ಮೂಡಲಗಿ:ಸ,05-ಪಟ್ಟಣದ ಶ್ರೀ ಕಲ್ಲೇಶ್ವರ ವೃತ್ತದಲ್ಲಿ ಅರಭಾವಿ ಮಂಡಲ ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು.ನಿಮ್ಮ ಗ್ಯಾರಂಟಿ ಸಹ ನಾವೂ ಸ್ವಾಗತಿಸುತ್ತೇವೆ.ನಮ್ಮ ನಾಡಿನ ಅಕ್ಕ-ತಂಗಿಯರಿಗೆ ಅನುಕೂಲ ಮಾಡಿದ್ದಿರಿ,ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ನೌಕರಿ ಹೋಗುವವರು ಟಿಕೆಟ್ ತಗದರು ಜಾಗ (ಸಿಟ್) ಸಿಗುತಿಲ್ಲ ಇದರ ಬಗ್ಗೆ ಜನರಿಗೆ ಏನೂ ಹೇಳುತ್ತಿರಿ.
ಜನ ವಿರೋಧಿ ಸರ್ಕಾರ ಕಾಂಗ್ರೆಸ್. ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ನೂರು ದಿನದಲ್ಲಿ ರಾಜ್ಯದಲ್ಲಿ 120 ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ರೈತರಿಗೆ ಸಹಕಾರ ಕೋಡುತ್ತಿಲ್ಲ.ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರೆ.ಅವರೆಲ್ಲರು ರೈತರು ಅಲ್ಲ ಅಂತ ಡಿಸಿಎಂ ಡಿ.ಕೆ.ಶಿವಕುಮಾರ ಹೇಳುತ್ತಾರೆ.ಮೊದಲಿಂದಲು ಮೋದಿಯವರು ಐದು ಕೆಜಿ ಅಕ್ಕಿ ಕೋಡುತ್ತಾ ಬಂದಿದೆ.ನೀವು ಹೇಳಿರುವುದು ಹತ್ತು ಕೆಜಿ ಅಕ್ಕಿ ಅಂತ, ಎಲ್ಲಿದ್ದಾವೆ ನಿಮ್ಮ ಹತ್ತು ಕೆಜಿ ಅಕ್ಕಿ ಅಂತ ಪ್ರಜ್ಞಾವಂತ ಜನರು ಕೇಳುತ್ತಿದ್ದಾರೆ.ಸರಿಯಾದ ಸಮಯಕ್ಕೆ ಮಳೆ ಬಾರದೆ ಇರುವುದರಿಂದ ಬಿತ್ತನೆ ಮಾಡಿದ ಬೆಳೆಗೆ ನೀರಿಲ್ಲದೆ ನಾಶವಾಗುತ್ತಿದ್ದಾವೆ.ಡ್ಯಾಂನಲ್ಲಿ ನೀರಿಲ್ಲ,ಸರಿಯಾಗಿ ಕರೆಂಟ್ ಕೋಡುತ್ತಿಲ್ಲ ಹಿಗಾದ್ರೆ ರೈತರು ಬದುಕುವುದು ಹೇಗೆ.ಬಿಜೆಪಿ ಸರ್ಕಾರ ಅನೇಕ ಯೋಜನೆಗಳನ್ನು ವಾಪಸ್ ಪಡೆದಿದ್ದಿರಿ.ನಿಮಗೆ ಬಿಜೆಪಿ ಪಕ್ಷದ ಮೇಲೆ ದ್ವೇಷ ಇರಲಿ,ರೈತರ ಮೇಲೆ ನಿಮ್ಮವಿರೋಧ ಏಕೆ?.ನೂರಾರು ಸಮಸ್ಯೆಗೆ ಸಿಲುಕಿದೆ ಕಾಂಗ್ರೆಸ್ ಸರ್ಕಾರ,ಎಲ್ಲಿ ಹೋದರು ಗ್ಯಾರಂಟಿಯ ಬಗ್ಗೆ ಹೇಳುತ್ತಿರಿ,ಇನ್ನು ಲಕ್ಷಾಂತರ ಮಹಿಳಿಯರಿಗೆ ನಿಮ್ಮ ಭಾಗ್ಯ ಮುಟ್ಟಿಲ್ಲ.ರಾಜ್ಯದಲ್ಲಿ ಸಮಸ್ಯೆ ಮೇಲೆ ಸಮಸ್ಯೆ ಇದೆ.ಅನ್ನದಾತರನ್ನು ಕಡೆಗಣಿಸಬೇಡಿ ಎಂದು ರೈತ ಮೋರ್ಚಾ ಅಧ್ಯಕ್ಷ,ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ ರಾಜ್ಯ ಸರ್ಕಾರಕ್ಕೆ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಆಕ್ರೋಶ ಹೋರ ಹಾಕಿದರು. ತಹಶೀಲ್ದಾರ ಶಿವಾನಂದ ಬಬಲಿ ಹಾಗೂ ಹೆಸ್ಕಾಂ ಅಧಿಕಾರಿ ನಾಗನ್ನವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು..
ಅರಭಾವಿ ಮಂಡಲ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ತಮ್ಮಣ್ಣ ದೇವರ,ಬಿಜೆಪಿ ಮುಖಂಡರಾದ ಪ್ರಕಾಶ ಮಾದರ ಬಸವರಾಜ ಹಿಡಕಲ್, ಶ್ರೀಶೈಲ ಪೂಜೇರಿ, ಡಾ. ಬಿ.ಎಂ ಪಾಲಭಾಂವಿ, ಮಹಾಲಿಂಗ ವಂಟಗೂಡೆ, ಈಶ್ವರ ಮುರಗೋಡ, ಮಲ್ಲಪ್ಪ ನೇಮಗೌಡರ, ಸುರೇಶ ಸಣ್ಣಕ್ಕಿ, ಬಸನಗೌಡ ಪಾಟೀಲ, ಸಿದ್ದಪ್ಪ ಬಿಸಗುಪ್ಪಿ, ಗೌಡಪ್ಪ ಕೊಟಗಿ, ಸುರೇಶ ಈರೇಶನವರ, ಬಸವರಾಜ ನಿಡಗುಂದಿ, ಮಂಡಲ ಪದಾಧಿಕಾರಿಗಳಾದ ಶ್ರೀಕಾಂತ ಕೌಜಲಗಿ, ಬಸವರಾಜ ಗಾಡವಿ, ಸುರೇಶ ಮಠಪತಿ, ಮಹಾದೇವ ಮಸರಗುಪ್ಪಿ, ಪ್ರಭು ಹಿರೇಮಠ, ಅಡಿವೆಪ್ಪ ಕುರಬೇಟ ಸೇರಿದಂತೆ ಇನ್ನು ಅನೇಕ ರೈತ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.