. ಸಮೀಪದ ಹಿರೇಸಿಂಗನಗುತ್ತಿ ಗ್ರಾಮದ ಕವಿ, ಕಲಾವಿದ, ಗಾಯಕ, ನಿರೂಪಕ, ವ್ಯಂಗ್ಯ ಚಿತ್ರಕಾರ, ಚಿತ್ರಕಲಾ ಶಿಕ್ಷಕ ತಿರುಪತಿ ಚಲವಾದಿ ಅವರಿಗೆ ಗಣಕರಂಗ (ರಿ) ಧಾರವಾಡ ಅವರು ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕರ್ನಾಟಕ ಸಂಭ್ರಮ – ೫೦ ಮತ್ತು ಕನ್ನಡ ರಾಜ್ಯೋತ್ಸವ -2023 ರ ಪ್ರಯುಕ್ತ ನವ್ಹಂಬರ್ ೧ ರಂದು ಆಯೋಜಿಸಿದ್ದ ಸರ್ವ ಜನಾಂಗದ ಶಾಂತಿಯ ತೋಟ ಎಂಬ ವಿಷಯದ ಕುರಿತ ರಾಜ್ಯ ಮಟ್ಟದ ಅಂತರ್ಜಾಲ ಕವನ ರಚನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ. ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಮೈಸೂರಿನ ಕವಿ ಡಾ. ಜಯಪ್ಪ ಹೊನ್ನಾಳಿ ( ಜಯಕವಿ) ತೀರ್ಪುಗಾರರಾಗಿ ಹಾಗೂ ಬೆಂಗಳೂರಿನ ಸಂಘಟಕ ಗಣಪತಿ ಗೋ ಚಲವಾದಿ ( ಗಗೋಚ ) ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥ ಸಿದ್ಧರಾಮ ಹಿಪ್ಪರಗಿ ತಿಳಿಸಿದ್ದಾರೆ. ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿ ಪತ್ರ ಪುಸ್ತಕ ಮತ್ತು ನಗದು ಪುರಸ್ಕಾರ ಮತ್ತು ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ.