ವರ ಮಠ ಹಾಗೂ ನಿಡಸೋಶಿ ಮಠಗಳಿಗೆ ತಮ್ಮದೆಯಾದ ಇತಿಹಾಸಗಳಿವೆ ಎಂದರು.
ಲಿಂ,ಸಿದ್ದಲಿಂಗ ಮಹಾಸ್ವಾಮಿಗಳು ಮಠದ ಪ್ರಗತಿಗಾಗಿ ಕಳೆದ ನಾಲ್ಕೈದು ದಶಕದಿಂದ ಅವಿರತವಾಗಿ ಶ್ರಮಿಸಿದ್ದರು ಸರಳ,ಶಿಸ್ತಿನ ವ್ಯಕ್ತಿಯಾಗಿದ್ದ ಅವರು ಕಳೆದ ತಿಂಗಳಲ್ಲಿ ಲಿಂಗಕ್ಯರಾದರು .ಅವರು ಬಿಟ್ಟು ಹೋದ ಆಚಾರ,ವಿಚಾರ ಹಾಗೂ ಸಂಸ್ಕ್ರತಿಗಳನ್ನು ಈಗಿರುವ ಹೊಸ ಪೀಠಾಧಿಪತಿಗಳು ಅಳವಡಿಸಿಕೊಂಡು ಶ್ರೀ ಮಠದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಬೇಕು.ಸಿದ್ದಲಿಂಗ ಮಹಾಸ್ವಾಮಿಗಳಿಗೆ ನೀಡಿರುವ ತನು,ಮನ ಮತ್ತು ಧನ ಸೇವೆಯನ್ನು ಗುರು ಬಸವಲಿಂಗ ಮಹಾಸ್ವಾಮಿಗಳಿಗೆ ಸಕಲ ಸದ್ಭಕ್ತರು ಎಲ್ಲ ರೀತಿಯಿಂದಲು ಸಹಕಾರ ನೀಡಿ,ಶ್ರೀ ಮಠದ ಪರಂಪರೆಯನ್ನು ಉಳಿಸಿ.ಮಠಗಳ ಬೆಳವಣಿಗೆಗಳಲ್ಲಿ ಭಕ್ತರ ಜೊತೆಗೆ ರಾಜಕಾರಣಿಗಳ ಪಾತ್ರವೂ ಕೂಡಾ ದೊಡ್ಡದಿದೆ.ಮಠಗಳನ್ನು ಉಳಿಸಿ ಬೆಳೆಸುವ ಶಕ್ತಿ ಭಕ್ತರಿಗಿದೆ.
ಲಿಂ,ಸಿದ್ದಲಿಂಗ ಮಹಾಸ್ವಾಮಿಗಳು ಸದಿಚ್ಛೆಯಂತೆ ಈ ಭಾಗದ ಜನಪ್ರಿಯ ಶಾಸಕರಾಗಿರುವ ಬಾಲಚಂದ್ರ ಜಾರಕಿಹೊಳಿಯವರ ತಂದೆ-ತಾಯಿ ಸ್ಮರಣಾರ್ಥವಾಗಿ ಶ್ರೀ ಮಠದ ಅಭಿವೃದ್ಧಿಯ ಜೊತೆಗೆ ಇಡೀ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಗುರು ಬಸವಲಿಂಗ ಮಹಾಸ್ವಾಮಿಗಳವರ ಪೀಠರೋಹಣಕ್ಕಿಂತ ಶ್ರೀ ಮಠದಲ್ಲಿ ಹನ್ನೊಂದು ದಿನಗಳ ಕಾಲ ಶ್ಯೂನ್ಯ ಸಂಪಾದನೆ ಪ್ರವಚನವನ್ನು ಹಮ್ಮಿಕೊಂಡು ಭಕ್ತರಿಗೆ ಧಾರ್ಮಿಕ ವಾತಾವರಣವನ್ನು ನಿರ್ಮಿಸಿದ್ದಾರೆ.ಶ್ಯೂನ್ಯದಿಂದ ಕನ್ನಡ ಅಕ್ಷರದಲ್ಲಿ ಒಂಬ್ಬತ್ತು ಅಕ್ಷರಗಳು ಹುಟ್ಟಿಕೊಳ್ಳುತ್ತಿವೆ.ಶ್ಯೂನ್ಯ ಸಂಪಾದನೆ ಅನ್ನುತ್ತಾರೆ ಮಠದ ಭಕ್ತರ ಆಶಯದಂತೆ ಹೊಸ ಪೀಠಧಿಪತಿಗಳು ಸೇವೆ ಸಲ್ಲಿಸಲಿ.ಆ ದುರದುಂಡೇಶ್ವರನ ಆಶೀರ್ವಾದ ಗುರುಬಸವಲಿಂಗ ಮಹಾಸ್ವಾಮಿಗಳಿಗೆ ಸದಾ ಇರುತ್ತದೆ ಎಂದು ಆಶಿಸಿದರು.
ಇನ್ನು ಅನೇಕ ಮಹಾತ್ಮರು,ಜನಪ್ರತಿ ನಿಧಿಗಳು ಹಾಗೂ ಅಪಾರ ಭಕ್ತರ ಸಮೂಹವೆ ನೂತನ ಗುರು ಬಸವಲಿಂಗ ಪೀಠರೋಹಣದಲ್ಲಿ ನೆರೆದಿದ್ದರು.

LEAVE A REPLY

Please enter your comment!
Please enter your name here