ವಿಜಯನಗರ:, ಬುಧವಾರ ಸಂಜೆ ಗುತ್ತಲ ಪಟ್ಟಣದ ಬಸ್ ನಿಲ್ದಾಣದಲ್ಲಿ ಹೂವಿನಹಡಗಲಿ ತಾಲೂಕು ಕೋಟಿಹಾಳ ಗ್ರಾಮದ ವೀರಮ್ಮ ಗಂಡ ವೀರಯ್ಯ ಎಂಬ ವಯೋವೃದ್ದೆ ಆಯಾತಪ್ಪಿ ಬಿದ್ದ ಪರಿಣಾಮ ವೃದ್ದೆಗೆ ತಲೆಗೆ ಏಟುಬಿದ್ದು ಜೀವನ್ಮರಣದ ಮದ್ಯೆ ಹೋರಾಡುತ್ತಿರುವಾಗ ಗುತ್ತಲ ಪಟ್ಟಣದ ಜನತೆ ಅವಳನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಬಿದ್ದ ಮಹಿಳೆಯನ್ನು ಪಟ್ಟಣದ ಪೌರ ಕಾರ್ಮಿಕ ಹುಚ್ಚಂಗೆಪ್ಪ ರಾಮಣ್ಣನವರ ಇವರು ಕೂಡಲೆ ಹತ್ತಿರದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಮಯದಲ್ಲಿ ವೈದ್ಯರು ವೃದ್ದೆಯ ತಲೆಗೆ ಏಟುಬಿದ್ದು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದನ್ನು ಖಚಿತಪಡಿಸಿ ಕೂಡಲೆ ಹೆಚ್ಚಿನ ಚಿಕಿತ್ಸೆಗೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ.
ಆದರೆ ವೃದ್ದೆಯ ಸಂಬಂದಿಕರಿಲ್ಲದೆ ಹೇಗೆ ಕರೆದುಕೊಂಡು ಹೋಗುವುದು ಎಂದಾಗ ಗುತ್ತಲ ಕನ್ನಡ ಪ್ರಭ ಪತ್ರಿಕೆಯ ವರದಿಗಾರ ನನ್ನ ಸ್ನೇಹಿತ ನನಗೆ ಕರೆಮಾಡಿ ಅವಳ ಬಲಿಯಲ್ಲಿದ್ದ ಚುನಾವಣೆ ಗುರುತಿನ ಚೀಟಿ ಕಳಿಸಿ ಸಂಬಂದಿಕರನ್ನು ಪತ್ತೆಹಚ್ಚುವಂತೆ ಹೇಳಿದ,
ಈವೇಳೆ ನಾನು ಹಾವೇರಿಯಲ್ಲಿ ಸಂಬಂದಿಕರೊಬ್ಬರಿಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ನೋಡಲು ಹೊರಟಿದ್ದೆವು. ಕೂಡಲೆ ಕಾರ್ಯ ಪ್ರವೃತ್ತನಾದ ನಾನು ವೃದ್ದೆಯ ಒಬ್ಬ ಮಗ ಕೊಟ್ರಯ್ಯ ಎಂಬುವವರು ನಮ್ಮ ಹೊಳಲು ಗ್ರಾಮದ ಹನುಮಂತನಗರದಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ಅವರನ್ನು ಪೋನ್ ಮೂಲಕ ಸಂಪರ್ಕಿಸಿದೆ.
ಅಷ್ಟರಲ್ಲಿ ವೃದ್ದೆಯನ್ನು ಆದಷ್ಟು ಬೇಗನೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದ್ದರಿಂದ ಗುತ್ತಲ ಆಸ್ಪತ್ರೆಯ ಸಿಬ್ಬಂದಿ ರಾಜು ನದಾಫ್ ಇವರು ಆಂಬ್ಯು ಲೆನ್ಸ್ ನಲ್ಲಿ ವೃದ್ದೆಯನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಮುಂದಾದ.
ಆದರೆ ಅಜ್ಜಿಯ ರೇಷನ್ ಕಾರ್ಡ್ ಹಾಗೂ ಆಧಾರ ಕಾರ್ಡ್ ಇಲ್ಲದ ಕಾರಣ ಹಾಗೂ ನೋಡಿಕೊಳ್ಳಲು ಸಂಬಂದಿಕರಿಲ್ಲದ ಕಾರಣ ಅಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಕೂಡಲೆ ಅಜ್ಜಿಯ ಸ್ಥಿತಿ ಗಂಭಿರ ಇರುವುದು ಖಚಿತಪಡಿಸಿ ಕೋರಿಕೆಯ ಮೇರೆಗೆ ರಾಜು ಅವಳನ್ನು ದಾಖಲಿಸಿ ಹಿಂತಿರುಗಿದ, ಈವೇಳೆ ಬೇರೆ ಆಸ್ಪತ್ರೆಯಲ್ಲಿ ಸಂಬಂಧಿಕರನ್ನು ನೋಡಲು ಹೋಗಿದ್ದ ನಾನು ಮತ್ತು ನನ್ನ ಕುಟುಂಬ ಕೂಡಲೆ ಜಿಲ್ಲಾ ಆಸ್ಪತ್ರೆಗೆ ತೆರಳಿ ಅಜ್ಜಿಯ ಯೋಗಕ್ಷೇಮ ವಿಚಾರಿಸಿದೆವು. ಅಜ್ಜಿಗೆ ಕೂಡಲೆ ಬ್ರೇನ್ ಸ್ಕ್ಯಾನ್ ಮಾಡಬೇಕು ಇದಕ್ಕಾಗಿ ಅವರ ಆಧಾರ ಕಾರ್ಡ್ ಬೇಕು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದರು.
ಆದರೆ ಅಜ್ಜಿಯ ಹೆಸರಲ್ಲಿ ಯಾವುದೆ ಪಡಿತರ ಚೀಟಿ ಹಾಗೂ ಆಧಾರ ಕಾರ್ಡ್ ಇಲ್ಲದಿರುವುದು ಗೊತ್ತಾಯಿತು. ಈ ವೇಳೆ ಅವಳ ಬಳಿಯಲ್ಲಿದ್ದ ಚುನಾವಣೆ ಗುರುತಿನ ಚೀಟಿ ಆಧಾರರದ ಮೇಲೆ ಸ್ಕ್ಯಾನ್ ಮಾಡುವಂತೆ ನಾನು ಆಸ್ಪತ್ರೆಯ ಸಿಬ್ಬಂಧಿಗೆ ಮನವಿ ಮಾಡಿದೆ. ಅಷ್ಟರಲ್ಲಿ ನಮ್ಮ ಊರು ಹೊಳಲು ಗ್ರಾಮದಿಂದ ಅಜ್ಜಿಯ ಮಗ ಹಾಗೂ ಮೊಮ್ಮಗ ಆಸ್ಪತ್ರೆಗೆ ಬಂದರು. ಅವರನ್ನು ಬಿಟ್ಟು ಊರಿಗೆ ಬರುವಾಗ ಗುತ್ತಲ ಪಟ್ಟಣದಲ್ಲಿ ವೃದ್ದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದ ಪೌರ ಕಾರ್ಮಿಕ ಹುಚ್ಚಂಗೆಪ್ಪ, ತಗೊಳಿ ಸರ್ ಅಜ್ಜಿಯ ಬಳಿ ಈ ಕವರ್ ಇತ್ತು ಇದಲ್ಲಿ ಹಣ ಇದ್ದಕಾರಣ ನನ್ನ ಬಳಿ ಇಟ್ಟುಕೊಂಡಿದ್ದೆ ಆದರೆ ಎಷ್ಟುಹಣ ಇದೆ ಎಂದು ತೆಗೆದಂತು ನೋಡಿಲ್ಲ ಎಂದು ಅಜ್ಜಿಯ ಬಳಿ ಇದ್ದ ಹಣದ ಚೀಲವನ್ನು ನನ್ನ ಕೈಗೆ ನೀಡಿದ. ಈವೇಳೆ ಹಣವನ್ನು ಎಣಿಸಲಾಗಿ ಒಟ್ಟು 4,405 ಹಣ ಇತ್ತು ಇದನ್ನು ನಾನು ಅವರ ಸಂಬಂಧಿಕರಿಗೆ ಮುಟ್ಟಿಸಿದೆ.
ಅಜ್ಜಿ ಈಗ ಹಾವೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾಳೆ. ಗುತ್ತಲ ಜನತೆ ಮಾನವೀಯತೆ ಮರೆದು ಅಜ್ಜಿಯ ನೆರವಿಗೆ ಬಂದದ್ದು ಶ್ಲ್ಯಾಘನೀಯ ಸಂಗತಿ.
ಒಟ್ಟಿನಲ್ಲಿ ಸಮಯ ಪ್ರಜ್ಞೆ ಹಾಗೂ ಮಾನವೀಯತೆ ಮರೆದೆ ಗುತ್ತಲ ಪಟ್ಟದಣ ಜನತೆಗೆ ಧನ್ಯವಾದಗಳು.
ಹಾಗೂ ಅಜ್ಜಿಯ ಬಳಿ ಇದ್ದ ಹಣವನ್ನು ಜೋಪಾನವಾಗಿ ಇಟ್ಟು ಹಿಂದಿರುಗಿಸಿದ ಪೌರ ಕಾರ್ಮಿಕನಿಗೆ ಕೋಟಿ ಕೋಟಿ ನಮನಗಳು.
ಎಲ್ಲರ ಪರಿಶ್ರಮ ಹಾಗೂ ಭಗವಂತನ ಆಶೀರ್ವಾದದಿಂದ ಅಜ್ಜಿಯು ಗುಣಮುಖವಾಗಲಿ ಎನ್ನುವುದು ನನ್ನ ಆಶಯ
(ಹೆಚ್. ಸುಭಾಸಚಂದ್ರ ಸಾಹಿತಿ ಹಾಗೂ ಪತ್ರಕರ್ತರು
ಹೊಳಲು. 9902693845.)