ಹುಣಸಗಿ: ಅಯೋಧ್ಯಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕಾರ್ಯ ನಡೆಯುತ್ತಿರುವ ಪ್ರಯುಕ್ತ ರಾಜ್ಯದಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ಶೌರ್ಯ ದಿವಸವನ್ನಾಗಿ ಆಚರಿಸಲಾಗುತ್ತಿದೆ ಎಂದು ವಿಶ್ವ ಹಿಂದು ಪರಿಷತ್‌ನ ಜಿಲ್ಲಾ ಸೇವಾ ಪ್ರಮುಖ ಬಸವರಾಜ ವೈಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಶೌರ್ಯ ಜಾಗರಣ ಯಾತ್ರೆಯ ಕಾರ್ಯಕ್ರಮದ ಕುರಿತು ಮಾತನಾಡಿ ಅಂದು ಪಟ್ಟಣದ ಒಳಗ ಅಗಸಿಯಲ್ಲಿರುವ ಗಜಾನನ ಕಟ್ಟೆಯಲ್ಲಿ ಬೃಹತ್ ಶೌರ್ಯ ಜಾಗರಣಾ ಯಾತ್ರೆಯ ಕುರಿತು ಸಮಾರಂಭ ನಡೆಯಲ್ಲಿದ್ದು ಈ ಒಂದು ಸಭೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜೇಂದ್ರ ಗುತ್ತೇದಾರ ಮುಖ್ಯ ಭಾಷಣ ಮಾಡಲಿದ್ದು ಅಯೋಧ್ಯ ರಾಮ ಮಂದಿರದ ಪ್ರಾಣ ಪತಿಷ್ಠಾಪನಾ ಕಾರ್ಯಕ್ರಮ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಿದ್ದು ರಾಮಮಂದಿರ ನಿರ್ಮಾಣಕ್ಕಾಗಿ ಈ ಹಿಂದೆ ನಡೆದ ವಿವಿಧ ಹಂತದ ಹೋರಾಟ, ಅದರಲ್ಲಿ ಪಾಲ್ಗೊಂಡು ತಮ್ಮ ಪ್ರಾಣವನ್ನೇ ಕಳೆದುಕೊಂಡ ಅನೇಕ ರಾಮ ಭಕ್ತರ ಕುರಿತು ಮಾತನಾಡಲಿದ್ದಾರೆ ಎಂದು ಹೇಳಿದರು.
ವಿನೋದ ನಾಯಕ ದೊರೆ ಮಾತನಾಡಿ ಅಂದು ಗುರುವಾರ ಅಕ್ಟೋಬರ್-೫ ರಂದು ಪಟ್ಟಣಕ್ಕೆ ಬೀದರ ಜಿಲ್ಲೆಯಿಂದ ಕಲಬುರಗಿ, ಜೇವರ್ಗಿ, ಶಹಾಪೂರ ಹಾಗೂ ಸುರಪುರ ಮಾರ್ಗವಾಗಿ ಶೌರ್ಯ ಜಾಗರಣ ರಥಯಾತ್ರೆಯು ಹುಣಸಗಿ ಪಟ್ಟಣಕ್ಕೆ ಆಗಮಿಸಲಿದ್ದು ಅಂದು ಬೆಳಿಗ್ಗೆ ೯ ಗಂಟೆಯಿಂದ ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಮುಖ್ಯ ಬೀದಿಯ ಮೂಲಕ ಬಸವೇಶ್ವರ ವೃತ್ತದವರೆಗೆ ಭ್ಯವವಾಗಿ ಶೌರ್ಯ ದಿವಸದ ಶೋಭಾ ಯಾತ್ರೆಯು ನಡೆಯಲಿದೆ ಈ ಒಂದು ಯಾತ್ರೆಯಲ್ಲಿ ತಾಲೂಕಿನ ದೇವಾಪೂರ, ಗುಳಬಾಳ, ಕೆಂಭಾವಿ, ಬಲಶೆಟ್ಟಿಹಾಳ, ಮುದನೂರ ಕಂಠಿ, ಶ್ರೀಗಳು ಸೇರಿದಂತೆ ಇತರೆ ಸ್ವಾಮಿಜಿಗಳು ಪಾಲ್ಗೊಳಲಿದ್ದು ಪಟ್ಟಣದ ಒಳ ಅಗಸಿಯಲ್ಲಿರುವ ಗಣೇಶನ ಕಟ್ಟೆಯಲ್ಲಿ ಬೃಹತ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 500 ಕ್ಕೈ ಹೆಚ್ಚು ಹಿಂದೂ ಸಮಾಜದವರು ಸಂಖ್ಯೆಯಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು.
ಈ ವೇಳೆ ಆನಂದ ಬಾರಿಗಿಡದ, ಪ್ರಶಾಂತಸ್ವಾಮಿ ಹಿರೇಮಠ, ಪರಶುರಾಮ ದೇವತ್ಕಲ್, ರಾಕೇಶ ಬಳೂರಗಿ, ವಿನಯ ಜೋಶಿ, ಗುರಣ್ಣ ಮಡಿವಾಳರ, ಮಂಜುನಾಥ ಗುಡಿಹಾಳ ಸೇರಿದಂತೆ ಇತರರು ಇದ್ದರು.