ಇವತ್ತು ಇಸ್ರೇಲ್‌ಗೆ ಸ್ಟ್ಯಾಂಡ್ ಹಾಕುವ ಕೆಲ ಭಾರತೀಯರಿಗಿರುವುದು ಮುಸ್ಲಿಂ ದ್ವೇಷವಷ್ಟೇ ಎನ್ನುವುದು ಹಗಲಿನಷ್ಟೇ ಸತ್ಯ. ಶತ್ರುವಿನ ಶತ್ರು ಮಿತ್ರ ಎನ್ನುವ ಪಾಲಿಸಿ ಅವರದ್ದು.ಅವರಲ್ಲಿ ಬಹುತೇಕರಿಗೆ ಅರಬ್- ಯಹೂದಿ ಪರಂಪರೆಯಾಗಲೀ, ಇತಿಹಾಸವಾಗಲೀ ಖಂಡಿತಾ ಗೊತ್ತಿಲ್ಲ. ಇಂದು ನಾನು ಕೆಲವು ಹುಂಬರ ವಾದಗಳನ್ನೂ ನೋಡಿದೆ. ಇಸ್ಲಾಮ್ ಧರ್ಮ ಹುಟ್ಟಿದ್ದು ಸಾವಿರದ ನಾಲ್ಕುನೂರು ವರ್ಷಗಳ ಹಿಂದಷ್ಟೇ. ಯಹೂದಿಗಳದ್ದು ಮೂರೂವರೆ ಸಾವಿರ ವರ್ಷಗಳಷ್ಟು ಹಿಂದಿನ ಪರಂಪರೆ.( ಇಸ್ಲಾಮ್ ಪ್ರವಾದಿವರ್ಯರ ಜನನಕ್ಕಿಂತಲೂ ಹಿಂದೆಯೇ ಇತ್ತು. ಅದರ ರೂಪ ಮಾತ್ರ ಬೇರೆ ಇತ್ತು. ಅದೊಂದು ಬೇರೆಯೇ ಚರ್ಚೆ)
ಪ್ಯಾಲೆಸ್ತೀನ್ ಮತ್ತು ಇಸ್ರೇಲಿಗರದ್ದು ಧಾರ್ಮಿಕ ಕಲಹ ಖಂಡಿತಾ ಅಲ್ಲ. ಅದು ಆ ನೆಲದ ಮೇಲಿನ ಹಕ್ಕು ಸ್ಥಾಪನೆಗಾಗಿ ನಡೆಯುತ್ತಿರುವ ಜಗಳ. ಪ್ರವಾದಿವರ್ಯರ ಕಾಲಕ್ಕಿಂತಲೂ ಮುಂಚೆ ಇಸ್ಲಾಮ್ ಇತ್ತೆನ್ನುವ ವಾದವನ್ನು ಬದಿಗಿಟ್ಟೇ ನೋಡೋಣ.ಇಸ್ಲಾಮ್ ಎನ್ನುವುದು ಒಂದು ಧರ್ಮದ ಹೆಸರು. ಅರಬ್ ಎನ್ನುವುದು ಒಂದು ಜನಾಂಗದ ಹೆಸರು.ಪ್ಯಾಲೆಸ್ತೀನಿಯರಾಗಲೀ, ಬೇರೆ ಯಾರೇ ಆಗಲೀ ಅದನ್ನು ಅರಬರ ನೆಲ ಎನ್ನುತ್ತಾರೆಯೇ ಹೊರತು,_ಇಸ್ಲಾಮಿನ ನೆಲ ಎಂದು ವಾದಿಸುತ್ತಿರುವುದಲ್ಲ.ಅರಬ್ಬರೆಂದರೆ ಸಹಜವಾಗಿಯೇ ಇಸ್ಲಾಮ್ ಧರ್ಮೀಯರು.
ಒಂದೊಮ್ಮೆ ಅಮೆರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್ ಮುಸ್ಲಿಮರನ್ನು ಮತ್ತು ಯಹೂದ್ಯರನ್ನು ಕಸಿನ್ಸ್ ಎಂದಿದ್ದರು. ಇದು ತಮಾಷೆಗೆ ಅಂದಿದ್ದಲ್ಲ. ಚಾರಿತ್ರಿಕವಾಗಿ ಇದು ಸತ್ಯವೂ ಹೌದು. ಇದನ್ನರಿಯಬೇಕಾದರೆ ಪರಂಪರೆಯನ್ನರಿಯುವುದು ಅತೀ ಅಗತ್ಯ.
ಪ್ರವಾದಿ ಇಬ್ರಾಹಿಂ(ಅ) ಅವರನ್ನು ಕ್ರೈಸ್ತರು ಅಬ್ರಹಾಂ ಎನ್ನುತ್ತಾರೆ. ಈ ಬ್ರಾಹ್ಮಿಣ್ ಎಂಬ ಪದ ಅಬ್ರಹಾಂನಿಂದಲೇ ಹುಟ್ಟಿದ್ದು. ಭಾರತದ ಬ್ರಾಹ್ಮಣರ ಮೂಲ ಮಧ್ಯಪ್ರಾಚ್ಯ ಎನ್ನುವುದು ಇದೇ ಆಧಾರದಲ್ಲಿ.
ಇಬ್ರಾಹಿಂ (ಅ) ರ ಇಬ್ಬರು ಪುತ್ರರ ಪರಂಪರೆಯವರಾಗಿದ್ದಾರೆ ಮುಸ್ಲಿಮರು ಮತ್ತು ಯಹೂದ್ಯರು.ಇಸ್ಮಾಯಿಲ್ (ಅ)ರ ಪರಂಪರೆಯಾಗಿದೆ ಪ್ರವಾದಿ ಮುಹಮ್ಮದ್ (ಸ)ರ ಪರಂಪರೆ. ಇಸ್‌ಹಾಕ್ (ಅ)ರ ಪರಂಪರೆಯ ಜನಾಂಗ ಯಹೂದಿಗಳು.ಯಹೂದಿಗಳೂ ಮುಸ್ಲಿಮರಂತೆಯೇ ಏಕ ದೇವಾರಾಧಕರು. ನಾವು ಮುಸ್ಲಿಮರೇನು ಗಂಡು ಮಕ್ಕಳಿಗೆ ಸುನ್ನತಿ (Circumcision) ಮಾಡಿಸುತ್ತೇವೋ ಇದು ಪ್ರವಾದಿ ಇಬ್ರಾಹಿಂ (ಅ)ರ ಪರಂಪರೆ.ಮುಸ್ಲಿಮರಿಗೆ ಅದು ಇಸ್ಮಾಯಿಲ್ (ಅ)ರ ಮೂಲಕ ಬಂದಿದೆ. ಯಹೂದಿಗಳೂ ಮುಸ್ಲಿಮರಂತೆಯೇ ಸುನ್ನತಿ ಮಾಡಿಸ್ತಾರೆ. ಅವರಿಗದು ಇಬ್ರಾಹಿಂ (ಅ)ರ ಇನ್ನೋರ್ವ ಪುತ್ರ ಇಸ್‌ಹಾಕ್ (ಅ) ರ ಪರಂಪರೆಯಿಂದ ಬಂದಿದ್ದು. ಮುಸ್ಲಿಮರಂತೆಯೇ ಯಹೂದಿಗಳೂ ಹಂದಿ ಮಾಂಸವನ್ನು ತಿನ್ನುವುದಿಲ್ಲ. ಮುಸ್ಲಿಮರಂತೆಯೇ ಯಹೂದಿಗಳೂ ಮಾಂಸದ ಪ್ರಾಣಿಯನ್ನು ದ್ಸಬಹ್ ( ಹಲಾಲ್) ಮಾಡುತ್ತಾರೆ.
ಪ್ರವಾದಿ ಮುಹಮ್ಮದ್ ( ಸ)ರ ಆಗಮನದ ಕುರಿತಂತೆ ಯಹೂದಿಗಳ ಧರ್ಮಗ್ರಂಥ ತೋರಾದಲ್ಲಿಯೂ, ಕ್ರೈಸ್ತರ ಧರ್ಮಗ್ರಂಥ ಬೈಬಲ್‌ನಲ್ಲಿಯೂ ಭವಿಷ್ಯವಿದೆ. ತೋರಾವನ್ನು ನಾವು ತೌರಾತ್ ಎಂದೂ, ಬೈಬಲನ್ನು ನಾವು ಇಂಜೀಲ್ ಎಂದೂ ಹೇಳುತ್ತೇವೆ.
ಬೈಬಲ್‌ನಲ್ಲಿ ಏಸು ಕ್ರಿಸ್ತರ ನಂತರ ಒಂದು ಪ್ರವಾದಿ ಬರಲಿದ್ದಾರೆ.ಅವರು ಅಂತಿಮ ಪ್ರವಾದಿ ಎಂದೂ ಭವಿಷ್ಯವಿತ್ತು. ಪ್ರವಾದಿವರ್ಯರ ಜನನಕ್ಕಿಂತ ಮುಂಚಿನ ಕ್ರೈಸ್ತ ಮತ್ತು ಯಹೂದಿ ಧರ್ಮಗುರುಗಳು ಪ್ರವಾದಿ ಒಬ್ಬರ ನಿರೀಕ್ಷೆಯಲ್ಲಿದ್ದರು ಎನ್ನುವುದಕ್ಕೆ ಇತಿಹಾಸದಲ್ಲಿ ಧಾರಾಳ ಸಾಕ್ಷ್ಯಗಳಿವೆ. ಪ್ರವಾದಿವರ್ಯರ ಪತ್ನಿ ಖದೀಜಾರ ಕುಟುಂಬದಲ್ಲಿ ಕೆಲವು ಮಂದಿ ಕ್ರೈಸ್ತರಿದ್ದರು. ಪ್ರವಾದಿವರ್ಯರು ಬಾಲಕರಿದ್ದಾಗ ಯಸ್ರಿಬ್( ಮದೀನಾದ) ಕ್ರೈಸ್ತ ಸನ್ಯಾಸಿಗಳು ಬಾಲಕನ ಜೀವಕ್ಕೆ ಅಪಾಯವಿದೆ ಎಂದು ತಾಯಿ ಆಮಿನಾ ಬೀಬಿಯವರಿಗೆ ಎಚ್ಚರಿಕೆ ಕೊಟ್ಟಿದ್ದರು.ಅವರನ್ನು ಸಂರಕ್ಷಿಸಿ ಎಂದೂ ಹಿತವಚನ ನೀಡಿದ್ದರು ಎನ್ನುವುದಕ್ಕೆ ಐತಿಹಾಸಿಕ ಸಾಕ್ಷ್ಯಗಳಿವೆ.
ಮಕ್ಕಾ ಮತ್ತು ಯಸ್ರಿಬ್‌ನ ಯಹೂದಿಗಳಿಗೂ ಪ್ರವಾದಿವರ್ಯರು ಅಂತಿಮ ಪ್ರವಾದಿ ಎಂದು ಗೊತ್ತಿತ್ತು. ಅವರ ನಿರೀಕ್ಷೆಯೇನಿತ್ತೆಂದರೆ ಅಂತಿಮ ಪ್ರವಾದಿ ತಮ್ಮ ಜನಾಂಗದಲ್ಲಿ ಹುಟ್ಟುವುದೆಂದು. ಅವರು ಅರಬ್ ಜನಾಂಗದಲ್ಲಿ ಹುಟ್ಟಿದ ಕಾರಣಕ್ಕೆ ಅವರು ಪ್ರವಾದಿ ಮುಹಮ್ಮದ್ (ಸ)ರನ್ನು ನಿರಾಕರಿಸುತ್ತಾರೆ.ಯಹೂದಿಯರಿಗೆ ತಮ್ಮದು ಶ್ರೇಷ್ಠ ರಕ್ತವೆಂಬ ಅಹಂಕಾರವಿದೆ. ಆದುದರಿಂದಲೇ ಅವರಲ್ಲಿ ವರ್ಣ ಸಂಕರವಾಗಿಲ್ಲ ಮತ್ತು ಆ ಸಮುದಾಯ ಬೆಳೆದಿಲ್ಲ.ಇಸ್ಲಾಮಿಗೆ ಯಾರು ಬೇಕಾದರೂ ಬರಬಹುದು.ಯಹೂದಿ ಧರ್ಮಕ್ಕೆ ಅವರು ಯಾರನ್ನೂ ಸೇರಿಸಿಕೊಳ್ಳುವುದಿಲ್ಲ. ಪ್ರವಾದಿ ಮುಹಮ್ಮದರಾದರೋ ತನ್ನ ವಿದಾಯ ಭಾಷಣದಲ್ಲಿ” ರಕ್ತ ಮತ್ತು ಕುಲ ಆಧಾರಿತ ಶ್ರೇಷ್ಟತೆಯನ್ನು ನಾನು ನನ್ನ ಕಾಲಲ್ಲಿ ತುಳಿದಿದ್ದೇನೆ” ಎಂದು ಅಸಮಾನತೆಯ ವಿರುದ್ಧ ಅಂತಿಮ ತೀರ್ಪು ನೀಡಿದ್ದಾರೆ.
ಇವಿಷ್ಟು ಮುಸ್ಲಿಂ ಮತ್ತು ಯಹೂದಿಗಳ ಪರಂಪರೆಯ ಸೂಜಿ ಕಣ್ಣೋಟ.
ಯಹೂದಿಗಳು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಾ ಹರಿಹಂಚಿ ಹೋದರು.ಒಂದು ಚಿಕ್ಕ ಸಮುದಾಯವಾದುದರಿಂದ ಅವರಿಗೆ ಅವರದ್ದೇ ನೆಲವೆಂಬುವುದಿರಲಿಲ್ಲ.ಹಿಟ್ಲರ್ ತನ್ನ ಆತ್ಮ ಚರಿತ್ರೆ ಮೈನ್ ಕೆಂಫ್‌ನಲ್ಲಿ ಯಹೂದಿಗಳ ಮಾರಣ ಹೋಮಕ್ಕೆ ನೀಡುವ ಕಾರಣವೂ ಯಹೂದಿಗಳ ಕಬಳಿಕೆಯ ಬುದ್ಧಿಯೆನ್ನುತ್ತಾನೆ.ಹಿಟ್ಲರನಿಗೆ ಶುದ್ಧ ರಕ್ತದ ಹುಚ್ಚು ಹಿಡಿಸಿದ್ದೇ ಯಹೂದ್ಯರೆಂದರೆ ತಪ್ಪಾಗದು.
“ನಾನು ಎಳೆಯ ಬಾಲಕನಾಗಿದ್ದಾಗ ಅವರು ಯಹೂದಿಗಳು ನಮ್ಮ ಹಳ್ಳಿಗಳಿಗೆ ಬಟ್ಟೆ ವ್ಯಾಪಾರ, ಪಾತ್ರೆ ವ್ಯಾಪಾರ, ತರಕಾರಿ ವ್ಯಾಪಾರ, ಮೊಟ್ಟೆ ವ್ಯಾಪಾರ ಎಂದೆಲ್ಲಾ ಬರುತ್ತಿದ್ದರು. ಅವರು ನಮ್ಮ ಜನರಿಗೆ ಈ ಎಲ್ಲಾ ವಸ್ತುಗಳನ್ನು ಸಾಲ ಕೊಡುತ್ತಿದ್ದರು.ಸಾಲ ಮರುಪಾವತಿಯಲ್ಲಿ ಬಡ್ಡಿಯನ್ನೂ ಸೇರಿಸಿ ವಸೂಲಿ ಮಾಡುತ್ತಿದ್ದರು. ಹೀಗೆ ನಮ್ಮ ಜನರ ವಿಶ್ವಾಸ ಗಳಿಸಿದರು.ನಮ್ಮ ಜನರ ಆರ್ಥಿಕ ಸ್ಥಿತಿಯನ್ನು ಅರಿತು ಅವರಿಗೆ ಬಡ್ಡಿಗೆ ದುಡ್ಡು ಕೊಡತೊಡಗಿದರು. ಆಗ ಅವರ ಜಮೀನನ್ನು ಅಡ ಪಡಕೊಳ್ಳುತ್ತಿದ್ದರು.
ಬಡ್ಡಿಯ ಮೇಲೆ ಬಡ್ಡಿ, ಚಕ್ರ ಬಡ್ಡಿ ಹಾಕಿ ನಮ್ಮ ಜನರನ್ನು ಅವರು ಕಂಗಾಲು ಮಾಡಿದರು.ಕೊನೆಗೆ ಸಾಲ ಮರು ಪಾವತಿ ಮಾಡಲಾಗದೇ ನಮ್ಮ ಜನ ತೋಟ,ಜಮೀನು,ಮನೆ, ಮಠ ಎಲ್ಲಾ ಕಳೆದುಕೊಂಡರು. ಹಾಗೆ ಬಡ್ಡಿಯ ಮೂಲಕವೇ ಕಬಳಿಸಿದ ನಮ್ಮ ಜನರ ಸ್ವತ್ತುಗಳಿಗೆ ಅವರು ಮಾಲೀಕರಾದರು,ನಮ್ಮ ಜನ ಭಿಕಾರಿಯಾದರು.. ಇದನ್ನೆಲ್ಲಾ ನೋಡುತ್ತಾ ಬೆಳೆದ ನನ್ನೊಳಗೆ ಯಹೂದಿಗಳ ಮೇಲೆ ಅಸ್ಸೀಮ ದ್ವೇಷ ಬೆಳೆಯುತ್ತಾ ಹೋಯಿತು….” ಎಂದು ಅಡಾಲ್ಫ್ ಹಿಟ್ಲರ್ ತನ್ನ ಆತ್ಮ ಚರಿತ್ರೆಯಲ್ಲಿ ಬರೆದುಕೊಂಡಿದ್ದಾನೆ.
ಪ್ಯಾಲೆಸ್ತೀನ್ ವಿಷಯದಲ್ಲೂ ಈ ಯಹೂದಿಗಳು ಮಾಡಿದ್ದು ಹಾಗೆಯೇ..ಆದರೆ ಇಲ್ಲಿ ಬಡ್ಡಿ ಕಾರಣವಲ್ಲ. ಆಶ್ರಯ ಕೊಟ್ಟ ಅರಬರನ್ನು ಅವರ ನೆಲದಲ್ಲಿ ನಿರಾಶ್ರಿತರನ್ನಾಗಿ ಮಾಡಿದರು. ಅವರ ಮನೆಯಿಂದ ಅವರನ್ನು ಬಲವಂತವಾಗಿ ಹೊರದಬ್ಬಿದರು. ಅವರದೇ ನೆಲದಲ್ಲಿ ಅವರನ್ನು ನಿರಾಶ್ರಿತರನ್ನಾಗಿ ಮಾಡಿದರು.ಭಾರತವನ್ನು ಹೇಗೆ ಬ್ರಿಟಿಷರು ತಮ್ಮ ಕೈವಶ ಮಾಡಿಕೊಂಡರೋ ಹಾಗೆಯೇ ಯಹೂದಿಗಳು ಫ್ಯಾಲೆಸ್ತೀನಿನ ನೆಲವನ್ನು ತಮ್ಮ ಕೈ ವಶ ಮಾಡಿಕೊಂಡರು.ಇದರಿಂದ ರೊಚ್ಚಿಗೆದ್ದ ಅರಬರು ತಮ್ಮ ಸ್ವಂತ ನೆಲದಲ್ಲಿ ತಮ್ಮದೇ ಅಸ್ತಿತ್ವಕ್ಕಾಗಿ ಮಾಡುತ್ತಿರುವ ಹೋರಾಟವೇ ಪ್ಯಾಲೆಸ್ತೀನಿಯನ್ನರು ಮಾಡುತ್ತಿರುವ ಹೋರಾಟ.ಭಾರತ ಸ್ವಾತಂತ್ರ್ಯಗೊಂಡ ಮರುವರ್ಷ ಇಸ್ರೇಲ್ ಎಂಬ ಅಕ್ರಮ ರಾಷ್ಟ್ರ ಹುಟ್ಟಿಕೊಂಡಿತು. ಅದಾಗಿ ಸುಮಾರು 44 ವರ್ಷಗಳ ಕಾಲ ಎಂದರೆ 1992ರ ವರೆಗೆ ಭಾರತ ಆ ಅಕ್ರಮ ರಾಷ್ಟ್ರದೊಂದಿಗೆ ಸಂಬಂಧವನ್ನೇ ಬೆಳೆಸಲಿಲ್ಲ. 1992ರಲ್ಲಿ ಸರ್ಕಾರದ ಮುಖವಾಡ ಹೊತ್ತ ಬಲಪಂಥೀಯ ಪ್ರಧಾನಿ ನರಸಿಂಹರಾವ್ ಮೊದಲ ಬಾರಿಗೆ ಇಸ್ರೇಲ್ ಎಂಬ ಅಕ್ರಮ ದೇಶದೊಂದಿಗೆ ಸಂಬಂಧ ಬೆಳೆಸಿದ. ಇದು ಭಾರತದ ಕಡೆಯಿಂದ ಇಸ್ರೇಲ್‌ಗೆ ಸಿಕ್ಕ ಮೊದಲ ಅಂಗೀಕಾರ. ಅದಾಗ್ಯೂ ನರಸಿಂಹರಾವ್ ಇಸ್ರೇಲ್‌ಗೆ ಭೇಟಿ ಕೊಟ್ಟಿರಲಿಲ್ಲ. ಆ ಬಳಿಕ ಬಂದ ದೇವೇಗೌಡರಾಗಲೀ, ಗುಜ್ರಾಲರಾಗಲೀ ಇಸ್ರೇಲ್ ಬಗ್ಗೆ ಯಾವುದೇ ರೀತಿಯ ಒಲವು ತೋರಲಿಲ್ಲ. ನಂತರ ಬಂದ ವಾಜಪೇಯಿಯವರು ಇಸ್ರೇಲ್ ಅರಬರ ನೆಲವನ್ನು ಅಕ್ರಮವಾಗಿ ಕಬಳಿಸಿದೆ ಮತ್ತು ಕೂಡಲೇ ಅದನ್ನು ವಾರಸುದಾರರಾದ ಅರಬರಿಗೆ ಬಿಟ್ಟು ಕೊಡಬೇಕೆಂದು ಬಹಿರಂಗವಾಗಿ ಹೇಳಿದ್ದರು. ಮಾತ್ರವಲ್ಲದೇ ಇಂದಿರಾ ಗಾಂಧಿಯವರು ಪ್ಯಾಲೆಸ್ತೀನಿನ ನಾಯಕ ಯಾಸರ್ ಅರಾಫತ್‌ರೊಂದಿಗೆ ಸ್ನೇಹ ಸಂಬಂಧ ಇರಿಸಿಕೊಂಡಿದ್ದರು. ನಂತರ ವಾಜಪೇಯಿ ಕಾಲದಲ್ಲಿ ಉಪಪ್ರಧಾನಿ ಆಗಿದ್ದ ಎಲ್.ಕೆ.ಅಡ್ವಾಣಿ ಇಸ್ರೇಲ್‌ಗೆ ಭೇಟಿ ಕೊಟ್ಟರು. ಅದು ಭಾರತದ ಪ್ರಮುಖ ಆಡಳಿತಾತ್ಮಕ ಹುದ್ದೆ ಹೊಂದಿದ ವ್ಯಕ್ತಿ ಇಸ್ರೇಲ್‌ಗೆ ನೀಡಿದ ಮೊದಲ ಭೇಟಿ. ಅದಾಗ್ಯೂ ವಾಜಪೇಯಿ ಪ್ಯಾಲೆಸ್ತೀನನ್ನು ಭಾರತದ ಸಾಂಪ್ರದಾಯಿಕ ಗೆಳೆಯ (Traditional friend) ಎಂದೇ ಘೋಷಿಸಿದ್ದರು. ಆ ನಂತರ ಬಂದ ಮನಮೋಹನ್ ಸಿಂಗ್ ಕೂಡಾ ಇಸ್ರೇಲಿನೊಂದಿಗೆ ಗೆಳೆತನ ಮಾಡಲಿಲ್ಲ. ಆ ಬಳಿಕ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಇಸ್ರೇಲ್‌ಗೆ ಭೇಟಿ ನೀಡಿದರು. ಮಾತ್ರವಲ್ಲ ಸ್ವತಂತ್ರ ಭಾರತದ ಆ ವರೆಗಿನ “ದುರ್ಬಲರ ಪರ ನಿಲ್ಲುವ ಪರಂಪರೆ”ಯನ್ನು ಮುರಿದರು.
ಇಸ್ರೇಲ್‌ಗೆ ಈಗ ಅಮೆರಿಕಾದಂತಹ ಅಮೆರಿಕಾ ಬೃಹತ್ ಮೊತ್ತದ ನೆರವನ್ನು ಘೋಷಿಸಿದೆ. ಅದಕ್ಕೆಲ್ಲ ಪ್ಯಾಲೆಸ್ತೀನಿನ ಜನ ತಲೆ ಕೆಡಿಸಿಕೊಂಡವರೇ ಅಲ್ಲ. ಹೋರಾಟವೆಂಬುವುದು ಅವರಿಗೆ ಅಳಿವು ಉಳಿವಿನ ಪ್ರಶ್ನೆ. ಯಾರು ಬೆಂಬಲ ಕೊಟ್ಟರೂ ಕೊಡದಿದ್ದರೂ ಪ್ಯಾಲೆಸ್ತೀನಿನ ವಿಮೋಚನಾ ಹೋರಾಟಗಾರರಿಗೆ ಅದರಿಂದ ಯಾವ ವ್ಯತ್ಯಾಸವೂ ಆಗದು ಅನಿಸುತ್ತೆ.
ಕೊನೆ ಮಾತು – ಒಟ್ಟಿನಲ್ಲಿ ಜಗತ್ತಿನ ಈ ಯುದ್ಧಗಳು ಯಾರಿಗೂ ಒಳಿತು ಮಾಡುವುದಿಲ್ಲ ಅನ್ನೋದನ್ನು ಅರಿತುಕೊಂಡು ನಡೆಯಬೇಕು ಈ ಜಗತ್ತು.
~ಇಸ್ಮತ್ ಪಜೀರ್