ಮೂಡಲಗಿ:ನ,20-ಪಟ್ಟಣದ ಜಾಮೀಯಾ ಮಸೀದಿ ವೃತ್ತದಲ್ಲಿ ಟಿಪ್ಪು ಸುಲ್ತಾನರವರ ಜಯಂತಿ ಜರುಗಿತು.
ಹೈದರಾಲಿ ಮಗನಾಗಿ 1753 ನವೆಂಬರ್,20 ರಂದು ದೇವನಹಳ್ಳಿಯಲ್ಲಿ ಟಿಪ್ಪು ಜನಿಸಿದನು.
ವಿದ್ಯಯ ಜೊತೆಯಲ್ಲಿ ಯುದ್ಧದ ಕಲಿಯನ್ನು ಹಾಗೂ ಪರ್ಷಿಯನ್, ಇಂಗ್ಲಿಷ್ ಮತ್ತು ಫ್ರೆಂಚ್ ಇನ್ನು ಅನೇಕ ಭಾಷೆಯನ್ನು ತಿಳಿದುಕೊಂಡಿದ್ದನು.ಟಿಪ್ಪುದಿನ ಕಳೆದಂತೆ ಬ್ರಿಟಿಷರಿಗೆ ತಲೆನೋವಾಗಿ ಪರಿಣಮಿಸಿದನು.
ಬ್ರಿಟಿಷರ ಹಾಗೂ ಟಿಪ್ಪುವಿನ ನಡುವೆ ಯುದ್ಧದ ಕಾರ್ಮೋಡ ಮೇಲಿಂದ ಮೇಲೆ ಕವಿತ್ತಿತ್ತು. ಈಸ್ಟ್ ಇಂಡಿಯಾ ಕಂಪನಿಯು ಭಾರತದೇಶದ ಬಹುಭಾಗ ಅವರ ವಶದಲ್ಲಿತ್ತು.ಬ್ರಿಟಿಷರಿಗೆ ಸಿಂಹ ಸ್ವಪ್ನ ವಾಗಿದರು.ಕೊನೆಯವರೆಗೂ ಬ್ರಿಟಿಷರ ವಿರುದ್ಧ ಹೋರಟ ನಡೆಸಿದನು. ಧರ್ಮದಲ್ಲಿ ತಾರತಮ್ಯ ಇರಲಿಲ್ಲ,ಎಲ್ಲ ಧರ್ಮಕ್ಕೂ ಸರಿ ಸಮನಾಗಿದ್ದನು ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಿ ಎಸ್ ಐ ಎಚ್.ವಾಯ್. ಬಾಲದಂಡಿ ಮಾತನಾಡಿದರು.
ಆದಮ ತಂಬೋಳಿ, ಶಿವಾನಂದ ಚಂಡಕಿ,ಶಿವು ಸಣ್ಣಕ್ಕಿ ಪುರಸಭೆ ಸದಸ್ಯರುಗಳು.ಅಜಿಜ್ ಡಾಂಗೆ,ಮಲ್ಲಿಕ್ ಕಳ್ಳಿಮನಿ ಬಿ.ಟಿ.ಟಿ ಕಮೀಟಿ ಉಪಾಧ್ಯಕ್ಷ, ಶಿವಬಸು ಸಾಲಹಳ್ಳಿ,ಶಾಹನೂರ ಮೊಘಲ್, ಕುತುಬುದ್ದಿನ ನೇಸರಗಿ,ಶಾಹರುಖಾನ ಮುಲ್ಲಾ,ತಾಹೀರ್ ಮುಲ್ಲಾ,ಚಾಂದಸಾಬ ದೇಸಾಯಿ,ರಫೀಕ ಮೊಘಲ್, ಅಲ್ತಾಫ್ ಲಾಡಖಾನ,ರಸುಲಸಾಬ ತಾಂಬೋಳಿ,ಹಾದಿಮನಿ,ಮದಾರ ಇನ್ನು ಅನೇಕರು ಟಿಪ್ಪು ಸುಲ್ತಾನ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.