ಹುಣಸಗಿ : ಗ್ರಾಮ ಒನ್ ನಾಗರಿಕ ಸೇವಾಕೇಂದ್ರದಲ್ಲಿ ಪಡಿತರ ಚೀಟಿಯಲ್ಲಿನ ಹೆಸರು ತಿದ್ದುಪಡಿಗಾಗಿ ಹಳ್ಳಿಗಳಿಂದ ಬಂದಂತಹ ಸಾರ್ವಜನಿಕರು ಮುಗಿ ಬಿದ್ದಿರುತ್ತಾರೆ ಆದರೆ ನಾಗರಿಕ ಸೇವಾ ಕೇಂದ್ರದಲ್ಲಿ ಸರ್ವರ್ ನೇಟವರ್ಕ ಸಮಸ್ಯೆಯಿಂದಾಗಿ ಯಾವುದೇ ಕೆಲಸಗಳು ಆಗದೇ ಸಾರ್ವಜನಿಕರು ಪುನಃ ಮನೆಗೆ ತೆರಳು ಪರಿಸ್ಥಿತಿ ಉಂಟಾಗಿದ್ದು ದಿನಾಂಕವನ್ನು ಮುಂದೂಡಬೇಕೆಂದು ಕ.ರ.ವೇ ಜಿಲ್ಲಾ ಯುವ ಘಟಕ ಅಧ್ಯಕ್ಷರಾದ ಗೋಪಾಲಸಿಂಗ್ ಹಜೇರಿ ಹೇಳಿದರು.
ಪಟ್ಟಣದ ತಹಸೀಲ್ದಾರ ಕಾರ್ಯಾಲದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿ ಆಹಾರ ನಾಗರಿಕ ಸರಬರಾಜು ಇಲಾಖೆ ವತಿಯಿಂದ ಪಡಿತರ ಚೀಟಿಯಲ್ಲಿ ಸಾರ್ವಜನಿಕರ ಹೆಸರು ತಿದ್ದುಪಡಿ ಹಾಗೂ ಹೆಸರು ಡಿಲಿಟ್ ಮಾಡಲು ಕಲ್ಪಿಸಿರುವ ಅವಕಾಶವನ್ನು ಮುಂದೂಡಬೇಕು ಯಾಕೆಂದರೆ ರಾಜ್ಯಾದ್ಯಂತ ಆಹಾರ ನಾಗರಿಕ ಸರಬರಾಜು ಇಲಾಖೆ ವತಿಯಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿನ ಗ್ರಾಮ ಓನ್ ನಾಗರಿಕ ಸೇವಾ ಕೇಂದ್ರ ಮೂಲಕ ಪಡಿತರ ಚೀಟಿಯಲ್ಲಿನ ಹೆಸರು ತಿದ್ದುಪಡಿ ಮತ್ತು ನೊಂದಣಿ ಮಾಡಲು ಕೇವಲ ಮೂರು ದಿನ ಅವಕಾಶ ಕಲ್ಪಿಸಲಾಗಿದೆ. ಆದರೆ ಗ್ರಾಮ ಒನ್ ನಾಗರಿಕ ಸೇವಾಕೇಂದ್ರದಲ್ಲಿ ಪಡಿತರ ಚೀಟಿಯಲ್ಲಿನ ಹೆಸರು ತಿದ್ದುಪಡಿಗಾಗಿ ಹಳ್ಳಿಗಳಿಂದ ಬಂದಂತಹ ಸಾರ್ವಜನಿಕರು ಮುಗಿ ಬಿದ್ದಿರುತ್ತಾರೆ ಆದರೆ ನಾಗರಿಕ ಸೇವಾ ಕೇಂದ್ರದಲ್ಲಿ ಸರ್ವರ್ ನೇಟವರ್ಕ ಸಮಸ್ಯೆಯಿಂದಾಗಿ ಯಾವುದೇ ಕೆಲಸಗಳು ಆಗದೇ ಸಾರ್ವಜನಿಕರು ಪುನಃ ಮನೆಗೆ ತೆರಳು ಪರಿಸ್ಥಿತಿ ಉಂಟಾಗಿದೆ.
ತಾಲೂಕು ಅಧ್ಯಕ್ಷ ನಂದಣ್ಣ ದೊರೆ ಮಾತನಾಡಿ ಇದಲ್ಲದೇ ಪ್ರತಿ ದಿನಾಲು ಹೊಲ ಗದ್ದೆಗಳಿಗೆ ಹೋಗಿ ದಿನಾಲ ೨೦೦/- ೩೦೦/- ರೂಪಾಯಿಗಳನ್ನು ದುಡಿಯಯ ರೈತಾಪಿ ವರ್ಗವು ದುಡಿಯುವುದನ್ನು ಬಿಟ್ಟು ಗ್ರಾಮ ಓನ್ ನಾಗರಿಕ ಸೇವಾ ಕೇಂದ್ರದ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದ್ದು ಸಾರ್ವಜನಿರಕು ಹೈರಾಣಾಗುತ್ತಿದ್ದಾರೆ. ಹಾಗಾಗಿ ಪಡಿತರ ಚೀಟಿಯ ತಿದ್ದಪಡಿ ಅವಧಿಯನ್ನು ನಿರಂತವಾಗಿ ಮುಂದುವರೆಸಿ ಸಾರ್ವಜನಿಕರಿಗೆಡ ಅನುಕೂಲ ಮಾಡಿಕೊಡಬೇಕೆಂದು ನಮ್ಮ ಸಂಘಟನೆಯ ವತಿಯಿಂದ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಇದೇ ವೇಳೆ ಕ.ರ.ವೇ ಜಿಲ್ಲಾ ಗೌರವಾಧ್ಯಕ್ಷರು ಅಯ್ಯಣ್ಣ ಎಮ್ ಹೂಗಾರ ಯಾದಗಿರಿ ಗೌಡಪ್ಪ ಬಿರಾದಾರ, ಹಣಮಂತ್ರಾಯಗೌಡ ಪಾಟೀಲ್ ಹಳ್ಳಿ ಪರಶುರಾಮ ತಮಶೆಟ್ಟಿ, ಮೌನೇಶ ಬಳೂರಗಿ, ವಿ.ಸಿ. ಹಿರೇಮಠ, ಹುಲಗಪ್ಪ ದೇಸಾಯಿ, ದೇವರಾಜ ಗೌಡಗೇರಿ, ವಿರೇಶ ಬಳೂರಗಿ, ಮುತ್ತು ಬೊಮ್ಮಹಳ್ಳಿ, ಬಿ. ನಾಗಯ್ಯ, ಗುರುಪುತ್ರ, ತಾಯಪ್ಪ ಕಟ್ಟಿಮನಿ, ಅಯ್ಯೂಬ್ ಮಕಾನಂದಾರ, ಸಾಬಣ್ಣ ಬನಹಟ್ಟಿ, ಮರೆಣ್ಣಗೌಡ ಬನಹಟ್ಟಿ ಸೇರಿದಂತೆ ಇತರರು ಸುತ್ತಮುತ್ತಲಿನ ಹಳ್ಳಿಗಳಿಂದ ಆಗಮಿಸಿದ ಮಹಿಳೆಯರು ಹಾಗೂ ಸಾರ್ವಜನಿಕರು ಇದ್ದರು.
ಎಚ್.ಯು.ಎನ್: 1) ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳು ಹುಣಸಗಿ ರವರಿಗೆ ಸಲ್ಲಿಸಲಾಯಿತು.