ದಾವಣಗೆರೆ:ದಾವಣಗೆರೆಯು ಐತಿಹಾಸಿಕ,ಆರ್ಥಿಕ, ಶೈಕ್ಷಣಿಕ, ಸಾಮಾಜಿಕ,ಔದ್ಯೋಗಿಕ ಮತ್ತು ರಾಜಕೀಯವಾಗಿಯೂ ಕೂಡಾ ರಾಜ್ಯ,ಅಂತರ್ ರಾಜ್ಯಗಳಲ್ಲಷ್ಟೇ ಅಲ್ಲದೆ ಅಂತರ್ ರಾಷ್ಟ್ರ ಮಟ್ಟದಲ್ಲಿಯೂ ಕೂಡಾ ಘಮಗಮಿಸುತ್ತಿರುವ ಸುಗಂಧದ ಸುವಾಸನೆಯಂತಿದೆ.
ರಾಜಕೀಯವಾಗಿಯೂ ಕೂಡಾ ಹಿಂದಿನ ದಿನಮಾನಗಳಿಂದಲೂ ಅತ್ಯುತ್ತಮ ಸರಳ ಸಜ್ಜನ,ಜನಪರವಾದ ಹೋರಾಟಮನೋಭಾವದ ಪ್ರಗತಿಪರ ಚಿಂತಕರನ್ನೇ ಜನಪ್ರತಿನಿಧಿಗಳನ್ನು ಆಯ್ಕೆಮಾಡುತ್ತಾ ಅಗ್ರಗಣ್ಯನಾಯಕರನ್ನಾಸಿಗಿದ್ದೂ ವಿಶೇಷವೆ. ಎಂಭತ್ತರ ದಶಕದಲ್ಲಿ ದಾವಣಗೆರೆಯ ಪ್ರಮುಖರಾಜಕಾರಣಿಗಳಲ್ಲಿ ನನಗೆ ತಿಳಿದ ಮಟ್ಟಿಗೆ ರೆಡ್ ಟೈಗರ್ ಕಾಮ್ರೇಡ್ ಪಂಪಾಪತಿಯವರು ಮತ್ತು ಹಿಂದೆಬಂದರೆ ಒದೆಯದೆ ಮುಂದೆ ಬಂದರೆ ಗುದ್ದದ ತಾಯಿಹೃದಯವಂತಿಕೆ ಸರ್ವರನ್ನೂ ಸಮಾನವಾಗಿ ಗೌರವಿಸುತ್ತ ಸದಾ ಹಸನ್ಮುಖಿ ಸರಳ ಸಜ್ಜನ ವಿದ್ಯಾವಂತ ವಿವಾದರಹಿತ ರಾಜಕಾರಣಿ ಚನ್ನಯ್ಯ ಒಡೆಯರ್ ರವರು,,ಕೆ ಮಲ್ಲಪ್ಪ ನವರು,ನಾಗಮ್ಮಕೇಶವಮೂರ್ತಿಯವರು,ಕೆ.ಶಿವಮೂರ್ತಿ ನಾಯಕ್ ರವರು,ಕೆಜಿ.ಮಹೇಶಪ್ಪನವರು, ಶಾಮನೂರು ಶಿವಶಂಕರಪ್ಪನವರು ,ಹೆಚ್.ಶಿವಪ್ಪನವರು(ಜೆ.ಹೆಚ್.ಪಟೇಲರು ಆಗ ಶಿವಮೊಗ್ಗ ಜಿಲ್ಲೆ)ಮುಂತಾದ ಅನೇಕ ಹಿರಿಯ ಮುತ್ಸದ್ದಿ ಮತ್ತು ಜನಪರ ಚಿಂತನೆಯುಳ್ಳ ಘಟಾನುಘಟಿ ರಾಜಕಾರಣಿಗಳ ಪಟ್ಟಿ ಯಲ್ಲಿರುವ ರಾಜಕಾರಣಿಗಳಲ್ಲಿ ಎರಡನೇ ಹಂತದ ನಾಯಕರನ್ನಾಗಿ ತಮ್ಮ ಶಿಷ್ಯಂದಿರನ್ನು ಬೆಳಸಲು ಪ್ರಯತ್ನಿಸಿದರೆ ಇನ್ನೂ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಜಾತಿ,ಧರ್ಮ,ಸಂಭಂದಗಳ ಒಳಸುಳಿಗೆ ಶಿಲುಕಿ ಕಾಲೆಳೆಯುವ ಕೆಲಸವನ್ನೂ ಮಾಡಿರುವ ಕುರಿತು ಜನಸಾಮಾನ್ಯರ ಮಾತುಗಳಿಂದ ಕೇಳಿಬರುತ್ತಿವೆ.ಅಂಥವುಗಳಲ್ಲಿ ಪ್ರಮುಖವಾದದ್ದೆಂದರೆ ಭ್ರಷ್ಟಾಚಾರ ರಹಿತ,ಸೌಮ್ಯ ಸ್ವಭಾವದ ನಿರ್ಗರ್ವಿ,ಹಸನ್ಮುಖಿ ಸಂಸದ ಚುನಾವಣೆಯಲ್ಲಿ ಹಣ,ಹೆಂಡ,ಜಾತಿ,ಧರ್ಮಗಳ ರಹಿತವಾಗಿ ಶುದ್ಧಹಸ್ತದ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಭಾರಿಸಿ ಸಂಸದರಾದ ಕೀರ್ತಿ ಶ್ರೀ ಚನ್ನಯ್ಯ ಒಡೆಯರ್ ರವರು ಜಯಗಳಿಸಿ ಇಡೀ ದಾವಣಗೆರೆಯ ಉತ್ತಮ ಸಂಸದರೆನಿಕೊಂಡರು.ನಂತರದ ರಾಜಕೀಯ ಬೆಳವಣಿಗೆಗಳು ಬದಲಾಗುತ್ತಾ ಹಣ,ಜಾತಿ,ಹೆಂಡ,ಧರ್ಮಗಳ ಸ್ವಜನಪಕ್ಷಪಾತದ ಚುನಾವಣಾ ಅಕ್ರಮಗಳ ರಾಜಕೀಯ ತಂತ್ರಗಾರಿಕೆಯ ಒಳಸುಳಿಗೆ ಸಿಲುಕಿ  ನಾಲ್ಕನೇಬಾರಿಯ ಚುನಾವಣೆಯಲ್ಲಿ ಸೋಲಿಸಲಾಯಿತು ಎಂದು ಇವತ್ತಿಗೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಚನ್ನಯ್ಯ ಒಡೆಯರ್ ರವರ ಶುದ್ಧ ಹಸ್ತದ  ರಾಜಕಾರಣಿಯ ಹೆಸರು ಇಂದಿನ ಯುವ ಪೀಳಿಗೆಗಳಿಗೂ ಗೊತ್ತಿರುವ ಹೆಸರು.
ರಾಜಕೀಯ ಏಳುಬೀಳುಗಳು ಏನೇ ಇರಲ್ಲಿ ಮೂರು ಬಾರಿ ಸಂಸದರಾದರೂ ಒಂದೇಒಂದು ನಗರದಲ್ಲಿ ಸ್ವಂತ ಮನೆ ಇಲ್ಲದಿರುವುದು ಅವರ ಪ್ರಾಮಾಣಿಕತೆಗೆ ಹಿಡಿದ ಕೈಗನ್ನಡಿ.ಇವತ್ತಿನ ಮರಿರಾಜಕಾರಣಿಗಳ ಐಶಾರಾಮಿ ಜೀವನಶೈಲಿ ನೋಡಿದರೆ ಮೂರುಬಾರಿ ಸಂಸದರು ಒಂದು ಸ್ವಂತಕ್ಕೆ ಮನೆ ಹೊಂದಿಲ್ಲ.
ಇಂಥಾ ಪ್ರಾಮಾಣಿಕ,ಸರಳಸಜ್ಜನ ರಾಜಕಾರಣಿಯ ಕರುಳಿನ ಕುಡಿ ಶ್ರೀ ಶಿವುಕುಮಾರ್ ಒಡೆಯರ್ ಕೂಡಾ ನೂಲಿನಂತೆ ಸೀರೆ ತಾಯಿಯಂತೆ ಮಗಳು ಎನ್ನುವ ಹಾಗೇ ತಂದೆಗೆ ತಕ್ಕ ಮಗನಾಗಿ ಅವರ ಆದರ್ಶಗಳ ಪರಿಪಾಲಕಾರಾಗಿ ಸಮಾಜಕ್ಕೆ ಸತ್ಯ,ಧರ್ಮ,ನ್ಯಾಯ,ನಿಷ್ಠೆಯಿಂದ ಸೇವೆ ಸಲ್ಲಿಸ ಬೇಕೆಂಬ ಮಹಾಶೆಯೊಂದಿಗೆ ತಮ್ಮ ಸಮಾಜಸೇವೆಗೆ ಮುಡಿಪಾಗಿರಲು ಮತ್ತೆ ಚನ್ನಯ್ಯ ಒಡೆಯರ್ ರವರ ಪ್ರಾಮಾಣಿಕ ರಾಜಕಾರಣ ಜೀವಂತಗೊಳಿಸಲು ಈ ಬಾರಿನಡೆಯುವ ಲೋಕಸಭೆ ಚುನಾವಣೆ-2024,ಕ್ಕೆ ದಾವಣಗೆರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ನ್ಯಾಯ,ನಿಷ್ಠೆ, ಪ್ರಾಮಾಣಿಕತೆ ಸಜ್ಜನ ರಾಜಕಾರಣ ಮರುಕಳಿಸಲು ಸಜ್ಜಾಗಿದ್ದಾರೆ ಈಗ ಇಂಥ ಪ್ರಾಮಾಣಿಕ ರಾಜಕಾರಣಿಗಳನ್ನು ಅತ್ಯಗತ್ಯವಾಗಿ ಸಮಾಜ ಬಯಸುತ್ತದೆ.
ದಾವಣಗೆರೆಯ ರಾಜಕಾರಣವೆಂದರೆ ದಾವಣಗೆರೆಯ ಕಾಂಗ್ರೆಸ್ ಹೈಕಮಾಂಡೇ ಅಂತಿಮ ತೀರ್ಮಾನ ಅವರು ಹೇಳಿದವರಿಗೇ ರಾಜ್ಯ ಕೇಂದ್ರ ನಾಯಕರು ಟಿಕೇಟ್ ಕೊಡೋದು ಅದರಲ್ಲಿ ಬೇರೆಮಾತಿಲ್ಲಾ.ಹಾಗಾಗಿ ಬಿಬಿ.ಎಂ.ಪಿ.ಯಲ್ಲಿ ಅಭಿಯಂತರರಾಗಿ ಪ್ರಾಮಾಣಿಕ ಸೇವೆಸಲ್ಲಿಸಿ ನಿವೃತ್ತಿ ಯಾಗಿ ವಿಶ್ರಾಂತಿ ಜೀವನ ನಡೆಸುತಿದ್ದ ಶ್ರೀ ಶಿವುಕುಮಾರ್ ಒಡೆಯರವರನ್ನು ದಾವಣಗೆರೆ ಕಾಂಗ್ರೆಸ್ ಹೈಕಮಾಂಡೇ ಕರೆತಂದಿದೆ ಅದರ ಮೇಲೆ ಅಪವಾದವಂನ್ನು ಹೊತ್ತುಕೊಂಡಿರುವುದರಿಂದ ಅದರಿಂದ ಮುಕ್ತರಾಗಲು ಈ ಬಾರಿ ಲೋಕ ಸಭೆಚುನಾವಣೆಯಲ್ಲಿ ಚನ್ನಯ್ಯ ಒಡೆಯರ್ ರವರ ಪುತ್ರ ಶಿವುಕುಮಾರ್ ಒಡೆಯರ್ ರವರಿಗೆ ಟಿಕೇಟ್ ಕೊಡಿಸಿ ಗೆಲ್ಲಿಸಿ ಅಹಿಂದ ವರ್ಗಕ್ಕೆ ದೊಡ್ಡ ಗಿಫ್ಟ ಕೊಡುವ ಯೋಚನೆಯಲ್ಲಿ ಕಾರ್ಯಗತವಾಗಿರುವ ಎಲ್ಲಸೂಚನೆಗಳೂ ಗೋಚರಿಸುತ್ತಿವೆ.ದಾವಣಗೆರೆ ಕಾಂಗ್ರೆಸ್ ಹೈಕಮಾಂಡ್ಗೂ ಕೂಡಾ ಒಂದು ಸ್ಪಸ್ಟ ಚಿತ್ರಣ ವಿದೆ ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಅಹಿಂದ ವರ್ಗ ಬಹಳ ಸಧೃಡವಾಗಿದೆ ಮುಂದೆ ತಮ್ಮ ರಾಜಕೀಯ ಸಂಘಟನೆಗಾಗಿ ಅಹಿಂದ ಪಾತ್ರ ಬಹುಮುಖ್ಯ ಹಾಗಾಗಿ ಈ ಬಾರಿ ಅಹಿಂದ ವರ್ಗದ ಶ್ರೀ ಶಿವುಕುಮಾರ್ ಒಡೆಯರ್ ರವರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳಿಸಿದರೆ ಮುಂದಿನ ರಾಜಕೀಯ ಭವಿಷ್ಯ ಉತ್ತಮವಾಗಲಿದೆ.ಅಹಿಂದ ಶಕ್ತಿ ಪಕ್ಷಕ್ಕೆ ಬಲನೀಡುತ್ತದೆ ಎಂಬ ಲೆಕ್ಕಾಚಾರಗಳು ದಾವಣಗೆರೆ ಕಾಂಗ್ರೆಸ್ ಪಕ್ಷದಲ್ಲಿದೆ.ಇದಕ್ಕಾಗಿ ಈ ಹಿಂದಿನ ಎರಡು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಶ್ರೀ ಶಿವುಕುಮಾರ್ ಒಡೆಯರ್ ರವರನ್ನು ಕರೆಯಲಾಗಿತ್ತು ಆದರೆ ಅವರು ಸರ್ಕಾರದ ಸೇವೆಯೂಕೂಡಾ ಒಂದು ಜನ ಸೇವೆ ಅದನ್ನು ಅರ್ಧಕ್ಕೆ ಬಿಟ್ಟು ಬರಲು ನಿರಾಕರಿಸಿ ತಾವು ಸರ್ಕಾರದ ಸೇವೆಯನ್ನು ಪೂರ್ಣಗೊಳಿಸಿ ನಿವೃತ್ತಿಯ ನಂತರ  ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ಕೊಟ್ಟಿದ್ದರು ಅದರಂತೆ ಇಂದು ನಮ್ಮನಿಮ್ಮೆಲ್ಲರ ಜೊತೆ ಬಂದು ನಿಂತಿದ್ದಾರೆ.ಚನ್ನಯ್ಯ ಒಡೆಯರ್ ರವರ ಆದರ್ಶಪಾಲನೆಯಲ್ಲಿ ನಡೆಯುವ ಪ್ರಾಮಾಣಿಕ ರಾಜಕಾರಣಿಗಳು ಎಲ್ಲವರ್ಗದ ಸಂಘಸಂಸ್ಥೆಗಳು, ಸಮಾಜ ಬಂದುಗಳು ಅಹಿಂದವರ್ಗಕ್ಕೆ ಶಕ್ತಿ ತುಂಬಲು ಉತ್ಸುಕ ರಾಗಿದ್ದಾರೆ.ಶ್ರೀ ಶಿವುಕುಮಾರ್ ಒಡೆಯರ್ ರವರೂ ಕೂಡಾ ಈ ಗಾಗಲೇ ಕ್ಷೇತ್ರದಾದ್ಯಂತ ಬಿರುಸಿನ ಕಾರ್ಯಚಟುವಟಿಕೆಗಳ ನಡೆಸಿದ್ದಾರೆ.ಬಹುತೇಕ ಎಲ್ಲ ಜಾತಿ,ಧರ್ಮ, ಪಕ್ಷಗಳ ಮುಖಂಡು ಕಾರ್ಯಕರ್ತರನ್ನು ಸಭೆಸಮಾರಂಭಗಳ ಮುಖಾಂತರ ಒಗ್ಗೂಡಿಸಿ ಚುನಾವಣೆಯ ಸಿದ್ಧತೆಗೆ ಚಾಲನೆ ನೀಡಿದ್ದಾರೆ.ಮತ್ತೆ ಮರುಕಳಿಸಲಿದೆ ಸತ್ಯ ಪ್ರಾಮಾಣಿಕ ನಿಸ್ವಾರ್ಥ ರಾಜಕೀಯ ಯುಗ.

LEAVE A REPLY

Please enter your comment!
Please enter your name here